ಮಾದಿಗ ಒಳಮೀಸಲಾತಿ ಜಾರಿಗಾಗಿ ಬೃಹತ್ ಪ್ರತಿಭಟನೆ ಮರೆವಣಿಗೆ

ಮಾದಿಗ ಒಳಮೀಸಲಾತಿ ಜಾರಿಗಾಗಿ ಬೃಹತ್ ಪ್ರತಿಭಟನೆ ಮರೆವಣಿಗೆ  Massive protest for Madiga internal reservation forgotten

ಲೋಕದರ್ಶನ ವರದಿ

ಕಂಪ್ಲಿ 25:  ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ, ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಕಂಪ್ಲಿ ತಾಲೂಕು ಘಟಕದಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು. ಉದ್ಭವ ಗಣೇಶ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಒಳಮೀಸಲಾತಿ ಜಾರಿಗಾಗಿ ಕೂಗುತ್ತಾ ಸಾಗಿ, ಮುಖ್ಯ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ತಲುಪಿ ಪ್ರತಿಭಟಿಸಿ, ನಂತರ ಕಂದಾಯ ನೀರೀಕ್ಷಕ ಜಗದೀಶ ಇವರಿಗೆ ಮನವಿ ಪತ್ರದ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದರು. ಯುವ ಮುಖಂಡ ಡಿಸ್ ಪ್ರಸಾದ್ ಮಾತನಾಡಿ,ಮಾದಿಗ ಪರಿಶಿಷ್ಟ ಜಾತಿಯಲ್ಲಿರುವ ಹಲವು ಸಮುದಾಯಗಳು ಮೀಸಲಾತಿಯಲ್ಲಿ ಅನ್ಯಾಯಕ್ಕೆ ಒಳಗಾಗಿರುವುದನ್ನು ಮನಗಂಡು ಹಲವು ವರ್ಷಗಳಿಂದ ಒಳಮೀಸಲಾತಿಗಾಗಿ ಹಕ್ಕೊತ್ತಾಯ ಮಾಡುತ್ತಲೇ ಬಂದಿದ್ದಾರೆ.

ಸರ್ಕಾರಗಳು ಯಾವುದೇ ಕಾಳಜಿ ತೋರದ ಹಿನ್ನಲೆ ಸುಮಾರು 35 ವರ್ಷಗಳಿಂದ ದೇಶದಾದ್ಯಂತ ಒಳಮೀಸಲಾತಿ ಜಾರಿಗಾಗಿ ತೀವ್ರತರದ ಹೋರಾಟ ಮಾಡಿದ್ದೇವೆ. ಹಲವು ಆಯೋಗಗಳು ರಚನೆಗೊಂಡು ಅಧ್ಯಾಯನ ಮಾಡಿ ಮೀಸಲಾತಿಯಲ್ಲಿ ಆಗುತ್ತಿರುವ ತಾರತಮ್ಯಗಳನ್ನು ಸ್ಪಷ್ಟವಾಗಿ ಗುರುತಿಸಿ ಈ ಅನ್ಯಾಯವನ್ನು ಸರಿಪಡಿಸಲು ಅನೇಕ ಶಿಫಾರಸ್ಸುಗಳನ್ನು ನೀಡಿವೆ. ಆದರೂ, ಸರಕಾರಗಳು ಯಾವುದೇ ವರದಿ ಅಂಗೀಕರಿಸಿ ಒಳಮೀಸಲಾತಿ ಜಾರಿ ಮಾಡಿ ಅನ್ಯಾಯಕ್ಕೆ ಒಳಗಾದ ಸಮುದಾಯಗಳಿಗೆ ನ್ಯಾಯ ಕೊಡುವ ಧೈರ್ಯ ತೋರಿಲ್ಲ. 2025 ಭಾರತದ ಘನ ಸರ್ವೋಚ್ಚ ನ್ಯಾಯಲಯವು ,ಒಳಮೀಸಲಾತಿ ಅಳವಡಿಸಿ ಮೀಸಲಾತಿ ನೀಡುವುದನ್ನು ಆಯಾಯ ರಾಜ್ಯಗಳ ಹೊಣೆಗಾರಿಕೆ ಎಂದು ತೀರ​‍್ು ನೀಡಿದ ನಂತರ ಹಲವು ರಾಜ್ಯಗಳು ಪ್ರತ್ಯೇಕ ಆಯೋಗಗಳನ್ನು ರಚಿಸಿ ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನ ಮಾಡಿವೆ.

ಹಾಗೆಯೇ ಕರ್ನಾಟಕ ಸರಕಾರವೂ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಿ ವರದಿ ಪಡೆದುಕೊಂಡಿದೆ. ವರದಿಯನ್ನು ಅಂಗೀಕರಿಸಿ ಒಳಮೀಸಲಾತಿ ಕಾಯ್ಕೆಯನ್ನು ಅಂಗೀಕರಿಸಿದ ಅದಕ್ಕನುಗುಣವಾಗಿ ಶೇಕಡ 25ರಷ್ಟು ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಶೇಕಡ 6 ರಷ್ಟು ಮೀಸಲಾತಿಯನ್ನು ಮಾದಿಗ ಮತ್ತು ಸಂಬಂಧಿತ ಸಮುದಾಯಗಳಿಗೆ ಕೂಡಲೇ ಜಾರಿಗೊಳಿಸಬೇಕು ಒತ್ತಾಯಿಸಿದರು.ಈ ಸಂದರ್ಭದಲ್ಲಿಮುಖಂಡರಾದ ಹೆಚ್‌. ಜಡೆಪ್ಪ ಎಮ್ಮಿಗ ನೂರು,ಬಿ.ಬಸವರಾಜ,ಸಣಾಪುರ ಹನುಮಂತಪ್ಪ ಆರ್‌.ಎಂ.ರಾಮಯ್ಯಸಣಾಪುರ ಮರಿಸ್ವಾಮಿ ಎನ್‌.ಗಂಗಣ್ಣ, ವೀರಾಂಜೀನೀಯಲು, ಹೆಚ್‌.ಶ್ರೀನಿವಾಸ, ಯಲ್ಲಪ್ಪ, ಹೆಚ್‌.ಕುಮಾರ, ಬುಜ್ಜಿಕುಮಾರ, ಗೋಪಿ, ಡಿ.ರಾಮ, ಹೆಚ್‌.ಪಂಪಾಪತಿ, ಹೆಚ್‌.ಜಗದೀಶ ಸೇರಿದಂತೆ ಇತರರು ಇದ್ದರು.