ನದಿ ಇಂಗಳಗಾಂವ ಸಹಕಾರಿ ಸಂಘ ಶತಮಾನೋತ್ಸವ ಆಚರಿಸುವಂತಾಗಲಿ: ಶಾಸಕ ಸವದಿ
May the River Ingala Gaon Cooperative Society celebrate its centenary: MLA Savadi
ಅಥಣಿ 19: ನಾನು ಸಹಕಾರ ಸಚಿವನಾಗಿದ್ದ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸುವ ಯೋಜನೆ ಅನುಷ್ಠಾನಗೊಳಿಸಿದ ನನ್ನ ಶ್ರೇಯಸ್ಸು ಅಥಣಿ ಭಾಗದ ರೈತರಿಗೆ ಸಲ್ಲಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ನದಿ ಇಂಗಳಗಾಂವದ ವಿವಿದೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 75 ನೇ ವರ್ಷದ ಅಮೃತ ಮಹೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಸಹಕಾರ ಸಚಿವನಾಗಿದ್ದ ಸಮಯದಲ್ಲಿ ಕೂಡಲ ಸಂಗಮದಲ್ಲಿ ಆಯೋಜಿಸಿದ್ದ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದ ಅಧ್ಯಕ್ಷೀಯ ಭಾಷಣದಲ್ಲಿ ರೈತರಿಗೆ ಬಡ್ಡಿ ರಹಿತ ಸಾಲ ವಿತರಿಸಿದಲ್ಲಿ ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದೆ. ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರ್ಪನವರು ನನ್ನನ್ನು ಕರೆದು ಶೂನ್ಯ ಬಡ್ಡಿದರದಲ್ಲಿ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದಾಗ ಕೇಂದ್ರದ ಯೋಜನೆಯೊಂದರ ಲೆಕ್ಕ ತೋರಿಸಿ ಅವರಿಂದ ಒಪ್ಪಿಗೆ ಪಡೆದುಕೊಂಡು ಅನುಷ್ಠಾನಗೊಳಿಸಿದೆ ಎಂದರು.
ಸಹಕಾರ ಸಚಿವನಾಗಿದ್ದ ಸಂದರ್ಭವನ್ನು ಸದುಪಯೋಗ ಮಾಡಿಕೊಂಡು ಶೂನ್ಯ ಬಡ್ಡಿದರದ ಯೋಜನೆ ಅನುಷ್ಠಾನಗೊಳಿಸಿದೆ. ಇದರ ಪರಿಣಾಮ ಇಂದು 36 ಲಕ್ಷ ಕುಟುಂಬಗಳಿಗೆ ಉಪಯೋಗ ಆಗಿದೆ ಎಂದ ಅವರು ನದಿ ಇಂಗಳಗಾಂವದ ವಿವಿದೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಸಂಸ್ಥೆಯಿಂದ ಲಕ್ಷಾಂತರ ರೈತರು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳುವ ಮೂಲಕ ಲಾಭ ಮಾಡಿಕೊಂಡಿದ್ದಾರೆ. ಗ್ರಾಮದ ಅನೇಕ ಹಿರಿಯರು ನಿಷ್ಠೆಯಿಂದ ಕಾರ್ಯನಿರ್ವಹಿಸಿದ ಪರಿಣಾಮವೇ ಇಂದು ಈ ಸಹಕಾರಿ ಸಂಘ 75ನೇ ವರ್ಷದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಾಗವಾಡ ಶಾಸಕ ರಾಜು ಕಾಗೆ, 1994ರ ಮೊದಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಬಗ್ಗೆ ಮಾಹಿತಿ ನಮಗ್ಯಾರಿಗೂ ಇರಲಿಲ್ಲ. ಆದರೆ ಆಗ ಲಕ್ಷ್ಮಣ ಸವದಿ ಸಹಕಾರ ಸಂಘಗಳ ಕ್ಷೇತ್ರದಿಂದ ಚುನಾಯಿತರಾದ ನಂತರವೇ ಈ ಕ್ಷೇತ್ರದಲ್ಲಿ ಕ್ರಾಂತಿಯಾಯಿತು ಎಂದರು.
ಕ್ಷೇತ್ರ ವಿಂಗಡಣೆ ಪೂರ್ವದಲ್ಲಿ ಕಾಗವಾಡ ಕ್ಷೇತ್ರಕ್ಕೆ ನದಿ ಇಂಗಳಗಾಂವ ಒಳ ಪಡುತ್ತಿತ್ತು. ಆಗ ವಿಧಾನ ಸಭೆಗೆ ಸ್ಪರ್ಧಿಸಿದಾಗ ಒಟ್ಟು ಚಲಾವಣೆಯಾದ 2100 ಮತಗಳ ಪೈಕಿ 2000 ಮತಗಳು ನನ್ನ ಪರವಾಗಿದ್ದವು. ಹೀಗಾಗಿ ಈ ಗ್ರಾಮವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.
ಸಹಕಾರ ಸಂಘದ ಅಧ್ಯಕ್ಷ ವಿಠ್ಠಲ್ ರಾಚಗೌಡರ ಮಾತನಾಡಿ, ನಮ್ಮ ಹಿಂದಿನ ಆಡಳಿತ ಮಂಡಳಿಯ ಹಿರಿಯರ ಶ್ರಮದ ಫಲ ಮತ್ತು ಇಂದಿನ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಸಂಘದ ಸದಸ್ಯರ ಸಹಕಾರದ ಪರಿಣಾಮ ಸಹಕಾರ ಸಂಘ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಮೋದ ಕುಲಕರ್ಣಿ ಮಾತನಾಡಿ, ಸಹಕಾರಿ ಸಂಘ 1027 ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ 20 ಲಕ್ಷ 86 ಸಾವೀರ ಲಾಭ ಆಗಿದೆ ಎಂದ ಅವರು ಪ್ರಸಕ್ತ ಸಾಲಿನಲ್ಲಿ 7 ಕೋಟಿ 25 ಲಕ್ಷ ಬೆಳೆ ಸಾಲ ವಿತರಿಸಲಾಗಿದೆ ಎಂದರು.
ಸಾನಿಧ್ಯವನ್ನು ಸಿದ್ಧಲಿಂಗ ಸ್ವಾಮೀಜಿ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕೃಷ್ಣಾ ಸಕ್ಕರೆ ಕಾರಖಾನೆಯ ಅಧ್ಯಕ್ಷ ಪರ್ಪ ಸವದಿ, ಅತಿಥಿಗಳಾಗಿ ಬಿಡಿಸಿಸಿ ಬ್ಯಾಂಕ ಅಥಣಿ ಶಾಖೆಯ ನಿಯಂತ್ರಣಾಧಿಕಾರಿ ಶಂಕರ ನಂದೇಶ್ವರ, ಸಹಕಾರ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ನೂಲಿ, ಬ್ಯಾಂಕ ನೀರೀಕ್ಷಕ ಶಿವಾನಂದ ಢವಳೇಶ್ವರ, ಬಿಡಿಸಿಸಿ ಬ್ಯಾಂಕನ ಹಲ್ಯಾಳ ಶಾಖೆಯ ಶಿವಗೌಡ ಬಿಳ್ಳೂರ, ಬಿಡಿಸಿಸಿ ಬ್ಯಾಂಕಿನ ಅಥಣಿ ಶಾಖೆಯ ವ್ಯವಸ್ಥಾಪಕ ಬಸವರಾಜ ಕಮತಗಿ, ಕೃಷಿ ಅಧಿಕಾರಿ ಅರುಣ ಪಾಟೀಲ, ಬಿಡಿಸಿಸಿ ಬ್ಯಾಂಕ ನೀರೀಕ್ಷಕ ಚೇತನ ದಳವಾಯಿ, ಧುರೀಣರಾದ ರಾಜು ನಾಡಗೌಡ, ಶಿವರುದ್ರ ಘೂಳಪ್ಪನವರ, ಶಿವು ಗುಡ್ಡಾಪುರ, ಶ್ರೀಶೈಲ ನಾಯಿಕ, ಅಪ್ಪು ಮದಭಾವಿ, ಫರೀದ ನನ್ನೆ ಆಗಮಿಸಿದ್ದರು.
ಸಹಕಾರಿ ಸಂಘದ ಉಪಾಧ್ಯಕ್ಷ ಶೇಖರ ಮೋಕಾಶಿ, ನಿರ್ದೇಶಕರಾದ ಗುರಯ್ಯ ಮಠಪತಿ, ಸುರೇಖಾ ಹಣಮಂತ ಅಂಬಿ, ಚಿತ್ರವ್ವಾ ಗುರುಲಿಂಗ ಪಾಟೀಲ, ನಾಗಪ್ಪಾ ಡಾಬೋಳಿ, ಕಲ್ಲಪ್ಪ ಠಕ್ಕಣ್ಣವರ, ಮಹಾಂತೇಶ ರಾಚಗೌಡರ, ಅರುಣಕುಮಾರ ಚನಗೌಡರ, ಅಕ್ಬರ ನನ್ನೆ, ಸಾತಪ್ಪಾ ತಳವಾರ, ಬಸಪ್ಪಾ ಮಾಂಗ, ಶಿವಾನಂದ ಢವಳೇಶ್ವರ, ಮುಖ್ಯ ಕಾರ್ಯನಿರ್ವಾಹಕರಾದ ಪ್ರಮೋದ ಕುಲಕರ್ಣಿ, ಲೆಕ್ಕಿಗ ಗುರುಬಸಯ್ಯಾ ಮಠಪತಿ, ಮರಾಟಗಾರ ಮಲ್ಲಪ್ಪ ಡಾಬೋಳಿ, ಗುಮಾಸ್ತ ಅಶೋಕ ಮಂಗಸೂಳಿ, ಬಸಪ್ಪ ಮೋಕಾಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 