ಗಣಿತ ಗಣಕ ಪಿಎಬಿ ಅನುಮೋದಿತ ಜ್ಞಾನಸೇತು ತರಬೇತಿ: ಕರ್ತವ್ಯ ನಿರತ ಪ್ರಾಥಮಿಕ ಶಾಲಾ ಮೌಲ್ಯ ಶಿಕ್ಷಣ ಕಾರ್ಯಗಾರ

 ಗಣಿತ ಗಣಕ ಪಿಎಬಿ ಅನುಮೋದಿತ ಜ್ಞಾನಸೇತು ತರಬೇತಿ: ಕರ್ತವ್ಯ ನಿರತ ಪ್ರಾಥಮಿಕ ಶಾಲಾ ಮೌಲ್ಯ ಶಿಕ್ಷಣ ಕಾರ್ಯಗಾರ Mathematics Computer PAB Approved Knowledge Bridge Training: On-duty Primary School Value Education

 

ರಾಣೆಬೆನ್ನೂರು 21 :  ಇಲ್ಲಿನ ಬಿಎ ಜೆಎಸ್‌ಎಸ್ ಸಮೂಹ ಶಿಕ್ಷಣ ಕಾಲೇಜು ಭವನದಲ್ಲಿ 20 ದಿವಸಗಳ ಕಾಲ    ಶಿಕ್ಷಕರಿಗೆ.ಜ್ಞಾನ ಸೇತು ಕಲಿಕಾದೀಪ ಓದು ಕರ್ನಾಟಕ ಗಣಿತ ಗಣಕ ಮೌಲ್ಯ ಶಿಕ್ಷಣ  ವಿಷಯಗಳ ಕುರಿತಾಗಿ  ತಾಲೂಕಿನ 800ಕ್ಕೂ ಹೆಚ್ಚು ಸೇವಾನಿರತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ತರಬೇತಿ ಕಾರ್ಯಕ್ರಮ ನಡೆಯಿತು. ಅದರ ಸಮಾರೋಪ ಸಮಾರಂಭವು ಇತ್ತೀಚೆಗೆ ನಡೆಯಿತು. ಸಮಾರೋಪದಲ್ಲಿ ಪಾಲ್ಗೊಂಡಿದ್ದ, ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಕಾರ್ಯದರ್ಶಿಗಳಾದ  ಡಾ. ಆರ್ ಎಂ.ಕುಬೇರ​‍್ಪ ಅವರು, ಶಿಕ್ಷಣ ಎಂದಿಗೂ ನಿಂತ ನೀರಲ್ಲ.

ಅದು ಹೊಸ ಹೊಸ ಆವಿಷ್ಕಾರಗಳನ್ನು ಪಡೆಯುವ ಮೂಲಕ ಹೊಸ ಹೊಸ ಚೈತನ್ಯ ಮತ್ತು ಜ್ಞಾನ ಅಭಿವೃದ್ಧಿಪಡಿಸುವ ಬಹು ಮಾಧ್ಯಮವಾಗಿದೆ. ಸಮಾಜದಲ್ಲಿ ವೇದ ಇತಿಹಾಸಕಾಲಗಳಿಂದಲೂ ನಮ್ಮ ಗುರುಕುಲ ಸಂಸ್ಕೃತಿಯ  ಪರಂಪರೆಯ ಮೂಲಕ ಇಂದಿಗೂ ಶಿಕ್ಷಣ ಪ್ರಸಾರ ಸೇವೆ ನಡೆಯುತ್ತಲೇ ಸಾಗಿದೆ. ಬದಲಾದ ವ್ಯವಸ್ಥೆಗೆ ಆಧುನಿಕ ಶಿಕ್ಷಣದ ಪದ್ಧತಿಗೆ ಶಿಕ್ಷಕರಾದ ನಾವುಗಳು ಇಂತಹ ತರಬೇತಿ ಕಾರ್ಯಗಾರಗಳ ಮೂಲಕ ಶಿಕ್ಷಣ ಸ್ಪರ್ಧೆಗೆ ಮೈಯೋಡಬೇಕಾದ ಅಗತ್ಯ ಮತ್ತು ಅನಿವಾರ್ಯವಿದೆ ಎಂದರು.       

 ಶಿಕ್ಷಕರ ಕರ್ತವ್ಯ ಮತ್ತು ಜವಾಬ್ದಾರಿ ಸರ್ಕಾರದ ಮೇಲಿದೆ. ಶಿಕ್ಷಕರಿಗೆ ಎಷ್ಟೇ ಒತ್ತಡಗಳಿದ್ದರೂ ಅವರ ಕರ್ತವ್ಯವನ್ನು ಅವರುಗಳು ಪ್ರಾಮಾಣಿಕವಾಗಿ ನಿರ್ವಹಿಸಲೇಬೇಕು. ಅದು ಶಿಕ್ಷಕರಾದವರ ಬಹುದೊಡ್ಡ ಜವಾಬ್ದಾರಿಯಾಗಿದೆ ಎಂದರು. ರಾಜ್ಯದಲ್ಲಿ ಶಿಕ್ಷಕರಿಗೆ ಅನೇಕ ಸಮಸ್ಯೆಗಳಿವೆ ಸಮಸ್ಯೆಗೆ ಪರಿಹಾರ  ಅಗತ್ಯವಾಗಿವೆ. ಕಾರ್ಯಗಾರಗಳು ಶಿಕ್ಷಕರಲ್ಲಿ ಮತ್ತಷ್ಟು ಪ್ರಬುದ್ಧತೆ ಯಶಸ್ಸು ಸಾಧಿಸಲು ತುಂಬಾ ಸಹಕಾರಿಗಳಾಗಿವೆ ಎಂದ,  ಪರಿಹಾರದ ಕುರಿತು ಹಾಗೂ ಶಿಕ್ಷಕ- ಶಿಕ್ಷಕರು ಜ್ಞಾನಜ್ಯೋತಿಯ ಪ್ರಚಾರಕರು. ಬೋಧನೆಯ ಜೊತೆಗೆ ಶೈಕ್ಷಣಿಕ ಕ್ರಾಂತಿಯ  ಲೇಖನಗಳನ್ನು ಬರೆದು ಮಂಡಿಸಲು ಮುಂದಾಗಬೇಕು ಎಂದು ಡಾ. ಕುಬೇರ​‍್ಪ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಡಾ. ಆರ್‌. ಎಂ ಕುಬೇರ​‍್ಪ ಅವರನ್ನು ಕಾರ್ಯಗಾರ ಸಂಘಟನೆಯ ಮುಂಚೂಣಿಯ  ಸಾರ್ವಜನಿಕ ಶಿಕ್ಷಣ ಇಲಾಖೆ,  ತಾಲೂಕ ಶಿಕ್ಷಕ ಹಾಗೂ ಅಧ್ಯಾಪಕರ ಒಕ್ಕೂಟದ ಪರವಾಗಿ ಅಭಿನಂದಿಸಿ, ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ  ಶ್ಯಾಮ ಸುಂದರ ಅಡಿಗ ವಹಿಸಿದ್ದರು. ವೇದಿಕೆಯಲ್ಲಿ ಸಮನ್ವಯಾಧಿಕಾರಿ ಮಂಜು ನಾಯಕ್, ಶಿಕ್ಷಣ ಕಾಲೇಜಿನ ಪ್ರಾಚಾರ್ಯ  ಡಾ. ಎಂ. ಎಂ. ಮೃತ್ಯುಂಜಯ,  ದೈಹಿಕ ಶಿಕ್ಷಣಾಧಿಕಾರಿ ಪ್ರಭಾಕರ ಚಿಂದಿ, ಟಿಪಿಈಪಿ,  ಗಂಗಪ್ಪ ನಾಯಕ್, ಬಿಆರ್ ಪಿ ತರಬೇತಿ ನೋಡಲ್, ವಿಜಯ ಹಾಡಿನವರ್, ರವಿ ಆರ್‌. ಪಾಟೀಲ್, ಸೇರಿದಂತೆ ಇಲಾಖೆಯ ಮತ್ತಿತರ ಸಿಬ್ಬಂದಿ, ಸಂಪನ್ಮೂಲ ವ್ಯಕ್ತಿಗಳು ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.