ರೈತರಿಂದ ಹೆದ್ದಾರೆ ತಡೆದು ಬೃಹತ್ ಪ್ರತಿಭಟನೆ

ರೈತರಿಂದ ಹೆದ್ದಾರೆ ತಡೆದು ಬೃಹತ್ ಪ್ರತಿಭಟನೆ Massive protest by farmers blocking the highway


ಇಂಡಿ  22 : ಭಾರತೀಯ ಕಿಸಾನ ಸಂಘ ಇಂಡಿ ಘಟಕದ ರೈತ ಸಂಘದ ಕಾರ್ಯಕರ್ತರು ಜೋಡಗುಡಿ ಹತ್ತಿರ ಇಂಡಿ ತಾಲೂಕು ಬರಗಾಲವೆಂದು ಘೋಷಿಸಬೇಕು, ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಬೇಕು ಮತ್ತು ಸರಿಯಾದ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ ಇಂಡಿ ವಿಜಯಪುರ, ಅಕ್ಕಲಕೋಟ ವಿಜಯಪುರ ಹೆದ್ದಾರೆ ಬಂದು ಮಾಡಿ ಬೃಹತ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದರು.ತಡವಲಗಾದ ಅಭಿನವ ರಾಚೋಟೇಶ್ವರ ಶ್ರೀಗಳು ಮಾತನಾಡಿ ಇಂಡಿ ತಾಲೂಕು ಬರಗಾಲ ಪ್ರದೇಶವೆಂದು ಸಾರಬೇಕು. ಕಳೆದ ಜೂನ ತಿಂಗಳಿಂದ ಮಳೆಯೇ ಇಲ್ಲದೆ ರೈತರು ತೊಂದರೆಯಲ್ಲಿದ್ದಾರೆ.

ಬೆಳೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಆದ್ದರಿಂದ ಕೂಡಲೇ ಇಂಡಿ ತಾಲೂಕು ಬರಗಾಲ ಪ್ರಧೇಶವೆಂದು ಸಾರಬೇಕು ಎಂದು ಆಗ್ರಹಿಸಿದರು. ಉತ್ತರ ಪ್ರಾಂತ ರೈತ ಮುಖ್ಯಸ್ಥ ಗುರುನಾಥ ಬಗಲಿ ಮಾತನಾಡಿ ತಾಲೂಕಿನಲ್ಲಿರುವ ಎಲ್ಲ ಕೆರೆಗಳನ್ನು ತುಂಬಬೇಕು. ತಾಲೂಕಿನಲ್ಲಿ ಕೆಲವೊಂದು ಕಾಲುವೆಗೆ ನೀರು ಬಿಡುತ್ತಿದ್ದು ಕೆಲವೊಂದು ಬಿಡುತ್ತಿಲ್ಲ, ತಾಲೂಕಿನ ಕೊನೆಯ ಭಾಗದ ವರೆಗೂ ನೀರು ಹರಿಸಬೇಕು ಇಲ್ಲದಿದ್ದರೆ ಅನಿರ್ದಿಷ್ಟ ಉಪವಾಸ ಧರಣಿ ಸತ್ಯಾಗ್ರಹ ಮುಂದುವರೆಸುವದಾಗಿ ತಿಳಿಸಿದರು.

ಕೃಷ್ಣ ಮೇಲ್ದಂಡೆ ಯೋಜನೆಯ ಅಧಿಕ್ಷಕ ಅಭಿಯಂತರ ಗೋವಿಂದ ರಾಠೋಡ, ಶ್ರೀಮಂತ ಅಂಗಡಿ, ಅರವಿಂದ ಸೋಲಾಪುರ ಪ್ರತಿಭಟನಾಕಾರರ ಜೊತೆ ಮಾತನಾಡಿ ಬಿಡುವ ಭರವಸೆ ನೀಡಿದರು.ಆದರೂ ರೈತರು ಧರಣಿ ಮುಂದುವರೆಸಿದ್ದರು.ಈ ಹೋರಾಟಕ್ಕೆ ಇಂಡಿ ಮಾಜಿ ಶಾಸಕರಾದ ರವಿಕಾಂತ ಪಾಟೀಲ ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಸ್ವಲ್ಪ ಮಳೆ ಬರುತ್ತಿದ್ದಂತೆ ರೈತರು ಆ ಮಳೆ ಮದ್ಯ ಹೋರಾಟ ಮುಂದುವರಿಸಿದ್ದರು.