ಮೌಲಾನಾ ಅಜಾದ್ ಸರ್ಕಾರಿ ಮಾದರಿ ಶಾಲೆ ಉದ್ಘಾಟನೆ
Maulana Azad Government Model School inaugurated
ಮೌಲಾನಾ ಅಜಾದ್ ಸರ್ಕಾರಿ ಮಾದರಿ ಶಾಲೆ ಉದ್ಘಾಟನೆ
ರಾಯಬಾಗ, 07 ; ಅಲ್ಪಸಂಖ್ಯಾತರ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಸಕಲ ಸೌಕರ‌್ಯದೊಂದಿಗೆ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿದ್ದು, ಇದರ ಸದುಪಯೋಗವನ್ನು ಅಲ್ಪಸಂಖ್ಯಾತರು ಪಡೆದುಕೊಳ್ಳಬೇಕೆಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಗುರುವಾರ ಪಟ್ಟಣದ ಮಾರ್ಡನ್ ಐ.ಟಿ.ಐ ಕಟ್ಟಡದಲ್ಲಿ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಹಮ್ಮಿಕೊಂಡಿದ್ದ ಮೌಲಾನಾ ಅಜಾದ್ ಸರ್ಕಾರಿ ಮಾದರಿ ಶಾಲೆ (ಆಂಗ್ಲ ಮಾಧ್ಯಮ) ಉದ್ಘಾಟನೆ ಮತ್ತು ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಲ್ಪಸಂಖ್ಯಾತರು ತಮ್ಮ ಮಕ್ಕಳನ್ನು ಈ ಶಾಲೆಗೆ ದಾಖಲಿಸಿ, ಶಾಲೆ ಬೆಳವಣಿಗೆಗೆ ಸಹಕಾರ ನೀಡಬೇಕು. ಈ ಶಾಲೆಯಲ್ಲಿ ಕಲಿಯುವ 1 ರಿಂದ ಪಿ.ಯು.ಸಿ ವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಅಲ್ಪಸಂಖ್ಯಾತ ಪಾಲಕರು ಮತ್ತು ಮಕ್ಕಳು ಪಡೆದುಕೊಳ್ಳಬೇಕು. ಶಿಕ್ಷಕರು ಸರ್ಕಾರದಿಂದ ಬರುವ ಎಲ್ಲ ಸವಲತ್ತುಗಳನ್ನು ಮಕ್ಕಳಿಗೆ ಒದಗಿಸಬೇಕು. ಅಲ್ಪಸಂಖ್ಯಾತ ಸಮಾಜದವರು ಈ ಶಾಲೆಗೆ ಜಾಗ ಒದಗಿಸಿದರೆ, ಶಾಲೆ ಕಟ್ಟಡವನ್ನು ಸುಂದರವಾಗಿ ನಿರ್ಮಿಸಿಕೊಡಲಾಗುವುದು ಎಂದರು.
ಬಿಇಒ ಬಸವರಾಜಪ್ಪ ಆರ್. ಅಧ್ಯಕ್ಷತೆಯನ್ನು ವಹಿಸಿದ್ದರು. ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ, ವಕ್ಫ ಬೋರ್ಡ ತಾಲೂಕಾಧ್ಯಕ್ಷ ಮುಸ್ತಾಕ ಮುಲ್ಲಾ, ಸಿಆರ್‌ಪಿ ಆರ್.ಎಮ್.ಕುರಾಡೆ, ಸದಾಶಿವ ಘೋರೆ್ಡ, ರಾಜಶೇಖರ ಖನದಾಳೆ, ಸದಾನಂದ ಹಳಿಂಗಳಿ, ಜಿಯಾವುಲ್ಲ ಮುಲ್ಲಾ, ಕಲಂದರ ಅತ್ತಾರ, ಫಾರೂಕ ಮೊಮಿನ, ನಜೀರ ಮುಲ್ಲಾ, ಆರೀಫ ಮೌಲಾನಾ, ರಶೀದ ಪಠಾಣ ಸೇರಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.
.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 