ಕನ್ನೇರಿ ಶ್ರೀಗಳ ನಿರ್ಬಂಧ ಖಂಡಿಸಿ ಬೃಹತ್ ಪ್ರತಿಭಟನೆ
Massive protest against Kanneri Sri's ban
ತಾಳಿಕೋಟೆ 28: ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ವಿಜಯಪುರ ಜಿಲ್ಲೆಗೆ ಆಗಮಿಸದಂತೆ ವಿಜಯಪುರ ಜಿಲ್ಲಾ ಆಡಳಿತ ಆದೇಶ ಹೊರಡಿಸಿದ್ದನ್ನು ಖಂಡಿಸಿ ಸ್ಥಳೀಯ ಹಿಂದೂ ಜಾಗೃತ ವೇದಿಕೆ ವತಿಯಿಂದ ಪಾದಯಾತ್ರೆಯ ಮೂಲಕ ಹೋಗಿ ತಹಶೀಲ್ದಾರ ಅವರಿಗೆ ಸೋಮವಾರ ಮನವಿಯನ್ನು ಸಲ್ಲಿಸಲಾಯಿತು.
ಬೆಳಿಗ್ಗೆ 10:00 ಗಂಟೆಗೆ ಅಂಭಾ ಭವಾನಿ ಮಂದಿರ ದಿಂದ ಬಸವೇಶ್ವರ ವೃತ್ತದವರೆಗೆ ಹೋರಾಟವನ್ನು ಪಾದಯಾತ್ರೆಯ ಮೂಲಕ ನಡೆಸಲಾಯಿತು. ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿಯನ್ನು ರಚಿಸಿ ಕೆಲಕಾಲ ಸಂಚಾರವನ್ನು ಬಂದ್ ಮಾಡಿ ತಮ್ಮ ಪ್ರತಿಭಟನೆಯನ್ನು ಸಲ್ಲಿಸಿದರು. ತಹಶೀಲ್ದಾರ ಡಾ.ವಿನಯಾ ಹೂಗಾರ ಅವರಿಗೆ ಮನವಿಯನ್ನು ಸಲ್ಲಿಸಿ ಮಾತನಾಡಿದ ಕೆಸರಟ್ಟಿಯ ಬಾಲಶಿವಯೋಗಿ ಸೋಮಲಿಂಗ ಶ್ರೀ, ಕನ್ಹೇರಿ ಶ್ರೀಯವರನ್ನು ವಿಜಯಪುರ ಜಿಲ್ಲೆಗೆ ಬರದಂತೆ ನಿರ್ಬಂಧಿಸಿರುವ ಸರ್ಕಾರದ ಆದೇಶವನ್ನು ಖಂಡಿಸುತ್ತೇವೆ. ಶ್ರೀಗಳು, ಉತ್ತರ ಕರ್ನಾಟಕದ ಆಡುಭಾಷೆಯನ್ನು ಬಳಸಿದ್ದಾರೆ. ಅಲ್ಲಿ ಯಾರನ್ನೂ ನೋಯಿಸುವ ಉದ್ದೇಶ ಅವರಿಗಿಲ್ಲ. ಅದನ್ನು ಅಪಾರ್ಥ ಮಾಡಕೊಳ್ಳಲಾಗಿದೆ ಸರ್ಕಾರದ ನಡೆ ಖಂಡನೀಯವಾಗಿದ್ದು , ನಿಷೇಧವನ್ನು ಹಿಂತೆಗೆದುಕೊಳ್ಳಬೇಕು ಎಂದರು.
ಭಾರತೀಯ ಜನತಾಪಕ್ಷದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಇತರರು ಮಾತನಾಡಿದರು.ಪ್ರತಿಭಟನಾ ಪಾದಯಾತ್ರೆಯಲ್ಲಿ, ಗುಂಡಕನಾಳ ಬೃಹನ್ಮಠದ ಗುರುಲಿಂಗಶಿವಾಚಾರ್ಯರು, ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ಜೈಸಿಂಗ ಮೂಲಿಮನಿ, ಮುದಕಣ್ಣ ಬಡಿಗೇರ, ರಾಜು ಹಂಚಾಟೆ, ಆರ್.ಎಲ್.ಕೊಪ್ಪದ, ಮಲ್ಲಿಕಾರ್ಜುನ ಹಿಪ್ಪರಗಿ, ಚಂದ್ರಶೇಖರ ದೊಡಮನಿ, ಗೋವಿಂದಸಿಂಗ ಮೂಲಿಮನಿ, ಸುರೇಶ ಹಜೇರಿ, ಸುವರ್ಣಾ ಬಿರಾದಾರ, ಇಂಗಳಗೇರಿ ಮಾತೆ, ಶಿವಶಂಕರ ಹಿರೇಮಠ, ತಮ್ಮಣ್ಣ ದೇಶಪಾಂಡೆ, ಪ್ರಮೋದ ಅಗರವಾಲ, ರಾಘವೇಂದ್ರ ವಿಜಾಪುರ, ಈಶ್ವರ ಹೂಗಾರ, ವಿಠ್ಠಲ ಮೋಹಿತೆ, ರಾಘು ಮಾನೆ, ಮಂಜುಶೆಟ್ಟಿ, ಎಲ್.ಎಸ್.ದಾಯಪುಲೆ, ಕಾಶಿನಾಥ ಅರಳಿಚಂಡಿ, ಕಿರಣ ಬಡಿಗೇರ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು..
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 