ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಇಪಿಎಸ್ 95 ಪಿಂಚಣಿ ಯೋಜನೆಯ ಕುರಿತು ಸಭೆ
Meeting on EPS 95 Pension Scheme at Sri Gangaparameshwari Community Hall
ಗಂಗಾವತಿ 25: ಇವರಿಗೆ, ಪತ್ರಿಕಾ ಪ್ರಕಟಣೆ ಕೃಪೆಗಾಗಿ ಮಾನ್ಯರೇ, ಈ ಮೂಲಕ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ ದಿನಾಂಕ 26.02.26 ರಂದು ಮರಳಿ ಗ್ರಾಮದ ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಇಪಿಎಸ್ 95 ಪಿಂಚಣಿ ಯೋಜನೆಯ ಕುರಿತು ಸಭೆ ಜರುಗಲಿದೆ ಈ ಸಭೆಯಲ್ಲಿ ಇಪಿಎಸ್ 95 ಕಾರ್ಮಿಕರ ಬೇಡಿಕೆಗಳು ಕನಿಷ್ಠ ರೂ. 75002. ತುಟ್ಟಿ ಭತ್ಯೆ 3. ಉಚಿತ ವೈದ್ಯಕೀಯ ಸೌಲಭ್ಯ 4. ವಿಧವೆಯರಿಗೆ 100ಅ ಪಿಂಚಣಿ 5. ಈ ಯೋಜನೆ ವಂಚಿತರಿಗೆ ಕನಿಷ್ಠ ರೂ.5000 ಪಿಂಚಣಿ.ಈ ಎಲ್ಲಾ ಬೇಡಿಕೆಗಳಿಗಾಗಿ ಇಕಖ 95 ಪಿಂಚಣಿ ಹೆಚ್ಚಳ ಹೋರಾಟ ನಿರಂತರವಾಗಿದ್ದು, ಕೇಂದ್ರದ ಸರಕಾರದ ಮಟ್ಟದಲ್ಲಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಕಂಡು ಬರುತ್ತಿದ್ದರೂ ಕೂಡಾ, ಒಂದು ವೇಳೆ ಈಗಿನ ವಿಳಂಬ ನೀತಿ ಪರಿಸ್ಥಿತಿಯೇ ಮುಂದುವರೆದರೆ,
ಈ ಮೊದಲೇ ನಿರ್ಧರಿಸಿದಂತೆ ದೆಹಲಿಯ ಜಂತರ ಮಂತರ್ ನಲ್ಲಿ ದಿನಾಂಕ 9-3-2026 ರಿಂದ 11-3-2026 ರವರೆಗೆ ನಡೆಯುವ ಬೃಹತ್ ಪ್ರತಿಭಟನೆಯ ಪೂರ್ವಬಾವಿ ಸಭೆಯಾಗಿದೆ.ಈ ಸಭೆಯಲ್ಲಿ ರಾಜ್ಯ ಸಂಘಟಕರಾದ ವೀರಕುಮಾರ ಗಡಾದ, ರಾಜ್ಯ ಕಾರ್ಯಾಧ್ಯಕ್ಷರು, ಅನೀಲ್ ಇನಾಮದಾರ ರಾಜ್ಯ ಐಟಿ ಸಹ ಸಂಚಾಲಕರು, ಚನ್ನಬಸಯ್ಯ ರಾಜ್ಯ ಉಪಾಧ್ಯಕ್ಷರು ಹಾಗೂ ಶ್ಯಾಮೀದ್ ಕುಷ್ಟಗಿ, ಜಿಲ್ಲಾ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಈ ಇಪಿಎಸ್ 95 ಯೋಜನೆಯಲ್ಲಿ ಸಾರಿಗೆ ಇಲಾಖೆ, ಸಹಕಾರ ಇಲಾಖೆ, ಜೀವವಿಮಾ ನಿಗಮದ ನಿವೃತ್ತ ಕಾರ್ಮಿಕರು ಬರಲಿದ್ದು ಅವರಿಗೂ ಕೂಡ ಈ ಸಭೆಗೆ ಬರಲು ಆಮಂತ್ರಣ ನೀಡಲಾಗಿದೆ. ದಯವಿಟ್ಟು ತಾವು ಈ ಸಭೆಗೆ ಆಗಮಿಸಿ ಈ ಸುದ್ದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಮನವಿ ಮಾಡುತ್ತೇನೆ. ಧನ್ಯವಾದಗಳೊಂದಿಗೆ,ತಮ್ಮ ರಮೇಶ್ ಕುಲಕರ್ಣಿ ಮರಳಿ*ನಿವೃತ್ತ ಕಾರ್ಮಿಕ ಗಂಗಾವತಿ ಸಕ್ಕರೆ ಕಾರ್ಖಾನೆ ನಿಯಮಿತ, ಪಗತಿನಗರ ಸಾಕಿನ ಮರಳಿ.
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 