ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ  Measures to resolve the drinking water problem


ಗದಗ 22: ಗದಗ-ಬೆಟಗೇರಿ ನಗರಸಭೆಯ 5ನೇ ವಾರ್ಡ್‌ ವ್ಯಾಪ್ತಿಯ ಕೆಎಚ್ಡಿಸಿ ನೇಹರು ಕಾಲನಿ ಬಡಾವಣೆಯಲ್ಲಿ ಹಲವು ದಿನಗಳಿಂದ ಕುಡಿಯುವ ನೀರಿನ ಸರಬರಾಜಿನಲ್ಲಿ ತೊಂದರೆ ಉಂಟಾಗಿತ್ತು. ಪ್ರಮುಖ ಪೈಪ್ಗೆ ಮೂರು ಇಂಚಿನ ವಾಲ್ವ್‌ ಇಲ್ಲದ ಕಾರಣ ನೀರು ಪೂರೈಕೆಗೆ ಸಮಸ್ಯೆಯಾಗಿತ್ತು.  

ಈ ಸಮಸ್ಯೆಯನ್ನು ಗಮನಿಸಿದ ಗದಗ-ಬೆಟಗೇರಿ ನಗರ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ಉಪಾಧ್ಯಕ್ಷೆ ದ್ರಾಕ್ಷಾಯಣಿ ಹಾಸಲಕರ್ ಅವರು, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಯುವ ನಾಯಕ ಕೃಷ್ಣಗೌಡ ಎಚ್‌. ಪಾಟೀಲ ಅವರಿಗೆ ವಿಷಯ ತಿಳಿಸಿದರು. ತಕ್ಷಣ ಸ್ಪಂದಿಸಿದ ಅವರು ನಗರಸಭೆಯ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಮೂರು ಇಂಚಿನ ವಾಲ್ವ್‌ ಒದಗಿಸುವಂತೆ ಕ್ರಮ ಕೈಗೊಂಡರು.  

ಇದರಿಂದ ಬಡಾವಣೆಯ ನಿವಾಸಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದ್ದು, ಇತ್ತೀಚೆಗಷ್ಟೇ ದುರಸ್ತಿ ಕಾರ್ಯ ಪೂರ್ಣಗೊಂಡಿದೆ.  ಈ ಸಂದರ್ಭದಲ್ಲಿ ಲಕ್ಷ್ಮೀ ಸಕ್ರಿ, ಕಸ್ತೂರಿ ಕೋಣಿ, ಸರಸ್ವತಿ ದೇವರಕೊಂಡಿ, ಪದ್ಮವ್ವ ಬಂಡಾರಿ, ಬಸವರಾಜ ಕೆಂಚಗುಂಡಿ, ವಾಲ್ಮನ್ ರಾಜ್ ಮಂಜುನಾಥ್ ದೊಡ್ಡಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.