ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ಬ್ರಹತ್ ಪ್ರತಿಭಟನೆ
Massive protest demanding price fixing
ರಾಯಬಾಗ, 05 : ಪ್ರತಿ ಟನ್ ಕಬ್ಬಿಗೆ ರೂ.3500 ನಿಗದಿ ಪಡಿಸುವಂತೆ ಆಗ್ರಹಿಸಿ ಗುರ್ಲಾಪೂರ ಕ್ರಾಸ್ ದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿ ದಲಿತ, ಕನ್ನಡ ಪರ ಸಂಘಟನೆ ಮತ್ತು ರೈತರು ಬುಧವಾರ ಕರೆ ನೀಡಿದ್ದ ರಾಯಬಾಗ ಪಟ್ಟಣ ಬಂದ್ ಗೆ ಪಟ್ಟಣದ ನಾಗರಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಪಟ್ಟಣದ ಅಭಾಜಿ ವೃತ್ತದಲ್ಲಿ (ಝೆಂಡಾ ಕಟ್ಟಿ ಹತ್ತಿರ) ಹೋರಾಟಗಾರರು ಮುಖ್ಯ ರಸ್ತೆ ಬಂದ ಮಾಡಿ ಕಾರ್ಖಾನೆ ಮಾಲೀಕರ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತರ ಬೇಡಿಕೆ ಈಡೇರುವವರಿಗೆ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದರು.
ಬೆಳ್ಳಿಗ್ಗೆಯಿಂದ ಪಟ್ಟಣದ ಎಲ್ಲ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಸ್ವಯಂ ಪ್ರೇರಿತ ಬಂದ ಮಾಡಿದ್ದರು. ಹಾಲಿನ ಮಳಿಗೆ ಮತ್ತು ಮೆಡಿಕಲ್ ಹೊರತುಪಡಿಸಿ ಎಲ್ಲ ವ್ಯಾಪಾರ ಮಳಿಗೆಗಳು ಸಂಪೂರ್ಣ ಬಂದ ಮಾಡಲಾಗಿತ್ತು.ಬಂದ ಪರಿಣಾಮ ಸಾರಿಗೆ ಸಂಸ್ಥೆ ಬಸ್ ಗಳು ಬಸ್ ನಿಲ್ದಾಣದಲ್ಲಿ ನಿಂತಿದ್ದು ಕಂಡು ಬಂದಿತು, ಬಸ್ ಬಂದ ಮಾಡಿದ್ದರಿಂದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಪರದಾಡುವಂತಾಯಿತು. ಹೋರಾಟಗಾರರಿಗೆ ರಾಯಬಾಗ ಗ್ರಾಮೀಣ ಭಾಗದ ಖೈರಕೊಡಿಯ ರೈತರು ರಸ್ತೆಯಲ್ಲಿ ಅಡುಗೆ ಮಾಡಿ ಊಟ ಬಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜೆ.ಡಿ.ಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ ಹಾಗೂ ಯುವ ಧುರೀಣ ಶಿವರಾಜ ಪಾಟೀಲ ಅವರು ರೈತರ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿ, ತಾವು ಸದಾ ರೈತರ ಜೊತೆಗೆ ಇರುವುದಾಗಿ ಹೇಳಿದರು.ರೈತರ ಹೋರಾಟಕ್ಕೆ ಪಟ್ಟಣದ ವೈದ್ಯರು, ವಕೀಲರು, ಮಾಜಿ ಸೈನಿಕರು, ಸಾಹಿತಿಗಳು ತಮ್ಮ ಬೆಂಬಲ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಅಶೋಕ ಅಂಗಡಿ, ಅನೀಲ ಶೆಟ್ಟಿ, ಪೃಥ್ವಿರಾಜ ಜಾಧವ, ಸದಾಶಿವ ಘೋರೆ್ಡ, ಮಹೇಶ ಕರಮಡಿ, ಸದಾನಂದ ಹಳಿಂಗಳಿ, ಬಸವರಾಜ ದೋಣವಾಡೆ, ಹರೀಶ ಕುಲಗುಡೆ, ದೀಲೀಪ ಪಾಯನ್ನವರ, ನಾರಾಯಣ ಮೇತ್ರಿ, ಗಜಾನನ ಮಾಳಿ, ರಮೇಶ ಕುಂಬಾರ, ಸಂಜು ಬಾವಜಿ ಸೇರಿ ಅನೇಕರು ಭಾಗವಹಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 