ಕೊನೆಯ ಗುರುಗಾದಿಲಿಂಗೇಶ್ವರ ಮಂಗಳ ಕಾರ್ಯಕ್ರಮದಲ್ಲಿ ಸಾಮೂಹಿಕ ವಿವಾಹ

ಕೊನೆಯ ಗುರುಗಾದಿಲಿಂಗೇಶ್ವರ ಮಂಗಳ ಕಾರ್ಯಕ್ರಮದಲ್ಲಿ ಸಾಮೂಹಿಕ ವಿವಾಹ Mass wedding at the last Gurugadi Lingeshwara Mangal event

ಲೋಕದರ್ಶನ ವರದಿ 

  ವಿಜಯನಗರ 28 : ಜಿಲ್ಲೆಯ ಹೊಸಪೇಟೆ ತಾಲೂಕು, ಅನಂತಶಯನ ಗುಡಿ ಗ್ರಾಮದ ಗುರುಗಾದಿಲಿಂಗೇಶ್ವರ ಪುರಾಣ ಮಂಗಳ ಕಾರ್ಯಕ್ರಮವು 09 ದಿನಗಳ ಕಾಲ ಸಮರೆ​‍್ಣಗೊಂಡಿದ್ದು, ಜೊತೆಗೆ ಕೊನೆಯ ಪುರಾಣ ಕಾರ್ಯಕ್ರಮದಲ್ಲಿ ಉಚಿತ ಸಾಮೂಹಿಕ 07 ಜೋಡಿಗಳ ವಿವಾಹಗಳು ಅತ್ಯದ್ಬುತವಾಗಿ ನೆರವೇರಿದವು.  

ಸದ್ರಿ ಉಚಿತ ಸಾಮೂಹಿಕ ವಿವಾಹದಲ್ಲಿ ರಕ್ತದಾನ ಶಿಭಿರದಲ್ಲಿ ಬಹಳಷ್ಟು ಜನ ರಕ್ತವನ್ನು ಧಾನ ಮಾಡಿದರು. ನಂತರ ಸಾವಯವ ಕೃಷಿ ವಿಷಯದ ಬಗ್ಗೆ ಸ-ವಿವರವಾದ ವರದಿಯನ್ನು ಕೃಷಿ ಕಾರ್ಮಿಕರು, ರೈತಾಪಿ ಜನರು, ಕೂಲಿ ಕಾರ್ಮಿಕರು ಇದರ ಉಪಯೋಗಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.  

ಸದ್ರಿ ಗಾದಿಲಿಂಗೇಶ್ವರ ಪುರಾಣ ಕಾರ್ಯಕ್ರಮಕ್ಕೆ ಹಾಗೂ ಉಚಿತ ಸಾಮೂಹಿಕ ಕಾರ್ಯಕ್ರಮಕ್ಕೆ ರಾಜ್ಯ ರೈತ ಹಸಿರಿಕರಣ ಸಾಂಸ್ಕೃತಿಕ ಟ್ರಸ್ಟ್‌ (ರಿ)ನ ಅಧ್ಯಕ್ಷರಾದ ಗಂಟೆ ಸೋಮಶೇಖರ್ ರವರು ನೆರವೇರಿಸಿಕೊಟ್ಟಿರುತ್ತಾರೆ.  

ಹಾಗೂ ಸದ್ರಿ ಕಾರ್ಯಕ್ರಮಕ್ಕೆ ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಪರಮಪೂಜ್ಯ ನಿರಂಜನ ಜಗದ್ಗುರು ಕೊಟ್ಟೂರು ಬಸಲಿಂಗ ಮಹಾಸ್ವಾಮಿಗಳವರು ಹೊಸಪೇಟೆ, ಶಿವಸಿದ್ದೇಶ್ವರ ಮಹಾಸ್ವಾಮಿಗಳು ಕನಕಗುರುಪೀಠ ಶಾಖಾಮಠ ಬಾದಿಮಿನಾಳ್ ಹಾಲುವರ್ತಿ, ಮಾತಂಗ ಮಹಾಮುನಿಗಳು ಮಾತಂಗ ಪವರ್ತ ಹಂಪಿ, ಗವಿಸಿದ್ದೇಶ್ವರ ಸ್ವಾಮಿಗಳು ಅಳ್ಳಳಿ ಗಂಗಾವತಿ ಇವರುಗಳ ಸನ್ನಿಧಿಯಲ್ಲಿ ನೆರೆದ ಸಾವಿರಾಜು ಜನಸಮೂಹದಲ್ಲಿ 07 ಜೋಡಿಗಳ ಮದುವೆ ಕಾರ್ಯಕ್ರಮ ನೆರವೆರಿರುತ್ತದೆ.

ಈ ಕಾರ್ಯಕ್ರಮದಲ್ಲಿ ಅಯ್ಯಾಳಿ ತಿಮ್ಮಪ್ಪ, ಡಾ. ಧರ್ಮೆಂದ್ರಗೌಡ, ಎನ್‌.ಕೆ.ದೀಪಾಲಿ ನಾರಾಯಣ ಶೆಟ್ಟರು, ಮತ್ತು ಎನ್‌.ಕೆ.ರಾಮು, ವಿ.ಕೆ.ಪಂಪಾಪತಿ, ಲೆಕ್ಚರ್ ಕಿನ್ನೂರಯ್ಯ, ರಶ್ಮಿರಾಜಶೇಖರ್ ಹಿಟ್ನಾಳ್, ಅಯ್ಯಾಳಿ ಶಂಕ್ರ​‍್ಪ, ಕಪ್ಲಿ ಹನುಮಂತಪ್ಪ, ಅವಿನಾಶ್ ಹಾಗೂ ಇತರೆ ಪ್ರಮುಖ ಊರಿನ ಮುಖಂಡರುಗಳ ಜೊತೆಗೆ ಭಾಗಿಯಾಗಿ ಕಾರ್ಯಕ್ರಮಗಳನ್ನು ಅದ್ಭುತವಾಗಿ ನೆರವೇರಿಸಲಾಯಿತು.