ಸಂಭಾವ್ಯ ಲಿಂಕ್ಡ್ ಕ್ರೆಡಿಟ್ ಯೋಜನೆಗೆ ಮೇಟಿ ಚಾಲನೆ
ಬಾಗಲಕೋಟೆ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ (ನಬಾರ್ಡ) ಸಿದ್ದಪಡಿಸಿದ 2020-21ನೇ ಸಾಲಿನ ಸಂಭಾವ್ಯ ಲಿಂಕ್ಡ್ ಕ್ರೆಡಿಟ್ ಯೋಜನೆಗೆ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಚಾಲನೆ ನೀಡಿದರು.
ಜಿ.ಪಂ ಸಭಾಭವನದಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಅಗ್ರಣಿ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಲಿಂಕ್ಡ್ ಕ್ರೆಡಿಟ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ನಬಾರ್ಡನ ಸಂಭಾವ್ಯ ಲಿಂಕ್ಡ್ ಯೋಜನೆಯು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಜನರಿಗೆ ಇದರ ಪ್ರಯೋಜನವಾಗುವಂತೆ ಮಾಡಲು ತಿಳಿಸಿದರು.
ಜಿಲ್ಲಾ ಅಗ್ರಣಿ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಗೋಪಾಲ್ ರೆಡ್ಡಿ ಮಾತನಾಡಿ ಈ ಕ್ರೆಡಿಟ್ ಯೋಜನೆಯಲ್ಲಿ ದೀಘರ್ಾವಧಿಯ ಭೌತಿಕ ಸಾಮಥ್ರ್ಯ, ಮೂಲಸೌಕರ್ಯ ಬೆಂಬಲದ ಲಭ್ಯತೆ, ಮಾಕರ್ೆಟಿಂಗ್ ಸೌಲಭ್ಯಗಳು, ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಗಣನೆಗೆ ತೆಗೆದುಕೊಂಡು ಬ್ಯಾಂಕ್ ಕ್ರೆಡಿಟ್ ಮೂಲಕ ಅಸ್ತಿತ್ವದಲ್ಲಿರುವ ಅಭಿವೃದ್ದಿಯ ಸಾಮಥ್ರ್ಯವನ್ನು ನಕ್ಷೆ ಮಾಡುವ ಮೂಲ ಉದ್ದೇಶದಿಂದ ಸಂಭಾವ್ಯ ಲಿಂಕ್ಡ್ ಕ್ರೆಡಿಟ್ ಯೋಜನೆ (ಪಿಎಲ್ಪಿ) ಸಿದ್ದಪಡಿಸಲಾಗಿದೆ ಎಂದು ತಿಳಿಸಿದರು.
ಪಿಎಲ್ಪಿ ಯೋಜನೆಯನ್ನು ಆದ್ಯತೆ ವಲಯದ ಅಡಿಯಲ್ಲಿ ಬಳಸಬಹುದಾದ ಸಾಲದ ಸಾಮಥ್ರ್ಯವನ್ನು 9952.97 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.ಈ ಯೋಜನೆಯ ಪ್ರಕಾರ ಕೃಷಿ (ಬೆಳೆ ಉತ್ಪಾದನೆ + ಕೃಷಿ) 8496.70 ಕೋಟಿ ರೂ., ಎಂಎಸ್ಎಂಇ 834.12 ಕೋಟಿ ರೂ., ರಪ್ತು ಸಾಲ 111.28 ಕೋಟಿ ರೂ., ಶಿಕ್ಷಣ 52.66 ಕೋಟಿ, ವಸತಿ 279.40 ಕೋಟಿ, ನವೀಕರಿಸಬಹುದಾದ ಶಕ್ತಿ 60.76 ಕೋಟಿ ಮತ್ತು ಸಾಮಾಜಿಕ ಮೂಲಸೌಕರ್ಯ 118.05 ಕೋಟಿ ರೂ. ಒಳಗೊಂಡಿದೆ. ಸಂಭಾವ್ಯ ಲಿಂಕ್ ಕ್ರಿಡಿಟ್ ಯೋಜನೆಯ ವಿಷಯ ಹೈಟೆಕ್ ಅಗ್ರಿಕಲ್ಚರ ಆಗಿದೆ ಎಂದು ತಿಳಿಸಿದರು.ನಬಾರ್ಡನ ಜಿಲ್ಲಾ ಅಭಿವೃದ್ದಿ ವ್ಯವಸ್ಥಾಪಕಿ ಯಮುನಾ ಪೈ ಮಾತನಾಡಿ ಬ್ಯಾಂಕುಗಳು ಈ ಡಾಕ್ಯೂಮೆಂಟ್ನ್ನು ಬಳಸಿಕೊಂಡು ಸ್ಥಳೀಯ ಆಥರ್ಿಕತೆಯನ್ನು ಉತ್ತೇಜಿಸಲು ಕೋರಿದರು. ಬ್ಯಾಂಕ್ಗಳು ಗ್ರಾಮೀಣ ಸಾಲವನ್ನು ತಲುಪಿಸಲು ಸರಕಾರ, ವಿಶ್ವವಿದ್ಯಾಲಯಗಳು ಮತ್ತು ಕೆವಿಕೆಗಳ ಲೈನ್ ಇಲಾಖೆಗಳ ಬೆಂಬಲವೂ ಬಹಳ ನಿಣರ್ಾಯಕವಾಗಿದೆ ಎಂದರು.ಸಭೆಯಲ್ಲಿ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಮುಖ್ಯ ವ್ಯವಸ್ಥಾಪಕ ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 