ಪೌರಕಾರ್ಮಿಕರ ಹೋರಾಟಕ್ಕ ಜಯ ಲಭಿಸಲಿ: ಉಮೇಶ ತೇಲಿ
May the struggle of the civil servants be victorious: Umesh Teli
ಶಿರಹಟ್ಟಿ 29: ಪೌರ ಕಾರ್ಮಿಕರ ಹೋರಾಟಕ್ಕೆ ವಾಸ್ತವಿಕವಾಗಿದ್ದು, ಅವರಿಗೆ ಸರಕಾರ ನ್ಯಾಯ ಒದಗಿಸಲಿ, ಪಟ್ಟಣದ ಸ್ವಚ್ಛತೆಗಾಗಿ ಅವರು ಪಡುವ ಶ್ರಮ ಶ್ಲಾಘನೀಯವಾಗಿದೆ. ಅವರಿಂದಲೇ ಪಟ್ಟಣಗಳ ಸ್ವಾಸ್ಥ್ಯತೆ ಇದ್ದುದರಿಂದ ಅವರ ಬೇಡಿಕೆ ಈಡೇರುವುದು ಅವಶ್ಯಕವಾಗಿದೆ ಎಂದು ಯುವ ಮಖಂಡ ಪಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ತೇಲಿ ಹೇಳಿದರು.
ಅವರು ಪಟ್ಟಣದ ಪಟ್ಟಣ ಪಂಚಾಯತ ಕಾರ್ಯಾಲಯದ ಎದುರು ಅನಿರ್ದಿಷ್ಠ ಮುಷ್ಕರ ಕೈಗೊಂಡ ಹಿನಲ್ಲೆಯಲ್ಲಿ ಬೆಂಬಲಾರ್ಥವಾಗಿ ಮಾತನಾಡಿದರು.
ಪೌರ ಕಾರ್ಮಿಕರು ಅತ್ಯಂತ ಬಡವರಾಗಿದ್ದು, ಅವರಿಗೆ 6 ತಿಂಗಳಗಳ ಕಾಲ ವೇತನ ನೀಡದೇ ಇರುವುದು ನೋವಿನ ಸಂಗತಿಯಾಗಿದೆ. ಜೊತೆಗೆ ಅವರಿಗೆ ಅಗತ್ಯವಾಗಿ ಬೇಕಾಗಿರುವ ಬೇಡಿಕೆಗಳನ್ನು ಸರಕಾರ ಕೂಡಲೇ ಈಡೇರಿಸಲು ಮುಂದಾಗಬೇಕು. ಏಕೆಂದರೆ ಇತರ ನೌಕರರಂತೆ ಇವರ ಜೀವನ ಇರುವುದಿಲ್ಲ. ಇವರಿಂದಲೇ ಪಟ್ಟಣದ ಸ್ವಚ್ಛತೆಯಿಂದ ಕೂಡಿರುತ್ತದೆ. ಆದ್ದರಿಂದ ಇವರ ಬೇಡಿಕೆಗಳು ಈಡೇರುವುದು ಅವಶ್ಯಕವಾಗಿದೆ ಪೌರಕಾರ್ಮಿಕರ ಮುಷ್ಕರ ಇಷ್ಟಕ್ಕೆ ಅಂತ್ಯವಾದರೆ ಒಳ್ಳೆಯದು ಇಲ್ಲದಿದ್ದ ಪಕ್ಷದಲ್ಲಿ ನಿಮ್ಮ ಹೋರಾಟಕೆಕ ನಮ್ಮ ಬೆಂಬಲವಿದೆ ಎಂದು ನೈತಿ ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ಸರೇಶ ಹವಳದ, ರಮೇಶ ಕಪ್ಪತ್ತನವರ ಶೌಕತಲಿ ಬುವಾಜಿ,ದೀಪು ಕಪ್ಪತ್ತನವರ, ಅಶೋಕ ಮಡಿವಾಳರ, ಜಗದೀಶ ತೇಲಿ, ರಾಜು ಕಪ್ಪತ್ತನವರ, ಮುತ್ತಣ್ಣ ಕಪ್ಪತ್ತನವರ ಈರಣ್ಣ ಸಜ್ಜನರ, ಮುತ್ತು ಚಕ್ರಸಾಲಿ, ಪಕ್ಕಣ್ಣ ಕಬಾಡರ, ಸೋಮಣ್ಣ ರೆಡ್ಡೇರ, ಚಂಧ್ರು ಕಪ್ಪತ್ತನವರ, ಮುತ್ತಣ್ಣ ಬಡಿಗೇರ, ಮುನ್ನಾ ಮಕಾಂದಾರ, ಶಿವು ಕುಂಬರ, ನಾಯಕ,ಹನುಮಂತ ತಳವಾರ, ರಿತ್ತು ಮಜ್ಜಗಿ, ಬಸುವರಾಜ ಸಜ್ಜನರ, ಫಕ್ಕಿರೇಶ ಬಳಿಗೇರ, ವಿನೋದ ಕಪ್ಪತ್ತನವರ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 