ಕಾರ್ಮಿಕ ಪರ ನೀತಿಗೆ ಒತ್ತಾಯಿಸಿಫ್ರೀಡಂ ಪಾರ್ಕಲ್ಲಿ ನ.27ಕ್ಕೆ ಬೃಹತ್ ಪ್ರತಿಭಟನೆ
Massive protest at Freedom Park on November 27 demanding pro-labor policies
ಗಂಗಾವತಿ 23 : ಕೇಂದ್ರ ಹಾಗು ರಾಜ್ಯ ಸರಕಾರಗಳು ಕಾರ್ಮಿಕ ಪರ ನೀತಿ ಅನುಸರಿಸಿ ಕನಿಷ್ಠ ವೇತನ ಜಾರಿ, ಗುತ್ತಿಗೆ ಪದ್ಧತಿ ರದ್ದತಿ, ಖಾಯಂ ನೇಮಕಾತಿಗೆ ಒತ್ತಾಯಿಸಿ ಬೆಂಗಳೂರು ಫ್ರಿಡಂ ಪಾರ್ಕ್ ಲ್ಲಿ ನವೆಂಬರ್ 27 ಗುರುವಾರ ಬೆಳಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಇಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ರಿಷ್ಟನ್ ರೋಜಾರಿಯ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಸರಕಾರ ಕಾರ್ಮಿಕರ ಕಾಂಟ್ರಾಕ್ಟ್ ಪದ್ಧತಿಯನ್ನು ತೆಗೆದು ಹಾಕಿ ಸ್ವಸಹಾಯ ಗುಂಪಿನ ಮಾದರಿಯಲ್ಲಿ ಕಾರ್ಮಿಕ ಕಾಯ್ದೆ ತರಲು ಉದ್ದೇಶಿಸಿದ್ದು, ಇದು ಅಳಿಯ ಅಲ್ಲ ಮಗಳ ಗಂಡ ಎನ್ನುವಂತಾಗುತ್ತದೆ ಖಾಯಂ ನೇಮಕ ಮಾಡಿಕೊಂಡು ಆಗುತ್ತಿರುವ ಭ್ರಷ್ಟಾಚಾರ ತಡೆಯಬೇಕು, ಕೇಂದ್ರ ಮೋದಿ ಸರಕಾರ 1926 ಟ್ರೇಡ್ ಯುನಿಯನ್ ಕಾಯ್ದೆ, ಗುತ್ತಿಗೆ ಕಾರ್ಮಿಕ ಕಾಯ್ದೆ 1970, ಕಾರ್ಖಾನೆ ಕಾಯ್ದೆ 1948, ಕೈಗಾರಿಕಾ ವಿವಾದಿತ ಕಾಯ್ದೆ 1947 ಇನ್ನು ಹಲವು ಕಾಯ್ದೆಗಳಲ್ಲಿ ಕಾರ್ಮಿಕ ಪರವಾದ ಅಂಶಗಳನ್ನು ತೆಗೆದು ಹಾಕುವ ನಿರ್ಧಾರ ಮೋದಿ ಸರಕಾರದ್ದಾಗಿದ್ದು, ಕೂಡಲೆ ಇಂಥ ವಿರೋಧಿ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದರು.
ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ರದ್ದುಗೊಳಿಸಬೇಕು, ದಿನಗೂಲಿ 15 ಸಾವಿರ ರುಗೆ ನಿಗದಿಯಾಗಬೇಕು, ಸರ್ವರಿಗು ಉದ್ಯೋಗ ಖಾತ್ರಿ ಹಾಗು ಉದ್ಯೋಗ ಸಂರಕ್ಷಣೆ ಖಚಿತಪಡಿಸಬೇಕು, ಸಮಾನ ದುಡಿಮೆಗೆ ಸಮಾನ ವೇತನ ನೀಡಬೇಕು ಎಂದು ಸರಕಾರಕ್ಕೆ ಒತ್ತಡ ಹೇರಲಾಗುವುದು ಎಂದು ಹೇಳಿದರು. ಎಐಸಿಸಿಟಿಯು ಕೊಪ್ಪಳ ಜಿಲ್ಲಾಧ್ಯಕ್ಷ ವಿಜಯ್ ದೊರೆರಾಜ್ ಮಾತನಾಡಿ, ಕೊಪ್ಪಳ ಜಿಲ್ಲೆಯಿಂದ ಕನಿಷ್ಠ 300 ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಪ್ರತಿಭಟನೆ ಯಶಸ್ವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಎಐಸಿಸಿಟಿಯು ಜಿಲ್ಲಾ ಸಮಿತಿ ಸದಸ್ಯ ಹನುಮಂತಪ್ಪ ಹುಲಿ ಹೈದರ್, ಪ್ರಮುಖರಾದ ರೇಣುಕಾ, ಕೇಶವ ನಾಯಕ ಇತರರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 