ಸಾರ್ಥಕ ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಣೆ : ಗ್ರಾಮಾಭಿವೃದ್ಧಿ, ಸ್ವಾಯತ್ತತೆ ರೂಪಿಸುವ ಮೂಲಕ ಗ್ರಾಮೀಣ ಸಬಲೀಕರಣಕ್ಕೆ ಉತ್ತೇಜನ

ಸಾರ್ಥಕ ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಣೆ : ಗ್ರಾಮಾಭಿವೃದ್ಧಿ, ಸ್ವಾಯತ್ತತೆ ರೂಪಿಸುವ ಮೂಲಕ ಗ್ರಾಮೀಣ ಸಬಲೀಕರಣಕ್ಕೆ ಉತ್ತೇಜನ  Meaningful National Panchayat Raj Day Celebration: Promoting rural empowerment through rural develop

ಲೋಕದರ್ಶನ ವರದಿ  

         ಕೊಪ್ಪಳ  24: ಗ್ರಾಮೀಣ ಜನರಿಗೆ ಆಡಳಿತದಲ್ಲಿ ನೇರ ಪಾಲ್ಗೊಳ್ಳುವ ಅವಕಾಶ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲೇ ಪರಿಹಾರ ಒದಗಿಸಿ ಗ್ರಾಮಾಭಿವೃದ್ಧಿ ಮತ್ತು ಸ್ವಾಯತ್ತತೆ ರೂಪಿಸುವ ಮೂಲಕ ಗ್ರಾಮೀಣ ಸಬಲೀಕರಣಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಲಾದ ವರ್ಣಿತ್ ನೇಗಿ ಅವರು ಹೇಳಿದರು. ಜಿಲ್ಲಾ ಪಂಚಾಯತ್ ಜೆ.ಹೆಚ್‌. ಪಟೇಲ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.  

ಪ್ರಜಾಪ್ರಭುತ್ವ ವಿಕೇಂದ್ರೀಕರಣ ಮತ್ತು ಸ್ಥಳೀಯ ಆಡಳಿತವನ್ನು ಬಲಗೊಳಿಸುವ ನಮ್ಮ ಬದ್ದತೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಾಧಿಸಿರುವ ಗಮನಾರ್ಹ ಪ್ರಗತಿ ಮತ್ತು ಸಾಮರ್ಥ್ಯವನ್ನು ಸಂಭ್ರಮಿಸುವ ದಿನವಾಗಿದೆ. ಭಾರತ ಸಂವಿಧಾನದ 73ನೇ ತಿದ್ದುಪಡಿ 1992 ರನ್ವಯ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಸ್ಥಾನಮಾನವನ್ನು ನೀಡಿದೆ. 1993ರ ಏಪ್ರಿಲ್ 24 ರಂದು 73ನೇ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದು, ಪ್ರತಿ ವರ್ಷ ಏಪ್ರಿಲ್ 24 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಿಸಲಾಗುತ್ತದೆ. ಗ್ರಾಮೀಣ ಜನರಿಗೆ ಆಡಳಿತದಲ್ಲಿ ನೇರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು. 

ಜಿ.ಪಂ ಉಪಕಾರ್ಯದರ್ಶಿಗಳಾದ ಟಿ.ಕೃಷ್ಣಮೂರ್ತಿ ಅವರು ಕಾರ್ಯಕ್ರಮ ಉದ್ದೇಶಿಸಿ ಪ್ರಸ್ತಾವಿಕವಾಗಿ ಮಾತನಾಡಿ, 73ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ದಿನವನ್ನು ಸ್ಮರಿಸುವುದಕ್ಕಾಗಿ ಪ್ರತಿ ವರ್ಷ ಏಪ್ರಿಲ್ 24 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಆಚರಿಸಲಾಗಿತ್ತದೆ. ಈ ತಿದ್ದುಪಡಿಯು ಪಂಚಾಯತಿಗಳಿಗೆ ಸಂವಿಧಾನಾತ್ಮಕ ಸ್ಥಾನಮಾನವನ್ನು ನೀಡಿದ್ದು, ಭಾರತದಲ್ಲಿ ವಿಕೇಂದ್ರೀಕೃತ ಆಡಳಿತ ಪಯಣದಲ್ಲಿ ಮಹತ್ವದ ಮೈಲುಗಲ್ಲಾಗಿದೆ ಎಂದರು. 

ಕೊಪ್ಪಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ ಅವರು ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆ ವೇದಗಳು ಕಾಲದಿಂದಲು ಇದ್ದು, ಇದು ನಿರಂತರ ಬದಲಾಗುತ್ತ ಬಂದಿದೆ. ಅದರಂತೆ ಭಾರತವು ಹಳ್ಳಿಗಳ ದೇಶವಾಗಿದ್ದು, ಗ್ರಾಮಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶ ಸಮಗ್ರ ಅಭಿವೃದ್ಧಿ ಸಾಧಿಸಬಲ್ಲದು. ಈ ನಿಟ್ಟಿನಲ್ಲಿ ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆಗಳು ವಿಶೇಷ ಪಾತ್ರ ವಹಿಸುತ್ತವೆ. ಅಂತಹದೇ ಒಂದು ಪ್ರಮುಖ ವ್ಯವಸ್ಥೆಯಾದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಗೌರವಿಸುವ ಉದ್ದೇಶದಿಂದ ಪ್ರತಿ ವರ್ಷ ಏಪ್ರಿಲ್ 24ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಆಚರಿಸಲಾಗುತ್ತದೆಂದು ಹೇಳಿದರು. 

ವಿಶೇಷ ಉಪನ್ಯಾಸ: ಫೌಂಡೇಶನ್ ಫಾರ್ ಎಕಾಲಾಜಿಕಲ್ ಸೆಕ್ಯೂರಿಟಿ (ಎಫ್‌.ಇ.ಎಸ್) ಸಂಸ್ಥೆಯ ಜಿಲ್ಲಾ ಸಂಯೋಜಕರಾದ ವಾಸುದೇವ ಮೂರ್ತಿ ಅವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಕುರಿತಂತೆ ಮೂರು ಹಂತದ ಆಡಳಿತ ಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಸ್ಥಳೀಯ ಆಡಳಿತದೊಂದಿಗೆ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಹಾಗೂ ಸಮುದಾಯ ಆಸ್ತಿಗಳನ್ನು ಸಂರಕ್ಷಿಸುವಲ್ಲಿ ಇರುವ ಕಾನೂನು ನಿಯಮಗಳ ಬಗ್ಗೆ, ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಸಂಬಂಧಪಟ್ಟ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿ ಅಐಂಖಖಿ ಚಿಠಿಠಿ ಮಹತ್ವ ಮತ್ತು ಗೋಮಾಳಗಳ ಅಭಿವೃದ್ಧಿಯಿಂದ ಜೀವ ವೈವಿಧ್ಯತೆಯ ಉಳಿವು ಸಾಧ್ಯತೆ ಎನ್ನುವ ಕುರಿತು ತಿಳಿಸಿದರು. 

ಸಾಧಕರಿಗೆ ಸನ್ಮಾನ: ಕರವಸೂಲಿಯಲ್ಲಿ ಜಿಲ್ಲೆಯಲ್ಲಿಯೇ ಶೇ 100ಅ ಸಾಧನೆ ಮಾಡಿದ ಪಿಡಿಓ ್ಘ ಕರವಸೂಲಿಗಾರರಿಗೆ ್ಘ ಅತ್ಯುತ್ತಮ ಅರಿವು ಕೇಂದ್ರ ನಿರ್ವಹಣೆ ಮಾಡಿದ ಪಿಡಿಓ ್ಘ ಗ್ರಂಥಪಾಲಕರಿಗೆ ಮತ್ತು ಅತ್ಯುತ್ತಮ ವಾಹನ ಚಾಲಕಿ, ಕಸ ವಿಂಗಡಣೆಗಾರರಿಗೆ ಮತ್ತು ವಿಭಾಗ, ಜಿಲ್ಲಾ ಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಪಿಡಿಓ.ಗಳಿಗೆ ಮತ್ತು ಮಹಾತ್ಮ ಗಾಂಧಿ ನರೇಗಾದಡಿ ಉತ್ತಮ ಪ್ರಗತಿ ಸಾಧಿಸಿದ ಪಿಡಿಓ.ಗಳಿಗೆ ಮತ್ತು ಮಹಿಳಾ ಸ್ನೇಹ ಗ್ರಾಮ ಪಂಚಾಯತಿ ಪಿಡಿಓ.ಗಳಿಗೆ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.  

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸಿಬ್ಬಂದಿಗಳು ಎಲ್ಲಾ ಯೋಜನೆಗಳ ಸಂಯೋಜಕರು, ಪಿಡಿಓಗಳು, ಗ್ರಂಥಪಾಲಕರು, ಕರವಸೂಲಿಗಾರರು, ವಾಹನ ಚಾಲಕಿಯರು, ಇನ್ನಿತರ ಸಿಬ್ಬಂದಿಗಳು ಉಪಸ್ಥಿತಿದ್ದರು.