ಶಿವಶರಣೆಯರ ಆದರ್ಶ ಬದುಕು ನಮಗೆ ಮಾದರಿಯಾಗಲಿ: ಶಿಕ್ಷಕಿ ಬಿರಾದಾರ
May the exemplary lives of the Shivasaraneyaru serve as a model for us: Teacher Biradar
ತಾಳಿಕೋಟಿ 01: 12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಸಮಾನತೆಯ ಕ್ರಾಂತಿಯನ್ನು ತಂದಂತಹ ಮಹಾನ್ ಚೇತನ ಬಸವಣ್ಣನವರಾಗಿದ್ದಾರೆ. ಅವರು ಕೇವಲ ಒಬ್ಬ ವ್ಯಕ್ತಿ ಯಾಗಿರದೆ ಒಂದು ಅಧಮ್ಯ ಶಕ್ತಿಯಾಗಿದ್ದಾರೆ ಎಂದು ಪಡೇಕನೂರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಹೇಮಾ ಬಿರಾದಾರ ಹೇಳಿದರು. ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕ ಘಟಕ, ಯುವ ಘಟಕ ಹಾಗೂ ಕದಳಿ ವೇದಿಕೆ ವತಿಯಿಂದ ಶ್ರಾವಣ ಮಾಸದ ನಿಮಿತ್ಯವಾಗಿ ಹಮ್ಮಿಕೊಂಡ ವಚನ ಶ್ರಾವಣ ಮೂರನೇ ವಾರದ ಕಾರ್ಯಕ್ರಮದಲ್ಲಿ ಶರಣ ತತ್ವ ಪರಿಪಾಲನೆಯಲ್ಲಿ ಆಧುನಿಕ ಮಹಿಳೆಯರ ಪಾತ್ರ ಎಂಬ ವಿಷಯದ ಕುರಿತು ಸೋಮವಾರ ಸಂಜೆ ಅವರು ವಿಶೇಷ ಉಪನ್ಯಾಸ ನೀಡಿದರು.
ಕಲ್ಯಾಣದಲ್ಲಿ ಬಸವಾದಿ ಶರಣರು ನಿರ್ಮಿಸಿದ ಅನುಭವ ಮಂಟಪದಲ್ಲಿ ಸುಮಾರು 33 ಶಿವಶರಣೆಯರು ವಚನಗಳ ರಚನಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಸವಣ್ಣನವರ ವಚನ ಕ್ರಾಂತಿಯಲ್ಲಿ ಅವರ ಕೊಡುಗೆ ಅಪಾರವಾಗಿದೆ. ಬಸವಾದಿ ಶರಣರು ನಮಗೆ ಕಾಯಕ- ದಾಸೋಹ, ಲಿಂಗ ಪೂಜೆ, ಅರಿವು, ಭಕ್ತಿ ಹಾಗೂ ಶ್ರದ್ಧೆಯಂಥಹ ಅಮೂಲ್ಯ ಆಚಾರ ತತ್ವಗಳನ್ನು ತಿಳಿಸಿಕೊಟ್ಟಿದ್ದಾರೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಶರಣರು ಮಹಿಳೆಯ ಬದುಕಿಗೆ ಘನತೆ, ಗೌರವವನ್ನು ತಂದು ಕೊಟ್ಟಿದ್ದಾರೆ.
ಅವಳು ಮಾಹೆ, ಅಬಲೇ ಅಥವಾ ಭೋಗದ ವಸ್ತುವಲ್ಲ. ಅವಳು ಪುರುಷನಿಗೆ ಸಮಾನವಾಗಿದ್ದಾಳೆ ಎಂದು ತಿಳಿಸಿದ್ದಾರೆ. ಬಸವಾದಿ ಶರಣರ ಚಿಂತನೆಗಳನ್ನು ಸಮಾಜದಲ್ಲಿ ಪಸರಿಸುವ ಕೆಲಸ ಆಗಬೇಕು. ಇದಕ್ಕಾಗಿ ನಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ವಚನ ಸಾಹಿತ್ಯದ ಪರಿಚಯ ಮಾಡಿಕೊಡುವ ಅಗತ್ಯವಿದೆ. ಶ್ರಾವಣ ಮಾಸದಲ್ಲಿ ಇಂಥ ಕಾರ್ಯಕ್ರಮಗಳ ಮೂಲಕ ಸಮಾಜವನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿರುವ ಪರಿಷತ್ತು ಹಾಗೂ ಕದಳಿ ವೇದಿಕೆ ಪದಾಧಿಕಾರಿಗಳಿಗೆ ಅಭಿನಂದಿಸುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿದ ಕದಳಿ ವೇದಿಕೆ ನೂತನ ಅಧ್ಯಕ್ಷ ಉಮಾ ಬಸವರಾಜ ಸಾಲಂಕಿ ಅವರು ಮಾತನಾಡಿ ಸಮಾಜದಲ್ಲಿ ಸದ್ವಿಚಾರಗಳನ್ನು ತಲುಪಿಸಲು ಒಂದಾಗಿ ಕೆಲಸ ಮಾಡುವ ಅಗತ್ಯವಿದೆ ಎಂದರು. ಪುರಸಭೆ ಮಾಜಿ ಸದಸ್ಯರಾದ ಅಕ್ಕಮಹಾದೇವಿ ಕಟ್ಟಿಮನಿ, ಸಹಕಾರಿ ಬ್ಯಾಂಕ್ ನಿರ್ದೇಶಕಿ ಗಿರಿಜಾ ಕೊಡಗಾನೂರ, ಶಾರದಾದೇವಿ ಕೋ- ಆಫ್ ಸೊಸೈಟಿ ನಿರ್ದೇಶಕಿ ಸುರೇಖಾ ಸಾಲಂಕಿ, ನಿವೃತ್ತ ಶಿಕ್ಷಕ ಜಿ.ಎಸ್. ಜಮ್ಮಲದಿನ್ನಿ,
ಸಾಹಿತಿ ಶ್ರೀಕಾಂತ ಪತ್ತಾರ, ಶಿಕ್ಷಕ ಅಪ್ಪಾಸಾಹೇಬ ಮೂಲಿಮನಿ, ಯುವ ಘಟಕದ ಅಧ್ಯಕ್ಷ ಕಾಶಿನಾಥ ಸಜ್ಜನ, ಶಿಕ್ಷಕ ಆರ್ ಎಸ್ ವಾಲಿಕಾರ, ಖಾಜಾ ಹುಸೇನ್ ಮುಲ್ಲಾ, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ,ಅಶೋಕ ಚಿನಗುಡಿ, ಪರಿಷತ್ತು ಹಾಗೂ ಕದಳಿ ವೇದಿಕೆ ಪದಾಧಿಕಾರಿಗಳು ಮತ್ತು ಬಸವಾಭಿಮಾನಿಗಳು ಉಪಸ್ಥಿತರಿದ್ದರು. ಶರಣೆ ವಿಶಾಲಾಕ್ಷಿ ಬಡಿಗೇರ ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕಿ ಬಿ.ಟಿ.ಸಜ್ಜನ ಸ್ವಾಗತಿಸಿದರು. ತೇಜಸ್ವಿನಿ ಡಿಸಲೆ ಹಾಗೂ ಶಿಕ್ಷಕ ಸಿದ್ದು ಕರಡಿ ನಿರೂಪಿಸಿದರು. ಶರಣೆ ಯಡ್ರಾಮಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 