ಮೇ ಸಾಹಿತ್ಯ ಮೇಳ ಬಳಗದಿಂದ ಕೊಪ್ಪಳದಲ್ಲಿ ಎಸ್‌ಐಆರ್ ಕುರಿತು ಬೃಹತ್ ಜಾಗೃತಿ ಕಾರ್ಯಕ್ರಮ

ಮೇ ಸಾಹಿತ್ಯ ಮೇಳ ಬಳಗದಿಂದ  ಕೊಪ್ಪಳದಲ್ಲಿ ಎಸ್‌ಐಆರ್ ಕುರಿತು ಬೃಹತ್ ಜಾಗೃತಿ ಕಾರ್ಯಕ್ರಮ May Literary Festival Group organizes a massive awareness program on SIR in Koppal

ಕೊಪ್ಪಳ 30: ಕೇಂದ್ರ ಚುನಾವಣಾ ಆಯೋಗ ನಿಗದಿಪಡಿಸಿರುವ ಎಸ್‌ಐಆರ್ ಮತದಾರರ ವಿಶೇಷ ಪರಿಷ್ಕರಣೆ ಕಾರ್ಯಕ್ರಮ ನೆಪದಲ್ಲಿ ಅಹಿಂದ  ವರ್ಗದ ಜನರ ಮತದಾರರ ಹಕ್ಕು ಕಿತ್ತುಕೊಳ್ಳುವ ಹೊನ್ನಾರ ದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶ ದಿಂದ ಮೇ 2 ರ ಶನಿವಾರ ಮಧ್ಯಾಹ್ನ 3:30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಮೇ ಸಾಹಿತ್ಯ ಮೇಳ ಕೊಪ್ಪಳ ಬಳಗದ ವತಿಯಿಂದ ಎಸ್‌ಐಆರ್ ಜಾಗೃತಿ ಬೃಹತ್ ಸಮಾವೇಶ ಜರುಗಲಿದೆ ಎಂದು ಕಾರ್ಯಕ್ರಮ ಸಂಘಟಕ ಹೋರಾಟಗಾರ ಟಿ ರತ್ನಾಕರ್ ತಿಳಿಸಿದ್ದಾರೆ, ಅವರು ಗುರುವಾರ ನಗರದ ಪತ್ರಿಕಾ ಭವನದಲ್ಲಿ ಏರಿ​‍್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಈ ಕುರಿತು ಹೇಳಿಕೆ ನೀಡಿದ ಅವರು ಕಾರ್ಯಕ್ರಮದಲ್ಲಿ ಜನರಿಗೆ ವಿಶೇಷ ಜಾಗೃತಿ ನೀಡಲು ಹಿರಿಯ ಹೋರಾಟಗಾರ ಚಿಂತಕ ಶಿವಸುಂದರ್ ರವರು ವಿಶೇಷ ಉಪನ್ಯಾಸ ನೀಡಲಿದ್ದಾರೆ, ಇನ್ನೋರ್ವ ಹಿರಿಯ ಸಾಹಿತಿ ಹೋರಾಟಗಾರ ಚಿಂತಕ ಕೊಂ ವೀರಭದ್ರ​‍್ಪ ರವರು  ಅಧ್ಯಕ್ಷತೆ ವಹಿಸಲಿದ್ದಾರೆ ಇನ್ನು ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಎಂದು ಸಂಘಟಕರಾದ ಟಿ ರತ್ನಾಕರ್ ಅವರು ವಿವರಿಸಿದರು, ಕೇಂದ್ರ ದ ಕೋಮುವಾದಿ ಸರ್ಕಾರ ದಲಿತ ಸಮುದಾಯ ಆದಿವಾಸಿ ಜನಾಂಗ ಮತ್ತು ವಿಶೇಷವಾಗಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರನ್ನು ಚುನಾವಣೆ ಪ್ರಕ್ರಿಯೆಯಿಂದ ದೂರ ಇಡಲು ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಇದೊಂದು ದೊಡ್ಡ ಕುತಂತ್ರ ನಡೆದಿದೆ ಇದರ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸಲೂ ಈ ಬೃಹತ್ ಸಮಾವೇಶ ನಡೆಯಲಿದೆ ಸಾಮಾನ್ಯ ಜನರು ಸಾರ್ವಜನಿಕರು ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯ ಕ್ರಮ ಯಶಸ್ವಿಗೊಳಿಸಬೇಕೆಂದು ಟಿ, ರತ್ನಾಕರ್ ಹೇಳಿದರು, ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡ ಹೋರಾಟಗಾರ ಸುಖರಾಜ್ ತಾಳಿಕೇರಿ, ಎಸ್ ಏ ಗಫಾರ್, ಫಾಸ್ಟರ್ ಅಸೋಸಿಯೇಷೇನ ಜಿಲ್ಲಾಧ್ಯಕ್ಷ ಚೆನ್ನಬಸಪ್ಪ ಅಪಣ್ಣವರ್, ವೆಲ್ಫೇರ್ ಪಾರ್ಟಿ ಮಹಿಳಾ ಘಟಕದ ರಾಜ್ಯ ಅಧ್ಯಕ್ಷರಾದ ಸಬಿಯ ಪಟೇಲ್, ಭೀಮಪ್ಪ ಹವಳೇ ಸೇರಿದಂತೆ ಅನೇಕರು ಉಪಸ್ಥಿತರಿದ್ದರು,