ಮಾತೃಹೃದಯ ಬಹಳದೊಡ್ಡದು. ಮಕ್ಕಳ ಪ್ರತಿ ಮಿಡಿತವೇ ಈ ಹೃದಯ.
Matruvandan program
ಸರಕಾರಿ ಪ್ರೌಢಶಾಲೆ ಬುದ್ನಿ ಪಿ.ಎಮ್ನಲ್ಲಿ ಭಕ್ತಿಭಾವದ ಮಾತೃವಂದನಾ ಕಾರ್ಯಕ್ರಮ
ಮುಧೋಳ 16: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ತಾಯಂದಿರ ಮಾತೃವಂದನಾ ಕಾರ್ಯಕ್ರಮವು ಮುಧೋಳ ತಾಲೂಕಿನ ಬುದ್ನಿ ಪಿಎಂ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ರೇವಣಸಿದ್ದಯ್ಯಾ ಮರೆಗದ್ದಿ ಅವರು “ತಾಯಿಯ ಋಣವನ್ನು ಎಂದು ತಿರಿಸಲು ಸಾಧ್ಯವಿಲ್ಲ. ಅವರ ಆಶೀರ್ವಾದ ಮುಖ್ಯ” ಎಂದು ತಿಳಿಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಎಸ್ ಎಂ ಕುರಣಿ ದೈಹಿಕ ಶಿಕ್ಷಣ ಪರೀವೀಕ್ಷಣಾಧಿಕಾರಿಗಳು, “ಈ ತಾಯಂದಿರ ಪಾದಪೂಜಾ ಮಾಡುವದರಿಂದ ನಾವು ಅವರ ಆಶಿರ್ವಾದ ಪಡೆದುಕೊಳ್ಳುತ್ತೇವೆ. ನಮ್ಮ ಕಾರ್ಯ ಖಂಡಿತ ಯಶ ಕಾಣುತ್ತದೆ. ತಾಯಂದಿರ ತ್ಯಾಗ ಹಾಗೂ ಅವರ ಸೇವೆಯನ್ನು ಎಷ್ಟು ಹೋಗಳಿದರು ಸಾಲದು” ಎಂದು ಸವಿವರವಾಗಿ ಹೇಳಿದರು. 10ನೇ ವರ್ಗದ ಮುಧೋಳ ತಾಲೂಕಾ ನೋಡಲ್ ಅಧಿಕಾರಿಗಳಾದ ಎಸ್ ಡಿ ನೀಲಗುಂದರವರು “ಮಾತೃಹೃದಯ ಬಹಳದೊಡ್ಡದು. ಮಕ್ಕಳ ಪ್ರತಿ ಮಿಡಿತವೇ ಈ ಹೃದಯ. ಅವರಢ ಆಸೆಯನ್ನು ಈಡೇರಿಸುವವರು ನೀವಾಗಬೇಕೆಂದು” ಹೇಳಿದರು. ಮುಖ್ಯಗುರುಮಾತೆಯರಾದ ಎ. ವಾಯ್ ಲಂಗೋಟಿರವರು “ತಾಯಂದಿರ ಆಶಿರ್ವಾದ ಹಾಗೂ ಊರಿನವರ ಸಹಕಾರ ಹಾಗೂ ಇಲಾಖೆಯ ಮಾರ್ಗದರ್ಶನದಿಂದ ನಾವು ಈ ವರ್ಷವೂ 100ರಷ್ಟು ಫಲಿತಾಂಶ ನೀಡುತ್ತೇಋೆ ಎಂದು ವಾಗ್ದಾನ ಮಾಡಿದರು.ಊರಿನ ಹಿರಿಯರು ಹಾಗೂ ಶಿಕ್ಷಣಪ್ರೇಮಿಗಳಾದ ಸುಭಾಷ ಕೊರಡ್ಡಿರವರು “ಮಕ್ಕಳ ಲಾಲನೆ ಪಾಲನೆಯಲ್ಲಿ ತಾಯಿಯ ಪಾತ್ರ ಬಹು ಮುಖ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿಮ್ಮ ಮಕ್ಕಳು ಒಳ್ಳೆಯ ಭವಿಷ್ಯ ಹೊಂದುವಂತಾಗಲಿ” ಎಂದು ಆಶಿಸಿದರು. ಹಿರಿಯ ಶಿಕ್ಷಕರಾದ ಎಸ್ ಎಸ್ ಗೌರಗೊಂಡರವರು “ಅನೇಕ ಮಹಾತ್ಮರಾದ ಶಿವಾಜಿ. ಥಾಮಸ್ ಅಲ್ವಾ ಎಡಿಸನ್ ರಂಥವರು ಜೀವನದಲ್ಲಿ ತಾಯಿಯ ಪ್ರಭಾವದಿಂದ ಸಾಕಷ್ಡು ಸಾಧನೆ ಮಾಡಿದ್ದಾರೆ. ತಾವೂ ಸಹ ಅಂತಹ ತಾಯಂದಿರಾಬೇಕೇಂದು” ಆಶಯ ವ್ಯಕ್ತಪಡಿಸಿದರು.ಇನ್ನೋರ್ವ ಹಿರಿಯ ಶಿಕ್ಷಕರಾದ ಎಂ ಎಸ್ ಚಿತ್ತರಗಿರವರು “ತಾಯಂದಿರು ಸಂಸ್ಕೃತಿಯ ರಾಯಭಾರಿಗಳು. ನಿಮ್ಮ ಸೇವೆ ಅವಿಸ್ಮರಣಿಯ” ಎಂದರು. ಎಲ್ಲ ವಿದ್ಯಾರ್ಥಿಗಳು ಭಕ್ತಿ ಹಾಗೂ ಪೂಜ್ಯಭಾವದಿಂದ ತಮ್ಮ ತಾಯಂದಿರ ಪಾದಪೂಜೆ ಮಾಡಿದರು.
ಈ ಕಾರ್ಯಕ್ರಮವನ್ನು ಡಿಕೆ ಟಕ್ಕಳಕಿ ಗುರುಗಳು ನಿರೂಪಿಸಿದರು. ಪಿ ಎಸ್ ಅವಟಿ ಗುರುಗಳು ಸ್ವಾಗತಿಸಿದರು. ಪಿಎಲ್ ಬಗಲಿ ಗುರುಗಳು ವಂದಿಸಿದರು. ಅಸಿನಾಬಿ ಗುರುಮಾತೆಯರು ಹಾಜರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 