ಬಿಸರಳ್ಳಿಯ ನೃಪತುಂಗ ಪ್ರೌಢಶಾಲೆಯ ಬಿಸಿಯೂಟ ನೌಕರರನ್ನು ಕೆಲಸದಿಂದ ತೆಗೆದ ಭ್ರಷ್ಟ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
Massive protest condemning the brutality of corrupt officials who fired the hot meal employees of Nr
ಕೊಪ್ಪಳ 21 : ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದ ನೃಪತುಂಗ ಪ್ರೌಢಶಾಲೆಯ ಬಿಸಿಯೂಟ ತಯಾರಕರನ್ನು ಕೆಲಸದಿಂದ ತೆಗೆದು ಹಾಕಿರುವ ಭ್ರಷ್ಟ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಕೊಪ್ಪಳದ ಬಿಸಿಯೂಟ ನೌಕರರು ಶನಿವಾರ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಯೂನಿಯನ್(ಐ.ಎಫ್.ಟಿ.ಯು.ಸೇರೆ್ಡ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ ಗೌಡ ಅವರ ಮೂಲಕ ಶಿಕ್ಷಣ ಸಚಿವ ಮಧು ಬಂಗಾರ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದ ಇಂದಿರಾ ಕ್ಯಾಂಟಿನ್ ಮುಂಭಾಗದಿಂದ ಮೆರವಣಿಗೆ ಹೊರಟು ಬಸವೇಶ್ವರ ಸರ್ಕಲ್ ತಲುಪಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ದ ಘೊಷಣೆಗಳನ್ನು ಕೂಗಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಮಧ್ಯಾಹ್ನದ ಉಪಹಾರ ಯೋಜನೆಯಲ್ಲಿ ದುಡಿಯುತ್ತಿರುವ ಬಡ ಮಹಿಳೆಯರಿಗೆ ಸರಕಾರವು ತೀರಾ ಕಡಿಮೆ ಪ್ರಮಾಣದ ಗೌರವಧನವನ್ನು ಪಾವತಿಸುವ ಮೂಲಕ ಅಂದರೆ ತಿಂಗಳಿಗೆ 4600 / 4700 ರೂಪಾಯಿಗಳನ್ನು ಪಾವತಿಸಿ, ಕಡಿಮೆ ಕೂಲಿಗೆ ಮಹಿಳೆಯರನ್ನು ಹೆಚ್ಚು ಹೆಚ್ಚು ದುಡಿಸಿಕೊಳ್ಳುತ್ತಿದೆ.
ಸರಕಾರ ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ,ಪಿಂಚಣಿ ಯೋಜನೆ.ಸೇವಾಭದ್ರತೆಯನ್ನು ನೀಡದೆ ಸತಾಯಿಸುತ್ತಿದೆ. ಇದು ಸಾಲದೆಂಬಂತೆ ನಾನಾ ರೀತಿಯ ನೆಪಗಳನ್ನು ಹುಡುಕಿ ನೌಕರರನ್ನು ಕೆಲಸದಿಂದ ತೆಗೆದು ಹಾಕಲು ಹಲವಾರು ರೀತಿಯ ಷಡ್ಯಂತ್ರಗಳು ಸಹ ನಡೆಸುತ್ತಿದೆ.ಸರಕಾರದ ಈ ಮಹಿಳಾ ವಿರೋಧಿ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಬಿಸಿಯೂಟ ಮಹಿಳೆಯರು ತಾಲೂಕಿನ ಬಿಸರಳ್ಳಿ ಗ್ರಾಮದ ಪ್ರೌಢಶಾಲೆಯ ಬಿಸಿಯೂಟ ನೌಕರರನ್ನು ಪುನ: ಕೆಲಸದಲ್ಲಿ ಮುಂದುವರಿಸುವಂತೆ ಒತ್ತಾಯಿಸಿದರು.ಬಿಸರಳ್ಳಿ ಗ್ರಾಮದ ಬಿಸಿಯೂಟ ನೌಕರರನ್ನು ಅಡುಗೆಯಲ್ಲಿ ನುಸಿ ಬಂದಿರುವ ಕಾರಣವನ್ನು ತೋರಿಸಿ.
ಅವರನ್ನು ಕೆಲಸದಿಂದ ತಗೆದು ಹಾಕಿರುವುದು ಸರಿಯಲ್ಲ. ಇದಕ್ಕೆ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿಸಿ.ಅವರ ವಿರುದ್ದ ಕ್ರಮ ವಹಿಸಬೇಕೆಂದು ಒತ್ತಾಯಿಸಿ,ಕೆಳ ಕಂಡ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯನ್ನು ಮಾಡಲಾಯಿತು .ಚುನಾವಣಾ ಮುನ್ನ ಕಾಂಗ್ರೆಸ್ ಪಕ್ಷವು ಘೋಷಿಸಿರುವಂತೆ. 6ನೇ ಗ್ಯಾರಂಟಿಯನ್ನು ಸರಕಾರವು ಜಾರಿ ಮಾಡುವ ಮೂಲಕ ಈಗಿರುವ ಬಿಸಿಯೂಟ ನೌಕರರ ವೇತನವನ್ನು 6 ಸಾವಿರ ರೂಪಾಯಿಗಳಿಗೆ ಹೆಚ್ಚಿಸಬೇಕು. ಇಡುಗಂಟು ಹಣವನ್ನು 2 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು.
ಶಾಲೆಯಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ ಸಮಯದಲ್ಲಿ ಮಹಿಳೆಯರಿಗೆ ಇನ್ನೇನಾದರೂ ಅನಾಹುತ ಸಂಭವಿಸಿದಲ್ಲಿ ಆ ಸಂದರ್ಭದಲ್ಲಿ ತೊಂದರೆಗೆ ಒಳಗಾದ ಬಿಸಿಯೂಟ ನೌಕರರಿಗೆ ಸೂಕ್ತ ಪರಿಹಾರವನ್ನು ನೀಡಬೇಕು. ಹಾಗೂ ಚಿಕಿತ್ಸೆಯ ವೆಚ್ಚವನ್ನು ಸರಕಾರವೇ ಭರಿಸಬೇಕು.ಎಸ್ಡಿಎಂಸಿ ಮತ್ತು ಶಾಲಾ ಮುಖ್ಯೋಪಾಧ್ಯಾಯರ ಹೆಸರಿನಲ್ಲಿ ತೆರೆಯಲಾದ ಜಂಟಿ ಖಾತೆಯನ್ನು ರದ್ದುಪಡಿಸಿ. ಮೊದಲಿನಂತೆ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಮುಖ್ಯ ಅಡುಗೆಯವರ ಹೆಸರಿನಲ್ಲಿಯೇ ಜಂಟಿ ಖಾತೆಯನ್ನು ತೆರೆಯಬೇಕು. ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು.
ಪ್ರತಿ ತಿಂಗಳು 5ನೇ ತಾರೀಖಿನ ಒಳಗಾಗಿ ವೇತನವನ್ನು ಪಾವತಿಸಬೇಕು.ಅಲ್ಲಲ್ಲಿ ಬಿಸಿಯೂಟ ನೌಕರರಿಗೆ ಕೆಲಸದಿಂದ ತೆಗೆದು ಹಾಕುವ ಬೆದರಿಕೆಯನ್ನು ಕೆಲವರು ಹಾಕುತ್ತಿದ್ದಾರೆ ಅಲ್ಲದೆ ಬಿಸಿಯೂಟದ ಮಹಿಳೆಯರ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ.ಸಂಬಂಧಪಟ್ಟ ಅಧಿಕಾರಿಗಳು ಅಂಥವರ ವಿರುದ್ದ ಸೂಕ್ತ ಕಾನೂನು ಕ್ರಮ ವಹಿಸಬೇಕು . ಬಳಕೆಗೆ ಯೊಗ್ಯವಲ್ಲದ ಅಡುಗೆಯ ಸಾಮಗ್ರಿಗಳನ್ನು ತಕ್ಷಣ ಬದಲಾಯಿಸಬೇಕು. ಶಾಲೆಗಳಲ್ಲಿರುವ ಕಳಪೆ ಗುಣಮಟ್ಟದ ರೇಷನ್ ನ್ನು ತಕ್ಷಣ ಬದಲಾಯಿಸಿ, ಶಾಲೆಗಳಿಗೆ ಒಳ್ಳೆ ಗುಣಮಟ್ಟದ ರೇಷನನ್ನು ವಿತರಿಸಬೇಕು ಎಂದು ಒತ್ತಾಯಿಸಿದ್ದರು.
ಪ್ರತಿಭಟನೆಯಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕ ಯೂನಿಯನ್ (ಐ.ಎಫ್.ಟಿ.ಯು ಸೇರೆ್ಡ) ಜಿಲ್ಲಾ ಅಧ್ಯಕ್ಷೆ ಪುಷ್ಪಾ ಮೇಸ್ತ್ರಿ. ಜಿಲ್ಲಾ ಕಾರ್ಯದರ್ಶಿ ಕಮಲಮ್ಮ.ಗುಬ್ಬಮ್ಮ. ಶರಣಮ್ಮ.ನಿರ್ಮಲಾ. ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಬಸವರಾಜ್ ಶೀಲವಂತರ್.ಎಸ್.ಎ.ಗಫಾರ್.ಗಾಳೆಪ್ಪ ಮುಂಗೋಲಿ. ಮಖಬೂಲ್ ರಾಯಚೂರು. ಶೇಖರ್ ಬೆಟಗೇರಿ ಮುಂತಾದ ಅನೇಕರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 