ಮಠಗಳು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಜಾಗೃತಿಯ ಕೇಂದ್ರಗಳು
Mathas are centers of religious, educational, and social awareness
ಕುಕನೂರು 16 : ಮಠಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ. ಅವು ಸಮಾಜದಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಪ್ರಮುಖ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ಅರಳೆಳೆ ನಾಗರಾಜ್ ಹೇಳಿದರು. ಕುಕನೂರು ಪಟ್ಟಣದ ಅನ್ನದಾನೀಶ್ವರ ಶಾಖಾಮಠದಲ್ಲಿ ನಡೆದ ಜಗದ್ಗುರು ಅನ್ನದಾನೀಶ್ವರರ ಜಾತ್ರಾ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಠಗಳ ಮೂಲಕ ನಡೆಯುವ ಅನ್ನದಾಸೋಹ, ಧಾರ್ಮಿಕ ಪ್ರವಚನ, ಪುರಾಣ ಕಾರ್ಯಕ್ರಮಗಳು ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳು ಜನರಲ್ಲಿ ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತವೆ. ಇಂತಹ ಕಾರ್ಯಗಳಿಗೆ ಭಕ್ತರು ಹಾಗೂ ಸಾರ್ವಜನಿಕರು ನಿರಂತರವಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಜಾತ್ರಾ ಸಮಿತಿ ಅಧ್ಯಕ್ಷ ಶರಣಪ್ಪ ಚಂಡೂರು ಮಾತನಾಡಿ, ಜಗದ್ಗುರು ಅನ್ನದಾನೀಶ್ವರರ ಜಾತ್ರಾ ಮಹೋತ್ಸವವು ಭಕ್ತರನ್ನು ಒಗ್ಗೂಡಿಸುವುದರ ಜೊತೆಗೆ ಧಾರ್ಮಿಕ ಹಾಗೂ ಸಾಮಾಜಿಕ ಸಂದೇಶ ಸಾರುವ ಮಹತ್ವದ ಕಾರ್ಯಕ್ರಮವಾಗಿದೆ. ಜಾತ್ರಾ ಮಹೋತ್ಸವವನ್ನು ಶಿಸ್ತುಬದ್ಧವಾಗಿ ಹಾಗೂ ಭಕ್ತಿಭಾವದಿಂದ ಆಚರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದರು.
ಪುರಾಣ ಸಮಿತಿ ಅಧ್ಯಕ್ಷ ಶಿವು ಯತ್ನಟ್ಟಿ ಮಾತನಾಡಿ, ಚಿಕ್ಕನಕೋಪ್ಪದ ಚನ್ನವೀರ ಶರಣರ ಪುರಾಣ ಕಾರ್ಯಕ್ರಮವು ಸೋಮವಾರದಿಂದ ಪ್ರತಿದಿನ ಸಂಜೆ 7 ಗಂಟೆಗೆ ಆರಂಭಗೊಳ್ಳಲಿದೆ. ಗುಡ್ಡದ ಅನ್ವೇರಿಯ ಪೂಜ್ಯ ಶಿವಯೋಗೀಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಪುರಾಣ ಪ್ರವಚನ ನಡೆಯಲಿದ್ದು, ಖಾದರಸಾಬ್ ಸಿದ್ದನಕೊಪ್ಪ ಹಾಗೂ ವಿರಯ್ಯ ಗೋಲ್ರೆಕೊಪ್ಪ ಅವರಿಂದ ಸಂಗೀತ ಸೇವೆ ಇರಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಠದ ಆಡಳಿತಾಧಿಕಾರಿ ಸಂಗಮೇಶ ಕಲ್ಮಠ, ಡಾ. ಜಂಭಣ್ಣ ಅಂಗಡಿ, ಕಾಶೀಸಾಬ್ ಸಂಗಟಿ, ರೈತ ಸಂಘದ ಅಧ್ಯಕ್ಷ ದೇವಪ್ಪ ಸೋಬಾನದ, ಪುರಾಣ ಸಮಿತಿ ಕಾರ್ಯದರ್ಶಿ ಈರಣ್ಣ ಶಿರೂರ, ಉಪಾಧ್ಯಕ್ಷ ಮಂಜುನಾಥ ಮುಂಡರಗಿ, ಕಾರ್ಯದರ್ಶಿ ಆನಂದ ಹೊಸಮನಿ, ರಫೀಸಾಬ್ ಬಾಳಗೇರಿ, ಶಿವು ಗುಟ್ಟಿ, ಪ್ರಕಾಶ ಹತ್ತಿಕಟಗಿ ಸೇರಿದಂತೆ ಗಣ್ಯರು, ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 