30 ರಂದು ಬಡ ಮುಸ್ಲಿಂ ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ
Mass wedding of poor Muslim couples on the 30th
ಕೊಪ್ಪಳ 27: ನಗರದ ಸರ್ದಾರ್ ಗಲ್ಲಿಯ ಮುಸ್ಲಿಂ ಪಿಂಜಾರ್ ಪಂಚ ಕಮಿಟಿಯವರು ಹಜರತ್ ಮೆಹಬೂಬ್ ಸುಬ್ಹಾನಿ (ರ ಅ) ರವರ ಪವಿತ್ರ ಗ್ಯಾರವಿ ಶರೀಫ್ ಆಚರಣೆಯ ನಿಮಿತ್ತ ಸತತವಾಗಿ ಪ್ರತಿ ವರ್ಷ ಬಡ ಮುಸ್ಲಿಂ ಜೋಡಿಗಳ ಉಚಿತ ವಿವಾಹಗಳನ್ನು ನಡೆಸಿಕೊಂಡು ಬಂದಿರುತ್ತಾರೆ.**ಈ ವರ್ಷ ಸುಮಾರು 20 ಬಡ ಜೋಡಿಗಳು ಹೆಸರುಗಳನ್ನ ನೋಂದಾಯಿಸಿದ್ದು, ಅವರ ಸಾಮೂಹಿಕ ವಿವಾಹಗಳನ್ನು ದಿ, 30,ರಂದು ರವಿವಾರ ಮುಂಜಾನೆ 11:30 ಗಂಟೆಗೆ ನೆರವೇರಿಸಲಾಗುವುದು.**ಈ ಎಲ್ಲಾ ನೂತನ ಜೋಡಿಗಳಿಗೆ ಬಟ್ಟೆಗಳು, ಸೀರೆಗಳು, ಬಂಗಾರದ ತಾಳಿ, ಜೀವನಾಂಶಕ ಬಾಂಡೇ ಸಾಮಾನುಗಳು, ಉಡುಗೊರೆ, ಟ್ರಂಕಗಳು, ಹಾಸಿಗೆ ಇತ್ಯಾದಿಗಳನ್ನು ನೀಡುವುದರ ಜೊತೆಗೆ ಕರ್ನಾಟಕ ಸರ್ಕಾರ ಘೋಷಿಸಿರುವ ಪ್ರತಿ ಜೋಡಿಗೆ ರೂಪಾಯಿ 50,000 ಗಳನ್ನು ಸಹ ಅವರಿಗೆ ತಲುಪಿಸುವಂತಹ ಕೆಲಸವನ್ನು ಮಾಡಲಾಗುವುದೆಂದು ಸಂಸ್ಥೆಯವರು ತಿಳಿಸಿರುತ್ತಾರೆ.
ಇದೇ ಸಂದರ್ಭದಲ್ಲಿ ಈ ಪವಿತ್ರ ಗ್ಯಾರವಿ ನಿಮಿತ್ತ ದಿ, 23ರಂದು ಬೃಹತ್ ರಕ್ತದಾನ ಶಿಬಿರವನ್ನು ಏರಿ್ಡಸಿ ಯಶಸ್ವಿಗೊಳಿಸಿದ್ದಾರೆ**ಇಂದಿನ ಅತ್ಯಂತ ದುಬಾರಿ ಯುಗದಲ್ಲಿ ಸಮಾಜದಲ್ಲಿರುವ ಬಡ ಮುಸ್ಲಿಂ ಜೋಡಿಗಳಿಗೆ ವಿವಾಹಗಳನ್ನ ಮಾಡುವುದರ ಮೂಲಕ ಅವರ ದೊಡ್ಡ ಭಾರವನ್ನ ಕಡಿಮೆ ಮಾಡಲು ಸಂಸ್ಥೆಯವರು ಪ್ರಯತ್ನಿಸುತ್ತಿರುವದು ಬಹಳ ಶ್ಲಾಘನೀಯವಾಗಿದೆ**ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಸಮಾಜದ ಬಡ ಮುಸ್ಲಿಂ ಜೋಡಿಗಳ ವಿವಾಹಗಳನ್ನ ನೆರವೇರಿಸಲೆಂದು ಶುಭ ಕೋರುತ್ತಾ ಹಾರೈಸುತ್ತೇವೆ ಎಂದು ಸಮಾಜದ ನದಾಫ್ ಪಿಂಜಾರ್ ಸಂಘದ ತಾಲೂಕ ಉಪಾಧ್ಯಕ್ಷ ಫಕ್ರುಸಾಬ್ ನದಾಫ್, ತಾಲೂಕ ಅಧ್ಯಕ್ಷ ಅಸ್ಮಾನ್ ಸಾಬ್ ನದಾಫ್, ಸಮಾಜದ ನಾಯಕ ನಗರಸಭೆಯ ಮಾಜಿ ಸದಸ್ಯ ಎಂ ಮಾನ್ವಿ ಪಾಶಾ, ರಾಜ್ಯ ಸಮಿತಿಯ ಕೋಶಾಧ್ಯಕ್ಷ ಶಾಬುದ್ದೀನ್ ಸಾಬ್ ನೂರಭಾಷಾ ಮತ್ತಿತರರು ಜಂಟಿ ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 