ಅಲೆಮಾರಿ 59 ಜಾತಿಗಳಿಗೆ ಮೀಸಲಾತಿಗೆ ಒತ್ತಾಯಿಸಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ

ಅಲೆಮಾರಿ 59 ಜಾತಿಗಳಿಗೆ  ಮೀಸಲಾತಿಗೆ ಒತ್ತಾಯಿಸಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ  Massive protest in Koppal demanding reservation for 59 nomadic castes

ಅಲೆಮಾರಿ 59 ಜಾತಿಗಳಿಗೆ  ಮೀಸಲಾತಿಗೆ ಒತ್ತಾಯಿಸಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ  

ಕೊಪ್ಪಳ 08:  59 ಅಲೆಮಾರಿ ಮತ್ತು ಅರೆ ಅಲೆಮಾರಿ ಜಾತಿಗಳವರು ನೆಲೆ ಇಲ್ಲದೆ ಕಾಡಿನಲ್ಲಿ ರಸ್ತೆ ಬದಿಗಳಲ್ಲಿ ವಾಸಿಸಲು ಸೂರ್ ಇಲ್ಲದೆ ಪ್ಲಾಸ್ಟಿಕ್ ಶಡ್ದು ಜೋಪಡಿ ಗುಡಿಸಲುಗಳಲ್ಲಿ ಚಿಂದಿ ಬಟ್ಟೆಯಲ್ಲಿ ಹಗಲು ವೆಷ ಧರಿಸಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ.ಕೂಡಲೇ ಸರ್ಕಾರ ಅಲೆಮಾರಿ ಜನಾಂಗದ ಬದುಕಿಗೆ ಅವಶ್ಯಕತೆ ಇರುವ ಮತ್ತು ಅವರ ವಿವಿಧ ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ದಾದಾಸಾಹೇಬ್ ಡಾ,ಎನ್ ಮೂರ್ತಿ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಹಾಗೂ ಅಂಬೇಡ್ಕರ್ ಅವರು ಸ್ಥಾಪಿತ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಜಿಲ್ಲಾ ಕೇಂದ್ರ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬುಧವಾರದಂದು ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಯಿತು,  ಇಂತಹ ಹೀನಾಯ ಸ್ಥಿತಿಯ ಕಿಂಚಿತ್ತು ಪರಿಜ್ಞಾನ ಸರ್ಕಾರಕ್ಕಿಲ್ಲದೆ ಅಧಿಕಾರದಿಂದ ಲಾಲಸೆಯಿಂದ ಮೀಸಲಾತಿಯನ್ನು ರಾಜಕೀಯ ದಾಳವಾಗಿಸಿಕೊಂಡು ಈ ಅಲೆಮಾರಿ ಸಮಾಜವನ್ನು ಸಮಾಪ್ತಿ ಮಾಡಲು ಹೊರಟಿದೆ ಇದು ಖಂಡನೀಯ ವಾಗಿದೆ ಎಂದು ಪ್ರತಿಭಟನಾಕಾರರ ನೇತೃತ್ವ ವಹಿಸಿದ ಸಮಿತಿಯ ಜಿಲ್ಲಾಧ್ಯಕ್ಷ ಏರಿಸ್ವಾಮಿ ಆರ್, ಕನಕಗಿರಿ ರವರು ತಿಳಿಸಿದ್ದಾರೆ.  

ಪರಿಶಿಷ್ಟ ಏಕೆ ಏಡಿ ಮತ್ತು ಏ ಏ ಮೂಲ ಜಾತಿಗಳನ್ನು ಸಹ ಗುರುತಿಸಿ ದಾಖಲಿಸದೆ ಬೇಕಾಬಿಟ್ಟಿ ಮೀಸಲಾತಿ ವರ್ಗಿಕರಿಸಿ ಕೈ ತೊಳೆದುಕೊಂಡಿದೆ. ರಾಜ್ಯ ಸರ್ಕಾರದ ಈ ಕ್ರಮವನ್ನು ಖಂಡಿಸಿ ಅಲೆಮಾರಿ ಜಾತಿಗಳು ನಗರದ ಪ್ರೀಡಂ ಪಾರ್ಕನಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು -ನಿರ್ಲಕ್ಷಿಸಿರುವ ಸರ್ಕಾರ ಕೂಡಲೇ ಅಲೆರಮಾರಿಗಳ ಹಕ್ಕೊತ್ತಾಯ ಈಡೇರಿಸಲು ಆಗ್ರಹಿಸಿ ಹಾಗೂ ವಿವಿಧ ದಲಿತರ ಸಮಸ್ಯೆಗಳನ್ನಿಟ್ಟು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗಿದೆ ಎಂದು ವಿವರಿಸಿದರು, ರಾಜ್ಯಾದ್ಯಂತ 31 ಜಿಲ್ಲೆಗಳಲ್ಲಿಯೂ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ದಸಂಸ ಹಾಗೂ ಆರಿ​‍್ಪ.ಐ (ಬಿ) ಯು ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ನಡೆಸಿ ಆಯಾ ಜಿಲ್ಲಾಧಿಕಾರಿಗಳ ಮೂಲಕ  ಮುಖ್ಯಮಂತ್ರಿಗಳಿಗೆ ಹಾಗೂ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಅರ​‍್ಿಸಿ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.59 ಅಲೆಮಾರಿ ಜಾತಿಗಳಿಗೆ ಕೂಡಲೇ ಶೇಕಡ ಒಂದರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಆದಿ ಕರ್ನಾಟಕ, ಆದಿ ಆಂಧ್ರ ಮತ್ತು ಆದಿ ದ್ರಾವಿಡ ಜಾತಿಗಳ ಮೂಲ ಜಾತಿಗಳನ್ನು ಗುರುತಿಸಿ ಆಯಾ ಪ್ರವರ್ಗಕ್ಕೆ ಸೇರಿಸುವ ಮೂಲಕ ಗೊಂದಲ ಸರಿಪಡಿಸಬೇಕು.+ ಪ.ಜಾ/ಪ.ಪಂ ವರ್ಗದ ಮೀಸಲಾತಿಯನ್ನು ಶೇ.30 ಕ್ಕೆ ಹೆಚ್ಚಿಸಬೇಕು.- ಪ್ರಪಾ/ಪ.ಪಂ ವರ್ಗಗಳ ಮೀಸಲಾತಿ ಪಟ್ಟಿಗೆ ಮತ್ತಷ್ಟು ಜಾತಿಗಳನ್ನು ಸೇರಿಸುವ ರಾಜಕೀಯ ಹುನ್ನಾರ ಕೈಬೀಡಬೇಕು.+ ಪ್ರ.ಜಾ/ಪ.ಪಂ ವರ್ಗ ಮೀಸಲಾತಿಯನ್ನು ಸಂವಿಧಾನದ ಶೆಡ್ಯೂಲ್ 9 ರಲ್ಲಿ ಸೇರಿಸಿ ಮೀಸಲಾತಿಯನ್ನು ರಕ್ಷಿಸಬೇಕು.+ ಖಾಸಗಿ ಓದ್ಯೋಗಿಕ ವಲಯದಲ್ಲಿ ಮೀಸಲಾತಿ ಜಾರಿಯಾಗಲಿ,* ಪ.ಜಾ/ಪ.ಪಂ ವರ್ಗದ ಅಭಿವೃದ್ಧಿಗೆ ಮೀಸಲಿಟ್ಟ ಸಹಸ್ರಾರು ಕೋಟಿ ಎಸ್ ಸಿ ಎಸ್ ಪಿ ಹಣವನ್ನು ರಾಜ್ಯ ಸರ್ಕಾರ 3 ಗ್ಯಾರಂಟಿ,ಗೆ ರಸ್ತೆ,ಮೇಲುಸೇತುವೆಗೆ ಬಳಸಿ ದುರುಪಯೋಗಪಡಿಸಿಕೊಂಡ ಹಣವನ್ನು ಹಿಂದುರುಗಿಸಿ ಪರಿಶಿಷ್ಟ ಜಾತಿಗಳ ಅಭಿವೃದ್ಧಿಗೆ ಬಳಸಬೇಕು+ ರಿಯಲ್ ಎಸ್ಟೇಟ್ ದಂಧೆಯಾಗಿರುವ ಸಿ.ಆರ್‌.ಇ ಸೆಲ್ನ್ನು ಪರಿಷ್ಕರಿಸಿ ದಲಿತರ ಮೇಲಿನ ದೌರ್ಜನ್ಯ ನಿಗ್ರಹಿಸಲಿ,+ ಕಂದಾಯ ಇಲಾಖೆಯಲ್ಲಿ 10 ವರ್ಷಗಳಿಂದ ಕರ್ತವ್ಯ ನನಿರ್ವಹಿಸುತ್ತಿರುವ 12 ಸಾವಿರ ಗ್ರಾಮ ಸಹಾಯಕರನ್ನು ಖಾಯಂ ಮಾಡಲಿ ಎಂದು ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿದ ದಾದಾಸಾಹೇಬ್ ಏನ್ ಮೂರ್ತಿ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಏರಿಸ್ವಾಮಿ, ಆರ್‌. ಕನಕಗಿರಿ ಹೇಳಿದ್ದಾರೆ, ಕೂಡಲೇ ಸರ್ಕಾರ ಅವ್ಯವಸ್ಥೆ ಸರಿಪಡಿಸಿ ನಮ್ಮ ನ್ಯಾಯ ಸಮ್ಮತ ವಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಅವರು ಸರಕಾರಕ್ಕೆ ಒತ್ತಾಯಿಸಿದ್ದಾರೆ,ಈ ಪ್ರತಿಭಟನಾ ಮೆರವಣಿಗೆಯಲ್ಲಿ ಸಮಿತಿಯ ಮುಖಂಡ ಸಿದ್ದಪ್ಪ ಕಲಾಲಬಂಡಿ, ಆರ್ ಪಿ ಐ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಯಮನೂರ್ ಮೇಣದಾಳ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಪುತ್ರ​‍್ಪ ಹಂಚಿನಾಳ ಅಲೆಮಾರಿ ಅಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ಸಂಜೆ ದಾಸ್, ಮತ್ತಿತರರು ಪಾಲ್ಗೊಂಡಿದ್ದರು, ಅಲ್ಲದೆ ಸಮಿತಿಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಸರಸ್ವತಿ ನಾಗರಾಜ್, ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಲಿಂಗಪ್ಪ ಹೆಚ್ ಕುಕನೂರ್, ಗೌರವ ಅಧ್ಯಕ್ಷ ಶಿವಪ್ಪ ಒಂಟೆತ್ತಿನ ನವರು ಅಲೆಮಾರಿ ಅಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಸವರಾಜ್ ವಿಭೂತಿ, ಹಿರಿಯ ಹೋರಾಟಗಾರ ರಾಮಲಿಂಗಯ್ಯ ಶಾಸ್ತ್ರಿಮಠ , ಆನಂದ್ ಕೆಂಗೇರಿ ಜಡಿಯಪ್ಪ ಬೂದುಗುಂಪ, ಮಲ್ಲಿಕಾರ್ಜುನ ಎರಡೋಣ, ಆಂಜನೇಯಪ್ಪ ಇಳಿಗನೂರ್, ಗದಿಗೆಪ್ಪ ಲಿಂಗಲಬಂಡಿ ,ಆಂಜನೇಯ ಸುಂಕಪ್ಪ, ಕಾಶಿಮಲಿ ಶ್ರೀಶೈಲ್ ಕುಷ್ಟಗಿ, ಗವಿಸಿದ್ದನ ಗೌಡ ಮಾಲಿಪಾಟೀಲ್, ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.