ಸ್ವಯಂ ಗಣತಿ ಕಾರ್ಯಕ್ರಮಕ್ಕೆ ಮೇಯರ್ ಹಾಗೂ ಉಪ ಮೇಯರ್ ಅವರಿಂದ ಚಾಲನೆ
Mayor and Deputy Mayor launch self-enumeration program
ಲೋಕದರ್ಶನ ವರದಿ
ವಿಜಯಪುರ 01: ನಮ್ಮ ಜನಗಣತಿ, ನಮ್ಮ ಭವಿಷ್ಯ ಧ್ಯೇಯವಾಕ್ಯದಡಿ ದೇಶ ವ್ಯಾಪಿ ನಡೆಯಲಿರುವ ರಾಷ್ಟ್ರೀಯ ಜನಗಣತಿ 2027 ರ ಮೊದಲ ಹಂತದ ಸ್ವಯಂ ಗಣತಿ ಕಾರ್ಯಕ್ಕೆ ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್ ಮಡಿವಾಳಪ್ಪ ಕರಡಿ ಹಾಗೂ ಉಪಮೇಯರ್ ಸುಮಿತ್ರಾ ಜಾಧವ ಬುಧವಾರ ಚಾಲನೆ ನೀಡಿದರು.
ಮೇಯರ್ ಮಡಿವಾಳಪ್ಪ ಕರಡಿ ಅವರು ತಮ್ಮ ಸ್ವಯಂ ಗಣತಿ ಮಾಡುವುದರ ಮೂಲಕ ನಗರ ವ್ಯಾಪ್ತಿಯಲ್ಲಿ ಸ್ವಯಂ ಗಣತಿ ಕಾರ್ಯಕ್ಕೆ ಚಾಲನೆ ನೀಡಿ, ನಗರದ ಜನತೆ ಸ್ವಯಂ ಗಣತಿ ಮಾಡಿಕೊಳ್ಳಲು ಕರೆ ನೀಡಿದರು.
ರಾಷ್ಟ್ರೀಯ ಜನಗಣತಿ 2027ರ ಮೊದಲ ಹಂತದ ಎಚ್ ಎಲ್ ಒಗೆ ಸಂಬಂಧಿಸಿದಂತೆ ಏ. 01ರಿಂದ 15 ರ ವರೆಗೆ ದತ್ತಾಂಶ ಆಧಾರಿತ ಸ್ವಯಂ ಗಣತಿ ಕಾರ್ಯವನ್ನು ನಗರದ ನಾಗರಿಕರು ತಮ್ಮ ಕುಟುಂಬದ ಸ್ವಯಂ ಗಣತಿ ಮಾಡಿಕೊಳ್ಳುವ ಮೂಲಕ ಜನಗಣತಿ ಕಾರ್ಯಕ್ಕೆ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದರು.
ಇದೇ ವೇಳೆ ಉಪಮೇಯರ್ ಸುಮಿತ್ರಾ ಜಾಧವ ಅವರು ಕೂಡಾ ಸ್ವಯಂ ಗಣತಿ ಮಾಡಿಕೊಳ್ಳುವುದರ ಮೂಲಕ ಗಣತಿ ಕಾರ್ಯಕ್ಕೆ ಸಾಕ್ಷಿಯಾದರು. ನಗರದ ಹೆಚ್ಚುವರಿ ಜನಗಣತಿ ಅಧಿಕಾರಿ ಶಿಲ್ಪಶ್ರೀ ಸಾಗರ, ಅಂಬಿಕಾ ಕಾಂಬಳೆ ಹಾಗೂ ಪಾಲಿಕೆ ಸಿಬ್ಬಂದಿ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 