ಚಚಡಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಬೃಹತ್ ಹೋರಾಟ
Massive protest demanding the implementation of the Chachadi Lift Irrigation Project.
ನೇಸರಗಿ ೨೪: ಚಚಡಿ ಏತ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಆಗ್ರಹಿಸಿ ಸಮೀಪದ ಗ್ರಾಮಗಳ ರೈತರು ಬೃಹತ್ ಹೋರಾಟವನ್ನು ವಣ್ಣೂರ ಗ್ರಾಮದ ರಸ್ತೆ ತಡೆ ನಡೆಸಿ ಹೋರಾಟ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ವಣ್ಣೂರ, ಚಚಡಿ, ಮಾಸ್ತಮರ್ಡಿ, ಸುನಕುಂಪಿ, ಹಣಬರಹಟ್ಟಿ, ಮೇಕಲಮರ್ಡಿ ಬಹುದಿನಗಳ ನೀರಾವರಿ ಬೇಡಿಕೆಯನ್ನು ತಕ್ಷಣ ಈಡೇರಿಸುವಂತೆ ಆಗ್ರಹಿಸಿ ಬೃಹತ್ ಹೋರಾಟ ನಡೆಸಲಾಗಿದೆ. ಆದರೆ ಇನ್ನೂವರೆಗೆ ಈ ಯೋಜನೆಯಿಂದ ಜನರು ವಂಚಿತರಾಗಿದ್ದಾರೆ. ಸರಕಾರದ ಯೋಜನೆಗಳು ಇಲ್ಲಿಯ ಜನತೆಗೆ ತಲುಪದೆ ಜನರು ಗೋಳಾಡುವಂತಾಗಿದೆ. ಕೂಡಲೇ ವಣ್ಣೂರ, ಚಚಡಿ, ಮಾಸ್ತಮರ್ಡಿ, ಸುನಕುಂಪಿ, ಹಣಬರಹಟ್ಟಿ, ಮೇಕಲಮರ್ಡಿ ಗ್ರಾಮಗಳ ಜನರಿಗೆ ಅವಶ್ಯವಿರುವ ಚಚಡಿ ಏತ ನೀರಾವರಿ ಯೋಜನೆಯನ್ನು ಆದಷ್ಟು ಶೀಘ್ರ ಅನುಷ್ಠಾನಗೊಳಿಸಿ ಜನರಿಗೆ ಅನುಕೂಲ ಮಾಡಿ ಕೊಡಬೇಕೆಂದು ಆಗ್ರಹಿಸಿದರು.
ಮಾಜಿ ತಾ.ಪಂ ಸದಸ್ಯ ಬಾಳಾಸಾಹೇಬ ದೇಸಾಯಿ ಮಾತನಾಡಿ, ಚಚಡಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಾಗ ಇಲ್ಲಿಯ ರೈತರು ಸಾಕಷ್ಟು ಜಮೀನು ಕಳೆದುಕೊಂಡಿದ್ದಾರೆ. ಅವರಿಗೆ ಇನ್ನೂವರೆಗೆ ಪರಿಹಾರ ದೊರಕಿಲ್ಲ. ಭೂಮಿ ಕಳೆದುಕೊಂಡವರಿಗೆ ತ್ವರಿತವಾಗಿ ಪರಿಹಾರ ಒದಗಿಸಬೇಕೆಂದರು.
ಮುಖAಡರಾದ ಲಕ್ಷಿö್ಮÃ ಇನಾಂದಾರ, ಮಹಾಂತೇಶ ಕೂಲಿನವರ, ಮಾತನಾಡಿ, ಸಾಕಷ್ಟು ದಿನಗಳಿಂದ ಇಲ್ಲಿಯ ಜನರು ಚಚಡಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿದರೂ ಸರಕಾರ ಕಣ್ತೆರೆದು ನೋಡಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಿಲ್ಲ. ಇದರಿಂದ ಈ ಭಾಗ ನೀರಾವರಿಯಿಂದ ವಂಚಿತವಾಗಿದೆ. ಬಡ ರೈತರು ಬಡವರಾಗಿ ಉಳಿಯುವಂತಾಗಿದೆ. ಸರಕಾರ ಇಂತಹ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಕ್ಕೆ ಹಿಂದೇಟು ಹಾಕಬಾರದು. ಕಾಲುವೆಗೆ ನೀರು ಹರಿಸಲು ಮುಂದಾಗಬೇಕೆAದರು.
ಗೋಕಾಕ ನೀರಾವರಿ ಇಲಾಖೆ ಎಇಇ ಎಚ್.ಎಸ್.ಕಾಕಂಡಕಿ ಮಾತನಾಡಿ, ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸರಕಾರ ಯಾವುದೇ ಹಿಂದೇಟು ಹಾಕಿಲ್ಲ. ಕೆಲವು ತಾಂತ್ರಿಕ ಕಾರಣಗಳಿಂದ ಸಮಸ್ಯೆ ತಲೆದೋರಿದೆ. ರೈತರು ಅಧೆೆÊರ್ಯ ಪಡಬಾರದು. ಬರುವ ಡಿಸೆಂಬರ್‌ದೊಳಗೆ ಅರ್ಹ ಫಲಾನುಭವಿಗಳಿಗೆ ಪರಿಹಾರ ಒದಗಿಸಲಾಗುವುದು. ಶೀಘ್ರ ಎಲ್ಲ ಭಾಗಕ್ಕೂ ನೀರು ಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಬೈಲಹೊಂಗಲ ತಹಶೀಲ್ದಾರ ಸದಾಶಿವ ಮಕ್ಕೋಜಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆಯನ್ನು ನಿಲ್ಲಿಸಲು ವಿನಂತಿಸಿದರು. ತಹಶೀಲ್ದಾರ ಸದಾಶಿವ ಮೆಕ್ಕೋಜಿ ನಿಗದಿತ ಕಾಲಾವಧಿಯಲ್ಲಿ ಚಚಡಿ ಏತ ನೀರಾವರಿ ಕಾಲುವೆಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ಭೀಮಪ್ಪ ಸೋಮನಟ್ಟಿ, ಬಸನಿಂಗಪ್ಪ ಬಸೆಟ್ಟಿ, ಶ್ಯಾಮ ಶಿಲ್ಲೇದಾರ, ಈಶ್ವರ ಬಾಗೋಜಿ, ಮಲ್ಲೇಶ ಚಿಕ್ಕೋಡಿ, ವಿರುಪಾಕ್ಷ ಹಿರೇಮಠ ಕಿಲ್ಲೇದಾರ, ನಾಗಪ್ಪ ಮುತ್ತೆನ್ನವರ, ಬಸಪ್ಪ ಪಾಟೀಲ, ಮಾಜಿ ತಾಪಂ ಸದಸ್ಯ ಶ್ರೀಲತೆ ಶ್ರೀಕರ ಕುಲಕರ್ಣಿ, ಹಣಮಂತ ದೊಡ್ಡನ್ನವರ, ಬಸವರಾಜ ಅಂಗಡಿ, ನಿಂಗಪ್ಪ ಹೊಸಮನಿ, ಮಹಾಂತೇಶ ಮೊಹರೆ, ಅಡಿವೆಪ್ಪ ಚಿಗರಿ, ಡಾ.ಸಂತೋಷ ವಾಗ್ದೇವಿ, ಬೋಳನ್ನವರ, ಬಾಬು ಪಾಟೀಲ, ಎ.ಬಿ.ಕೂಗುನವರ, ಬಾಬು ಶೇಬನ್ನವರ, ಸಿದರ ಹಣ್ಣಿಕೇರಿ, ಪ್ರದೀಪ ದೊಡ್ಡಗೌಡರ, ಸುತ್ತಮುತ್ತಲಿನ ಗ್ರಾಮಗಳ ರೈತರು ಪಾಲ್ಗೊಂಡಿದ್ದರು. ಪ್ರತಿಭಟನೆಯಿಂದ ರಸ್ತೆ ಸಂಚಾರಕ್ಕೆ ತಡೆಯುಂಟಾಗಿ ಜನರು ತೊಂದರೆ ಅನುಭವಿಸುವಂತಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 