ಗಣಿತ ಕಲಿಕಾ ಆಂದೋಲನ; ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣ
ಕೊಪ್ಪಳ 18: ಜೆ ಹೆಚ್ ಪಟೇಲ್ ಸಭಾಂಗಣ ಜಿಲ್ಲಾ ಪಂಚಾಯತ್ ಕೊಪ್ಪಳ "ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣ" ಕಾರ್ಯಕ್ರಮವನ್ನು ರಾಹುಲ್ ರತ್ನಮ್ ಪಾಂಡೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಈ ಮೂಲಕ ಸರಕಾರಿ ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರವರಿಗೆ ಮತ್ತು ಗ್ರಾಮ ಪಂಚಾಯತ ಅಧ್ಯಕ್ಷರು, ಪಿ.ಡಿ.ಓ ಮುಖ್ಯ ಜಿಲ್ಲಾಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಮಟ್ಟದ ಗಣಿತ ಸ್ಪರ್ಧೆಯ ಜಿಲ್ಲಾ ವರದಿಯನ್ನು ಬಿಡುಗಡೆ ಮಾಡುವುದರ ಮೂಲಕ ಅದರ ಫಲಿತಾಂಶವನ್ನು ವಿಚಾರ ಸಂಕಿರಣದಲ್ಲಿ ಚರ್ಚಿಸಲಾಯಿತು.
ಎಚ್.ಬಿ.ಕಣ್ಣಿ, ಪ್ರೋಗ್ರಾಮ್ ಮ್ಯಾನೇಜರ್ ಅಕ್ಷರ ಫೌಂಡೇಶನ್‌ಪ್ರಾಸ್ತಾವಿಕ ಮಾತನಾಡಿ, ಅಕ್ಷರ ಫೌಂಡೇಶನ್ ಸಂಸ್ಥೆಯು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯಾಗಿದ್ದು 2000 ಇಸ್ವಿಯಲ್ಲಿ "ಪ್ರತಿಯೊಂದು ಮಗುವು ಶಾಲೆಯಲ್ಲಿದ್ದು ಉತ್ತಮವಾಗಿ ಕಲಿಯುತ್ತಿರಲಿ"ಎಂಬ ಧೈಯ ವಾಕ್ಯದೊಂದಿಗೆ ಪ್ರಾರಂಭವಾಯಿತು. ಅಕ್ಷರ ಫೌಂಡೇಶನ್ ಸಂಸ್ಥೆಯು ಶಿಕ್ಷಣ ಇಲಾಖೆಯ ಸಹಭಾಗಿತ್ವದೊಂದಿಗೆ ಮಕ್ಕಳ ಗುಣಾತ್ಮಕ ಕಲಿಕೆಗಾಗಿ ಅನೇಕ ಯಶಸ್ವಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮುಖ್ಯವಾಗಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಗಣಿತದ ಕಲಿಕೆಯನ್ನು ಹೆಚ್ಚಿಸಲು ಆಯ್ಕೆ ಜಿಲ್ಲೆಗಳ ಕೆಲ ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಕಾರ್ಯವನ್ನು ಕೈಗೆತ್ತಿಕೊಂಡಿತು. ಇದರ ಪರಿಣಾಮವಾಗಿ 2014-15ನೇ ಸಾಲಿನಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಅಧಿಕೃತವಾಗಿ "ಗಣಿತ ಕಲಿಕಾ ಆಂದೋಲನ"ದ ಯೋಜನೆಯನ್ನು ತಮ್ಮ ಬಜೆಟ್ ನಲ್ಲಿ ಮಂಡಿಸಿ, ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅನುಷ್ಠಾನ ಮಾಡಲು ಅನುಮೋದಿಸಲಾಯಿತು ಮತ್ತು ಗಣಿತ ವಿಷಯವನ್ನು ಸರಳೀಕರಣಗೊಳಿಸಲು ಚಟುವಟಿಕೆಯಾಧಾರಿತ ಮತ್ತು ಕಲಿಕೆಗೆ ಪೂರಕವಾಗುವ 22 ಪರಿಕರಗಳನ್ನು ಕಿಟ್ ಗಳನ್ನು ಎಲ್ಲಾ ಶಾಲೆಗಳಿಗೆ ವಿತರಿಸಲಾಯಿತು.
ಗಣಿತ ಕಲಿಕಾ ಆಂದೋಲನದ ವಿಸ್ತರಣೆ: ಗಣಿತ ಕಲಿಕಾ ಆಂದೋಲನದ ಯೋಜನೆಯು ಹಂತ: 1, ಹಂತ 2 ಮತ್ತು ಹಂತ: 3 ರಂತೆ ಇಡೀ ಕರ್ನಾಟಕ ಜಿಲ್ಲೆಯ ಎಲ್ಲಾ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿಸ್ತರಿಸಲಾಗಿದೆ. ಅಂತಯೇ ಗಣಿತ ಕಲಿಕಾ ಅಂದೋಲನದಲ್ಲಿ ಸಮುದಾಯ, ಶೈಕ್ಷಣಿಕ ಸ್ವಯಂ ಸೇವಕರು, ಗ್ರಾಮ ಪಂಚಾಯತ ಮಟ್ಟದಲ್ಲಿ ಇಬ್ಬರು ತಂಡದ ನಾಯಕರು, ಖಆಒಅ, ಜನ ಪ್ರತಿನಿಧಿಗಳು, ಪಂಚಾಯತ್ ರಾಜ್ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ 2015-16 ನೇ ಸಾಲಿನಿಂದ ಸರಕಾರಿ ಪ್ರಾಥಮಿಕ ಶಾಲೆಯ ಗ್ರಾಮೀಣ ಭಾಗದ ಮಕ್ಕಳಲ್ಲಿ ಗುಣಾತ್ಮಕ ಕಲಿಕೆಗಾಗಿ ಹಾಗೂ ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಸ್ಪರ್ಧಾತ್ಮಕವಾಗಿ ಅಭಿವೃದ್ಧಿಪಡಿಸಲು "ಗ್ರಾಮ ಪಂಚಾಯತಿ ಮಟ್ಟದ ಗಣಿತ ಸ್ಪರ್ಧೆಯ "ಪರಿಕಲ್ಪನೆಯನ್ನು ಜಾರಿಗೆ ತರಲಾಯಿತು.
ಅಂದಿನಿಂದ ಈ ವರೆಗೂ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಸಮುದಾಯ, ಶೈಕ್ಷಣಿಕ ಸ್ವಯಂ ಸೇವಕರು, ಗ್ರಾಮ ಪಂಚಾಯತ ಮಟ್ಟದ ಶೈಕ್ಷಣಿಕ ತಂಡದ ನಾಯಕರು ಹಾಗೂ ಅಕ್ಷರ ಫೌಂಡೇಶನ್ ಸಹಭಾಗಿತ್ವದಲ್ಲಿ ಪ್ರತೀ ಶೈಕ್ಷಣಿಕ ವರ್ಷದಲ್ಲಿ ಗ್ರಾಮ ಪಂಚಾಯತ ಮಟ್ಟದ ಗಣಿತ ಸ್ಪರ್ಧೆಗಳನ್ನು ಹಂತ ಹಂತವಾಗಿ ಆಯೋಜನೆ ಮಾಡುತ್ತಾ ಬಂದಿದ್ದು, ಪ್ರಸ್ತುತ 2024-25 ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ 28 ಜಿಲ್ಲೆಗಳಲ್ಲಿ ಒಟ್ಟು 4900 ಗ್ರಾಮ ಪಂಚಾಯತಿಗಳಲ್ಲಿ 4,5 ಮತ್ತು 6ನೇ ತರಗತಿಯ ಒಟ್ಟು 7 ಲಕ್ಷ ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ.
ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 150 ಗ್ರಾಮ ಪಂಚಾಯತಿ ಮಟ್ಟದ ಗಣಿತ ಸ್ಪರ್ಧೆಗಳನ್ನು ನಡೆಸಲಾಯಿತು. 4ನೇ ತರಗತಿಯಿಂದ 6ನೇ ತರಗತಿಯ ಒಟ್ಟು 23,000 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ.
ಗ್ರಾಮ ಪಂಚಾಯತಿ ಮಟ್ಟದ ಗಣಿತ ಸ್ಪರ್ಧೆಗಳಲ್ಲಿ ಭಾಗವಹಿಸಿದಂತಹ ತರಗತಿವಾರು ಮಕ್ಕಳ ಫಲಿತಾಂಶದ ವರದಿಯು ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತಿ ಮತ್ತು ಪ್ರತಿಯೊಂದು ಸರಕಾರಿ ಶಾಲೆಗಳಿಗೆ ಪ್ರತೀ ವರ್ಷವೂ ತಲುಪಿಸಲಾಗುತ್ತಿದೆ.
ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣ ಕಾರ್ಯಕ್ರಮ: 2024-25 ನೇ ಸಾಲಿನಲ್ಲಿ ಗ್ರಾಮ ಪಂಚಾಯತಿ ಮಟ್ಟದ ಗಣಿತ ಸ್ಪರ್ಧೆಗಳು ಎಲ್ಲರ ಸಹಕಾರದೊಂದಿಗೆ ಅತ್ಯುತ್ತಮ ರೀತಿಯಲ್ಲಿ ಯಶಸ್ಸನ್ನು ಸಾಧಿಸಿದೆ. ಅಂತೆಯೇ ಶಿಕ್ಷಣ ಇಲಾಖೆಗೆ ಮತ್ತು ಗ್ರಾಮ ಪಂಚಾಯತ್ ಇಲಾಖೆಗೆ ಅಭಿನಂದಿಸುವ ಉದ್ದೇಶದಿಂದ, ಉತ್ತಮ ಫಲಿತಾಂಶವನ್ನು ಪಡೆದ ಕೊಪ್ಪಳ ಜಿಲ್ಲೆಯ 25 ಶಾಲೆಗಳು ಮತ್ತು 25 ಗ್ರಾಮ ಪಂಚಾಯತಗಳನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ನಲೀನ್ ಅತುಲ್ ಜಿಲ್ಲಾಧಿಕಾರಿಗಳು ಹಾಗೂ ರಾಹುಲ್ ರತ್ನಮ್ ಪಾಂಡೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ , ಮಲ್ಲಿಕಾರ್ಜುನ್ ತೊದಲಬಾಗಿ ಉಪಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್, ಶ್ರೀಶೈಲ್ ಬೀರಾದರ್ ಡಿ.ಡಿ.ಪಿ.ಐ ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ ದೊಡ್ಡ ಬಸಪ್ಪ ನೀರಲಕೇರಿ ಪ್ರಾಚಾರ್ಯರು ಡಯಟ್ ಕೊಪ್ಪಳ, ಶರಣಬಸನಗೌಡ ಪಾಟೀಲ್ ಜಿಲ್ಲಾಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಗವಿಸಿದ್ದೇಶ್ವರ ಸ್ವಾಮಿ ರಾಚಯ್ಯ ಬೇಣಕಲ್‌ಮಠ ಉಪನ್ಯಾಸಕರು ಜಿ.ಕೆ.ಎ ನೋಡಲ್ ನಾಗರಾಜ ವೆಂಕಟಾಪೂರ ಅಧ್ಯಕ್ಷರು ಗ್ರಾಮ ಪಂಚಾಯತಿ ಬನ್ನಿಕೊಪ್ಪ, ಹೆಚ್ ಬಿ ಕಣ್ಣಿ ಅಕ್ಷರ ಫೌಂಡೇಷನ್ ಅಡಿವೇಶ ನೀರಲಕೇರಿ ವಿಭಾಗೀಯ ಕ್ಷೇತ್ರ ಸಂಯೋಜಕರು ಕಲ್ಬುರ್ಗಿ ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಧಿಕಾರಿಗಳು, ಬಿ ಆರ್ ಪಿ ನೂಡಲ್ ಅಧಿಕಾರಿಗಳು ಶಾಲಾ ಶಿಕ್ಷಣ ಇಲಾಖೆ 25 ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ, 25 ಶಾಲಾ ಮುಖ್ಯ ಗುರುಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.