ಸಾಮೂಹಿಕ ವಿವಾಹ ಜೀವನಕ್ಕೆ ಆದರ್ಶ:ಶಿರಶ್ಯಾಡ ಶ್ರೀಗಳು
Mass marriage is ideal for life: Shirashyada Srigala
ಲೋಕದರ್ಶನ ವರದಿ
ಇಂಡಿ 02: ಸಾಮೂಹಿಕ ವಿವಾಹಗಳು ನಿರ್ಗತಿಕರ ಮದುವೆಗಳಲ್ಲ. ಅವು ಭಾಗ್ಯವಂತರ ಮದುವೆಗಳು ಇಂತಹ ವಿವಾಹ ಮಾಡಿಕೊಂಡರೇ ಅವರ ಜೀವನ ಆದರ್ಶವಾಗಲಿದೆ ಎಂದು ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಗೇಂದ್ರ ಶಿವಾಚಾರ್ಯ ಹೇಳಿದರು.ಅವರು ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಶ್ರೀ ಅಲ್ಲಮಪ್ರಭು, ಹನುಮ ಜಯಂತಿ ಹಾಗೂ ಗೈಬುಸಾಬ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಸರಳ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಇಲ್ಲಿ ಮದುವೆಯಾಗುವ ವಧು ವರರಿಗೆ ಹರ ಗುರು ಚರಮೂರ್ತಿಗಳು, ಸಹಸ್ರಾರು ಜನ ಅಕ್ಷತೆ ಹಾಕಿ ಹರಸುತ್ತಾರೆ. ಇಂತಹ ಭಾಗ್ಯ ಬೇರೆಡೆ ಸಿಗುವುದಿಲ್ಲ. ಹೀಗಾಗಿ ಇವು ಭಾಗ್ಯವಂತರ ಮದುವೆಗಳು ಎಂದು ಹೇಳಿದರು.ಸಾಮೂಹಿಕ ವಿವಾಹದಲ್ಲಿ ಭಾಗಿಯಾದ ನವದಂಪತಿಗಳು ಕನಿಷ್ಠ ನಾಲ್ಕು ಮಕ್ಕಳನ್ನು ಹೇರುವ ಶಪಥ ಮಾಡಬೇಕು. ನಿಮ್ಮ ಉದರದಿಂದ ಜನಿಸಿದ ಒಂದು ಮಗು ದೇಶ ಸೇವೆಗಾಗಿ, ಒಂದು ಮಗು ಧರ್ಮ ರಕ್ಷಣೆಗಾಗಿ, ಇನ್ನೊಂದು ಮಗು ಸಮಾಜದ ರಕ್ಷಣೆಗಾಗಿ ಮತ್ತೊಂದು ಮಗು ನಿಮ್ಮ ರಕ್ಷಣೆಗೆ ಹೀಗೆ ನಾಲ್ಕು ಮಕ್ಕಳನ್ನು ಹೆರಬೇಕು ಎಂದರು.
ಸಾನಿಧ್ಯ ವಹಿಸಿದ್ದ ಇಂಡಿ ಓಂಕಾರ ಆಶ್ರಮದ ಡಾ. ಸ್ವರೂಪಾನಂದ ಸ್ವಾಮೀಜಿ, ಆಳೂರ-ಚಳಕಾಪುರ ಸಿದ್ದಾರೂಢ ಆಶ್ರಮದ ಶಂಕರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸರಳ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುತ್ತಿರುವ ಮದುಮಕ್ಕಳಿಗೆ ಆ ಭಗವಂತನ ಕೃಪಾಶೀರ್ವಾದ ಇರಲಿ, ತಾವೆಲ್ಲರೂ ಉತ್ತಮ ಜೀವನ ನಡೆಸಿ ಎಂದು ಶುಭ ಹಾರೈಸಿದರು. ಶಾಸಕರ ಸಹೋದರ ಬಸವಂತರಾಯಗೌಡ ಪಾಟೀಲ ಮಾತನಾಡಿ ಇಂಗಳಗಿ ಒಂದು ಚಿಕ್ಕ ಗ್ರಾಮವಾದರೂ ಸಹಿತ ಹಲವು ವರ್ಷಗಳಿಂದ ಪ್ರತಿ ವರ್ಷವೂ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡು ಬಡ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಲ್ಲಮಪ್ರಭು ದೇವಸ್ಥಾನ ಕಮಿಟಿಯವರು ಕಾರ್ಯನಿರ್ವಹಿಸುತ್ತಿದ್ದು, ಅವರ ಈ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭು ಹೊಸಮನಿ ಮಾತನಾಡಿದರು, ವೇದಿಕೆಯಲ್ಲಿ ಕಲ್ಲನಗೌಡ ಬಿರಾದಾರ, ವಜ್ರಕಾಂತ ಹೂಗಾರ, ಅಶೋಕ ಕುಲಕರ್ಣಿ, ಯಲ್ಲಪ್ಪ ಸಾತಲಗಾಂವ, ಅರ್ಜುನ ಜಾಧವ, ಗುರುಬಾಳ ಪೂಜಾರಿ, ಜಲದಪ್ಪ ಪೂಜಾರಿ, ಅಶೋಕ ಬಳಬಟ್ಟಿ, ಭೀಮು ರಾಠೋಡ ಇದ್ದರು.ಜಾತ್ರಾ ಮಹೋತ್ಸವದಲ್ಲಿ ಅಣ್ಣಪ್ಪ ಅಹಿರಸಂಗ, ಸುಭಾಸ ಥೋರಾತ, ಬಸವರಾಜ ಜಾಧವ, ಉಮೇಶ ಬಳಬಟ್ಟಿ, ಭೀಮ ವಾಲೀಕಾರ, ಉಮೇಶ ಚವ್ಹಾಣ, ರಾಜು ಚಾಬುಕಸವಾರ, ಪ್ರಭು ಚಾಬುಕಸವಾರ, ಜಕ್ಕಪ್ಪ ಪೂಜಾರಿ, ಸದಾಶಿವ ಅಹಿರಸಂಗ, ವಿಷ್ಣು ವಾಘಮೋರೆ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ 7 ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 