ಮೌಲಾನಾ ಆಜಾದ್ ಶಾಲೆ ಸ್ಥಳಾಂತರ: ಪಾಲಕರ ಹೋರಾಟ ಸಮಿತಿ ಪಟ್ಟು.

ಮೌಲಾನಾ ಆಜಾದ್ ಶಾಲೆ ಸ್ಥಳಾಂತರ: ಪಾಲಕರ ಹೋರಾಟ ಸಮಿತಿ ಪಟ್ಟು. Maulana Azad School relocation: Parents' protest committee forms.

ಮೌಲಾನಾ ಆಜಾದ್ ಶಾಲೆ ಸ್ಥಳಾಂತರ: ಪಾಲಕರ ಹೋರಾಟ ಸಮಿತಿ ಪಟ್ಟು. 

ಕೊಪ್ಪಳ 30: ನಗರದಇಂದಿರಾಕ್ಯಾಂಟೀನ್ ಹಿಂದಿನ ಮೌಲಾನಾಆಜಾದ್ ಮಾದರಿಆಂಗ್ಲ ಮಾಧ್ಯಮ ಶಾಲೆ ಸರ್ದಾರ್‌ಗಲ್ಲಿ ತೆರವುಗೊಳಿಸಲು ಶಾಸಕ ಕೆ.ರಾಘವೇಂದ್ರ ಬಿ.ಹಿಟ್ನಾಳ ಹೇಳಿದ್ದು.ಮೌಲಾನಾಆಜಾದ್ ಮಾದರಿಆಂಗ್ಲ ಮಾಧ್ಯಮ ಶಾಲಾ ಪಾಲಕರ ಹೋರಾಟ ಸಮಿತಿ ಈಗ ಇದ್ದಜಾಗದಲ್ಲೇ ನೂತನಕಟ್ಟಡಕಟ್ಟಲು ಒತ್ತಾಯಿಸಿದರು.    ನಗರದಜಿಲ್ಲಾ ಆಡಳಿತ ಭವನದಜಿಲ್ಲಾಧಿಕಾರಿಕಚೇರಿಯಲ್ಲಿ ಶಾಸಕ ಕೆ.ರಾಘವೇಂದ್ರ ಬಿ.ಹಿಟ್ನಾಳ ಅವರಿಗೆ ಮೌಲಾನಾಆಜಾದ್ ಮಾದರಿಆಂಗ್ಲ ಮಾಧ್ಯಮ ಶಾಲಾ ಪಾಲಕರ ಹೋರಾಟ ಸಮಿತಿಯ ನಿಯೋಗದಲ್ಲಿ ನಗರ ಸಭೆ ಮಾಜಿ ಸದಸ್ಯ ಮಾನವಿ ಪಾಶಾ. ಹೋರಾಟ ಸಮಿತಿಅಧ್ಯಕ್ಷ ಮುನೀರ್‌ಅಹ್ಮದ್ ಸಿದ್ದೀಕಿ.ಪ್ರಧಾನ ಕಾರ್ಯದರ್ಶಿ ಎಸ್‌.ಎ.ಗಫಾರ್ ಮುಂತಾದವರು ಭಾಗವಹಿಸಿದ್ದರು.   ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್‌.ಎ.ಗಫಾರ್ ಮಾತನಾಡಿ ಮೌಲಾನಾಆಜಾದ್ ಮಾದರಿಆಂಗ್ಲ ಮಾಧ್ಯಮ ಶಾಲೆ ಸರ್ದಾರ್‌ಗಲ್ಲಿ 2017ರಲ್ಲಿ ಪ್ರಾರಂಭವಾಗಿ 2020. 21 ರಲ್ಲಿಇಂದಿರಾಕ್ಯಾಂಟೀನ್ ಹಿಂದೆ ಬಂದಿದೆ. ಸ್ವಂತಕಟ್ಟಡಇಲ್ಲದೆ ಸ್ಥಳಾಂತರಿಸಲು ಹೊರಟಿರುವುದು ಮಕ್ಕಳಿಗೆ ಸಮಸ್ಯೆಆಗುತ್ತಿದೆ.ಈಗಿದ್ದಜಾಗದಲ್ಲೇ ಮೌಲಾನಾಆಜಾದ್ ಶಾಲಾ ಕಟ್ಟಡಕಟ್ಟಲು ಒತ್ತಾಯಿಸಿದಾಗ ಶಾಸಕ ಕೆ.ರಾಘವೇಂದ್ರ ಬಿ. ಹಿಟ್ನಾಳ ಬಾಲಕರ ಸರ್ಕಾರಿ ಪದವಿ ಪೂರ್ವಕಾಲೇಜಿನಆವರಣದಲ್ಲಿ ನಾಲ್ಕು ಕೊಠಡಿಗಳನ್ನು ನಿರ್ಮಿಸಿದ್ದು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದಕ್ಕೆ ಎಸ್‌.ಎ.ಗಫಾರ್ ಮಾತನಾಡಿಅಲ್ಲಿಕಟ್ಟಿರುವ ನಾಲ್ಕು ಕೊಠಡಿಗಳು ಚಿಕ್ಕದಾಗಿದ್ದು.ತಲಾಒಂದುತರಗತಿಯಲ್ಲಿ 60 ಮಕ್ಕಳಿದ್ದು.ಚಿಕ್ಕಕೊಠಡಿಯಲ್ಲಿ 25 ರಿಂದ 30 ಮಕ್ಕಳು ಮಾತ್ರಕೂಡಲು ಸಾಧ್ಯವಾಗುತ್ತದೆ.ಈಗ ಕೇವಲ ಆರನೇತರಗತಿಯಿಂದ ಹತ್ತನೇತರಗತಿ ವರೆಗೆ ಸುಮಾರು 300 ವಿದ್ಯಾರ್ಥಿಗಳಿದ್ದಾರೆ. ಮೌಲಾನಾಆಜಾದ್ ಶಾಲೆಯುಎಲ್‌.ಕೆ.ಜಿ ಯಿಂದ ದ್ವಿತೀಯ ಪಿಯುಸಿ ವರೆಗೆಇರುವುದರಿಂದದೂರದೃಷ್ಟಿಯಿಂದಯೋಜನಾ ಬದ್ಧವಾಗಿ ವ್ಯವಸ್ಥಿತ ಕಟ್ಟಡ ಮತ್ತುಆಟದ ಮೈದಾನವನ್ನು ಹೊಂದಲು.ಇರುವಜಾಗದಲ್ಲೇಕಟ್ಟಡಕಟ್ಟುವುದರಿಂದ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗುತ್ತದೆಎಂದು ವಿವರಿಸಿದರು.ನಗರಸಭೆ ಮಾಜಿ ಸದಸ್ಯ ಮಾನವಿ ಪಾಶಾ ಮಾತನಾಡಿಇಂದಿರಾಕ್ಯಾಂಟೀನ್ ಹಿಂದೆ ವಿಶಾಲವಾದಜಾಗಇದೆ.ನೂತನಕಟ್ಟಡಕಟ್ಟಲುಅನುಕೂಲಕರವಾಗಿದೆ.ಸುತ್ತಲಿನ ಮಕ್ಕಳಿಗೆ ಸಮೀಪವಾಗುತ್ತದೆಎಂದು ತಿಳಿಸಿದರು.   ಹೋರಾಟ ಸಮಿತಿಅಧ್ಯಕ್ಷ ಮುನೀರ್‌ಅಹ್ಮದ್ ಸಿದ್ದೀಕಿ 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳಕ್ಕೆ ಮೌಲಾನಾಆಜಾದ್ ಶಾಲೆ ಮಂಜೂರು ಮಾಡಿದ್ದಾರೆ. ಅದಕ್ಕೊಂದು ನೆಲೆ ಇಲ್ಲದಂತಾಗಿದ್ದು.ಇಂದಿರಾಕ್ಯಾಂಟೀನ್ ಹಿಂದೆಈಗಿರುವಜಾಗದಲ್ಲಿಕಟ್ಟಡ ನಿರ್ಮಿಸಲು ಮಕ್ಕಳಿಗೆ ಸೂಕ್ತ ಜಾಗವಾಗಿದೆಎಂದು ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು.ಮೊದಲು ನಿಮಗೆ ಇಂದಿರಾಕ್ಯಾಂಟೀನ್ ಹಿಂದಿನ ಶಾಲಾ ಕಟ್ಟಡದಲ್ಲಿ ಅವಕಾಶ ಮಾಡಿಕೊಟ್ಟಿದ್ದೆತಪ್ಪಾಗಿದೆ.ತಾತ್ಕಾಲಿಕವಾಗಿಆರು ತಿಂಗಳಲ್ಲಿ ಬಾಲಕರ ಸರ್ಕಾರಿ ಪದವಿ ಪೂರ್ವಕಾಲೇಜಿನಆವರಣದಲ್ಲಿ ನೂತನಕಟ್ಟಡಕಟ್ಟಿಅದರಲ್ಲಿ ಹೋಗುವಂತೆ ತಿಳಿಸಲಾಗಿತ್ತು ಎಂದು ಶಾಸಕ ಕೆ.ರಾಘವೇಂದ್ರ ಬಿ.ಹಿಟ್ನಾಳ ನುಡಿದು ಬೆಂಗಳೂರಿಗೆ ಹೋಗಿ ಎರಡು ಮೂರು ದಿನ ನಂತರ ಬರುತ್ತೇನೆ ಸ್ಥಳ ಪರೀಶೀಲಿಸೋಣಎಂದು ಹೇಳಿದರು.ಇದಕ್ಕೂ ಮೊದಲು ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ ಅವರೊಂದಿಗೆ ಚರ್ಚಿಸಿ ಈಗಿರುವಜಾಗದಲ್ಲೇ ಮೌಲಾನಾಆಜಾದ್ ಶಾಲಾ ಕಟ್ಟಡಕಟ್ಟುವುದರಿಂದ ಮಕ್ಕಳು ಶೈಕ್ಷಣಿಕವಾಗಿ ಬೆಳೆಯಲು ಸಾಧ್ಯಎಂದು ಗಮನಕ್ಕೆ ತರಲಾಯಿತು.ಅಲ್ಪಸಂಖ್ಯಾತರಕಲ್ಯಾಣಇಲಾಖೆಯಜಿಲ್ಲಾಅಧಿಕಾರಿಅಜ್ಮೀರ್ ಅಲಿ ಇದ್ದರು.