ಕರ್ನಾಟಕ ಜನಸಾಮಾನ್ಯರ ಹಕ್ಕುಗಳ ರಕ್ಷಣೆಗಾಗಿರುವ ಸಂಘಟನೆಯ ಸಭೆ

ಕರ್ನಾಟಕ ಜನಸಾಮಾನ್ಯರ ಹಕ್ಕುಗಳ ರಕ್ಷಣೆಗಾಗಿರುವ ಸಂಘಟನೆಯ ಸಭೆ  Meeting of the organization for the protection of the rights of the common people of Karnataka

ಸಿರುಗುಪ್ಪ 07 : ಕರ್ನಾಟಕ ಜನಸಾಮಾನ್ಯರ ಹಕ್ಕುಗಳ ರಕ್ಷಣೆ ಗಾಗಿರುವ ಸಂಘಟನೆಯ ಸಭೆ ಸಿರುಗುಪ್ಪ  ಜನಸಾಮಾನ್ಯರಿಗೆ ಅವರ ಹಕ್ಕುಗಳನ್ನು ಪರಿಚಯಿಸುವ ಸಮಗ್ರ ಯೋಜನೆ ಬಡವರು ಮತ್ತು ಹಿಂದುಳಿದವರಿಗೆ ನೆರವು ಮತ್ತು ಮಾರ್ಗದರ್ಶನದ ವ್ಯವಸ್ಥೆ ಸಾಮಾಜಿಕ ಕಾರ್ಯಕರ್ತರಿಗೆ ತರಬೇತಿಯ ಕಾರ್ಯಕ್ರಮ ಮರ್ದಿತ ವ್ಯಕ್ತಿಗಳ ಕಾನೂನು ಪರ ಹಕ್ಕುಗಳ ರಕ್ಷಣೆಯ ಪ್ರಯತ್ನ ಅನ್ಯಾಯಗೆ ಒಳಗಾದವರಿಗೆ ಕಾನೂನು ರಕ್ಷಣೆಯ ಪ್ರಯತ್ನ ದೇಶ ಮತ್ತು ಸಮಾಜದಿಂದ ಅನ್ಯಾಯ ಅಕ್ರಮಗಳ ನಿರ್ಮೂಲನಕ್ಕೆ ಪ್ರಯತ್ನ ವನ್ನು ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಬಳ್ಳಾರಿ ಜಿಲ್ಲಾ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್‌ ಎಪಿಸಿಆರ್ ಕರ್ನಾಟಕದ ಜಿಲ್ಲಾ ಅಧ್ಯಕ್ಷರು ಹಿರಿಯ ವಕೀಲರಾದ ಮೊಹಮ್ಮದ್ ಯ್ಯೂಸುಬ್ ಸಾಬ್ ಅವರು ಜನಸಾಮಾನ್ಯರ ಹಕ್ಕುಗಳ ರಕ್ಷಣೆಗಾಗಿರುವ ಸಂಘಟನೆಯ ಕುರಿತು ಸಿರುಗುಪ್ಪ ತಾಲೂಕಿನ ಮುಖ್ಯಸ್ಥರ ಸಭೆಯಲ್ಲಿ ಸಂಘಟನೆಯ ಕುರಿತು ಮಾತನಾಡುತ್ತಿದ್ದರು ಬಳ್ಳಾರಿ ಜಿಲ್ಲೆಯ ಸೈಯದ್ ದಾದಾಪೀರ್ ಅವರು ಮಾತನಾಡಿ ದೇಶದ ಕಾನೂನು ಎಲ್ಲಾ ವರ್ಗದವರಿಗೆ ನ್ಯಾಯ ಪೂರ್ಣ ವ್ಯವಹಾರವನ್ನು ಕಡ್ಡಾಯಗೊಳಿಸಿದೆ ಆದರೂ ಅನೇಕ ಉಪ ಕಾನೂನು ನಿಯಮಗಳು ಸಂವಿಧಾನದ ಸ್ಪೂರ್ತಿಗೆ ವಿರುದ್ಧವಾಗಿವೆ ಮತ್ತು ಜನರ ಹಕ್ಕುಗಳನ್ನು ಸೀಮಿತಗೊಳಿಸುತ್ತದೆ ಜನ ಸಾಮಾನ್ಯರು ಮತ್ತು ಪೊಲೀಸರು ತಮ್ಮ ಹಕ್ಕುಗಳು ಕರ್ತವ್ಯಗಳು ಮತ್ತು ಕಾನೂನುಗಳಿಂದ ಅಜ್ಞಾ ರಾಗಿದ್ದಾರೆ ಪಾರ್ಲಿಮೆಂಟರಿ ಯು ಎಪಿಎ ಯಂತಹ ಅಪ್ರಜಾಸತ್ತಾತ್ಮಕ ಕಾನೂನು ಮಾಡಿದ್ದು ಅದಕ್ಕೆ ಲಕ್ಷಗಟ್ಟಲೆ ಜನರು ಬಲಿಯಾದರು ಅವು ಅವರ ಮಾನವೀಯ ಘನತೆ ಸ್ವಾತಂತ್ರ್ಯ  

ಮತ್ತು ಕೆಲವೊಮ್ಮೆ ಅವರ ಜೀವಗಳನ್ನು ಬಲಿ ತೆಗೆದುಕೊಂಡವು ಭ್ರಷ್ಟಾಚಾರ ಮತ್ತು ಅನರ್ಹತೆಯು ನೌಕರ ಶಾಹಿಯ ಒಟ್ಟು ಧೋರಣೆಯನ್ನು ಪ್ರಭಾವಿತಗೊಳಿಸಿದೆ ಮತ್ತು ಸಾಮಾನ್ಯ ಜನರ ಸಂಕಷ್ಟಗಳನ್ನು ಹೆಚ್ಚಿಸಿದೆ ಹೆಚ್ಚಿನ ಪೊಲೀಸರ ವರ್ತನೆಯು ಹೊಣೆಗೇಡಿತನದಾಗಿರುತ್ತದೆ ರಾಜಕೀಯ ಹಸ್ತಕ್ಷೇಪದಿಂದಲೂ ಅವರ ಸಾಧನೆಯ ಪ್ರಭವಿತ ಗೊಳ್ಳುತ್ತದೆ ಎಲ್ಲಾ ಮೂಲೆಗಳಲ್ಲೂ ಪೊಲೀಸರ ಬರ್ಬರತೆಯ ಘಟನೆಗಳು ಸಾಮಾನ್ಯವಾಗಿವೆ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳು ಬಹಳ ಹೆಚ್ಚಾಗಿವೆ ನ್ಯಾಯ ಪ್ರಕ್ರಿಯೆಯು ಬಹಳ ನಿಧಾನವಾಗಿ ಮತ್ತು ಸಂಕೀರ್ಣವಾಗಿ ನಡೆಯುತ್ತದೆ ಆಡಳಿತ ಕಾನೂನು ಮತ್ತು ಪೊಲೀಸರ ಕೆಲಸ ಕಾರ್ಯಗಳಲ್ಲಿ ರಾಜಕಾರಣಿಗಳ ಅನಗತ್ಯ ಹಸ್ತಕ್ಷೇಪ ಸರ್ಕಾರ ವಿವಿಧ ಸ್ತರಗಳಲ್ಲಿ ಉಚಿತ ಕಾನೂನು ನೆರವು ಒದಗಿಸುತ್ತದೆ ಆದರೆ ಇದರ ಪ್ರಯತ್ನದಲ್ಲಿ ಪ್ರಗತಿಯೇನೂ ಆಗಿಲ್ಲ ಇದನ್ನು ಚುರುಕುಗೊಳಿಸಲು ಸ್ವಯಂಸೇವಾ ಪ್ರಯತ್ನಗಳ ತುರ್ತು ಅಗತ್ಯವಿದೆ ಎಪಿಸಿಆರ್ ನ ಚಟುವಟಿಕೆಗಳು ವಿವರಿಸಿ ಈ ಮೂಲಕ ನಡೆಸಲಾಗುತ್ತಿರುವ ವಿವಿಧ ಯೋಜನೆ ಮತ್ತು ಅಭಿಯಾನಗಳಲ್ಲಿ ಪಾಲ್ಗೊಳ್ಳಿರಿ ಎಂದು ಅವರು ವಿವರಿಸಿ ಮಾತನಾಡುತ್ತಿದ್ದರು ಸಿರುಗುಪ್ಪ ನಗರದ ಈದ್ಗಾ ಮತ್ತು ಖಬರಸ್ಥಾನ್ ಕಮಿಟಿಯ ಸದಸ್ಯರು ಮತ್ತು ಮುಸ್ಲಿಂ ಮುಖಂಡರಾದ ಚಿಟಗಿ ಎಸ್ ಮೊಹಮ್ಮದ್ ಹುಸೇನ್ ಬಾಷಾ ನಿವೃತ್ತಿ ಸಹಾಯಕ ಕೃಷಿ ನಿರ್ದೇಶಕರಾದ ಎನ್ ನಜೀರ್ ಅಹಮದ್ ಹಂಡಿ ಹಾಶೀಮ್ ಮತ್ತಿತರರು ಸಂಘಟನೆಯ ಕುರಿತು ಮಾತನಾಡಿದರು.

ಅಡ್ವಕೇಟ್ ಸಮೀನಾ ಹಾಜಿ ಟಿ ಮೊಹಮ್ಮದ್ ಶಫಿ ಪರ್ವೀನ್ ಎಲೆಕ್ಟ್ರಿಕ್ ಹಾಜಿ ಜಿ ಎ ಕೆ ಬಾಷು ಸಮಾಜ ಸುಧಾರಕ ಹಾಜಿ ಅಬ್ದುಲ್ ನಬಿ ನಗರ ಸಭೆ ಮಾಜಿ ಸದಸ್ಯರು ಹಾಜಿ ಚೌದ್ರಿ ಖಾಜಾ ಸಾಬ್ ಬಳ್ಳಾರಿ ಮುನೀರ್ ಅಹಮದ್ ಖಾನ್ ಬಳ್ಳಾರಿ ನಜೀರುದ್ದೀನ್ ಬಳ್ಳಾರಿ ಲತೀಫ್ ಸಾಬ್ ಸಮಾಜ ಸೇವಕರು ಕಾಂಗ್ರೆಸ್ ಮುಖಂಡರು ಎಸ್ ಮೋದಿನ್ ಸಾಬ್ ಸಮಾಜದ ಮುಖಂಡರು ಗಣ್ಯರು ಇದ್ದರು.