ಸಹಾಕರಿ ಸಂಘಗಳ ರೈತರಿಗೆ ಅತಿಹೆಚ್ಚು ಸಾಲ ವಿತರಣೆ: ಶಾಸಕ ಲಕ್ಷ್ಮಣ ಸವದಿ

ಸಹಾಕರಿ ಸಂಘಗಳ ರೈತರಿಗೆ ಅತಿಹೆಚ್ಚು ಸಾಲ ವಿತರಣೆ: ಶಾಸಕ ಲಕ್ಷ್ಮಣ ಸವದಿ Maximum loan disbursement to farmers of cooperative societies: MLA Lakshman Savadi

ಕಾಗವಾಡ, 20 : ಪ್ರತಿ ಒಬ್ಬ ರೈತರಿಗೆ ಅನಕೂಲ ಆಗುವ ದೃಷ್ಟಿಯಿಂದ ಅಥಣಿ ಹಾಗೂ ಕಾಗವಾಡ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಅಂದರೆ 156 ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ 600 ಕೋಟಿ ಬಡ್ಡಿ ರಹಿತ ಸಾಲವನ್ನು ರೈತರಿಗೆ ನೀಡಲಾಗಿದ್ದು ಇದು ಯಾವುದೇ ತಾಲ್ಲೂಕು ಆಗಲಿ ಜಿಲ್ಲೆಯಲ್ಲಿ ಆಗಲಿ ಇಷ್ಟು ಪ್ರಮಾಣದ ಸಾಲ ವಿತರಣೆ ಆಗಿಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.  

ಅವರು ಕಾಗವಾಡ ತಾಲ್ಲೂಕಿನ ಕವಲಗುಡ್ಡ ಗ್ರಾಮದಲ್ಲಿ ನೂತನವಾಗಿ ಪ್ರಾರಂಭವಾದ ಕರಿಯೋಗಿ ಸಿದ್ದ ಗ್ರಾಮೀಣ ಕೃಷಿ ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡಿ ರೈತರು ಕೃಷಿ ಸಹಕಾರಿ ಸಂಘದಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಸಿ ಗ್ರಾಮೀಣ ಸಹಾಕರಿ ಸಂಘಗಳನ್ನು ಬೆಳೆಸಬೇಕು ನಮ್ಮ ತಾಲ್ಲೂಕಿನ ರೈತರು ಹಾಗೂ ಸಹಕಾರಿ ಸಂಘಗಳ ಸಿಬ್ಬಂದಿ ವರ್ಗ ಪ್ರಾಮಾಣಿಕವಾಗಿ ಕೆಲಸ ಮಾಡಿರುವುದರಿಂದ ವಸೂಲಾತಿಯಲ್ಲು ಸಹಿತ ಶೇಕಡಾ 100ಅ ಇದೆ ಕವಲಗುಡ್ಡ ಗ್ರಾಮದಲ್ಲಿ ಸಿದ್ದಶ್ರೀ ಅಮರೇಶ್ವರ ಮಹಾರಾಜರ ನೇತೃತ್ವದಲ್ಲಿ ಪ್ರಾರಂಭವಾದ ಕರಿಯೋಗಿ ಸಿದ್ದ ಗ್ರಾಮೀಣ ಸಹಕಾರಿ ಸಂಘದಿಂದ ಸುಮಾರು 150 ಜನ ರೈತರಿಗೆ 75 ಸಾವಿರದಂತೆ ಬಡ್ಡಿ ರಹಿತ ಸಾಲವನ್ನು ನೀಡಲಾಗಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕು ಪ್ರಗತಿ ಹೊಂದಬೇಕು ಎಂದು ಹೇಳಿದರು. 

ಶಾಸಕ ರಾಜು ಕಾಗೆ ಮಾತನಾಡಿ ರೈತರು ಸಹಕಾರ ಸಂಘದಿಂದ ತೆಗೆದು ಕೊಳ್ಳುವ ಸಾಲವನ್ನು ಸರಿಯಾದ ಕೆಲಸಗಳಿಗೆ ಉಪಯೋಗಿಸಿ ಪ್ರಗತಿ ಹೊಂದಬೇಕು ಅದರಂತೆ ಅಮರೇಶ್ವರ ಮಹಾರಾಜರು ಮಠಗಳನ್ನು ಉದ್ದಾರಮಾಡದೆ ಗ್ರಾಮದ ಬಡ ಮಕ್ಕಳಿಗೆ ಶಿಕ್ಷಣ ಹಾಗೂ ರೈತರಿಗೆ ಅನುಕೂಲಕ್ಕೆ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಿದ್ದಾರೆ ಅದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು. 

ಸಾನಿಧ್ಯ ವಹಿಸಿ ಮಾತನಾಡಿದ ಕವಲಗುಡ್ಡದ ಅಮರೇಶ್ವರ ಮಹಾರಾಜರು ಕವಲಗುಡ್ಡ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಅನುಕೂಲ ಆಗಲು ಇದನ್ನು ಸ್ಥಾಪಿಸಲಾಗಿದ್ದು ರೈತರು ತಾವು ಪ್ರಗತಿ ಹೊಂದಿ ಸಂಘವನ್ನು ಮುನ್ನಡೆಸಬೇಕು ಎಂದು ಹೇಳಿದರು.ಈ ವೇಳೆ ಸಾನಿಧ್ಯವನ್ನು ಅಮರೇಶ್ವರ ಮಹಾರಾಜರು ವಹಿಸಿದ್ದರು ಮಾಜಿ ಜಿ.ಪಂ ಸದಸ್ಯ ವಿನಾಯಕ ಬಾಗಡಿ, ಶಂಕರ ವಾಘಮೋಡೆ,ಬಾಬು ಮೇಂಡಿಗೆರಿ, ಹಣಮಂತ ಸಂಬೋಜಿ,ಮಹಾದೇವ ಉಳ್ಳಾಗಡ್ಡಿ, ಶಂಕರ ನಂದೇಶ್ವರ,ರಾವಸಾಬ ಕಾಳೇಲಿ, ಎಬಿ ಪಾಟೀಲ, ಮಹಾದೇವ ಮಾಳಿ, ದೇವಪ್ಪ ಮಾನಗಾಂವೆ, ನಿಜಗುಣಿ ಮಗದುಮ್ಮ, ಅಪ್ಪಾಸಾಬ ಚೌಗಲಾ, ಸೇರಿದಂತೆ ಅನೇಕರು ಇದ್ದರು.