ಸಾಮೂಹಿಕ ವಿವಾಹ ಬಡವರಿಗೆ ಪಾಲಿಗೆ ವರದಾನ .ನಾಗಭೂಷಣ ಶಿವಾಚಾರ್ಯ
Mass marriage is a boon for the poor. Nagabhushan Shivacharya
ಕಂಪ್ಲಿ 25: ಚಿಕೇನಕೊಪ್ಪ ಶ್ರೀ ಚನ್ನವೀರ ಶರಣರ ತತ್ವ ಮತ್ತು ಆದರ್ಶಗಳು ಸಮಾಜದ ಏಳ್ಗೆಗೆ, ಸಮಾಜವನ್ನು ತಿದ್ದಲಿಕ್ಕೆ ಹಾಗೂ ಸಮಾಜದ ಅಭಿವೃದ್ಧಿಗೆ ಸದಾ ಪೂರಕವಾಗಿವೆ ಎಂದು ಹೆಬ್ಬಾಳ್ ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು ತಾಲೂಕಿನ ಸಣಾಪುರ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚಿಕ್ಕೇನಕೊಪ್ಪ ಚನ್ನವೀರಶರಣರ 31ನೇ ವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ದಲ್ಲಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು ನಂತರ ಮಾತನಾಡಿ, ಶರಣ, ಸಂತರ ಮತ್ತು ಮಹಾತ್ಮರ ಸಂದೇಶಗಳು ಮನುಷ್ಯನ ಬದುಕಿಗೆ ಬೆಳಕಾಗಿವೆ. ಪ್ರತಿಯೊಬ್ಬರೂ ದಾಂಪತ್ಯ ಧರ್ಮವನ್ನು ಅಳವಡಿಸಿಕೊಂಡರೆ ಜೀವನ ಉತ್ತಮವಾಗಿರುತ್ತದೆ..ಸಾಮೂಹಿಕ ವಿವಾಹ ಬಡವರಿಗೆ ಪಾಲಿಗೆ ವರದಾನವಾಗಲಿದೆ ಶರಣರ ತತ್ವಗಳನ್ನು ಪಾಲನೆ ಮಾಡುವ ಮೂಲಕ ಅವರ ಪುಣ್ಯಸ್ಮರಣೆಯನ್ನು ಪ್ರತಿಯೊಬ್ಬರೂ ಆಚರಿಸುತ್ತಿರುವುದು ಕಂಡು ಬರುತ್ತಿದೆ ಎಂದರು.ನಂತರ ಉದ್ಭವ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷದಂತೆ ಕಳೆದ ಹಲವು ವರ್ಷಗಳಿಂದ ಚಿಕ್ಕೇನಕೊಪ್ಪ ಚನ್ನವೀರಶರಣರ ಪುಣ್ಯಸ್ಮರಣೆ ಆಚರಿಸಿಕೊಂಡು ಬರಲಾಗುತ್ತಿದ್ದು, ಇದರ ಜೊತೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಸಹ ಮಾಡಲಾಗಿದೆ. ದೇವರ ಪವಾಡದಿಂದ ಪ್ರತಿಯೊಬ್ಬರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದರು. ನವ ವಸಂತಕ್ಕೆ 6 ಜೋಡಿಗಳು ಕಾಲಿಟ್ಟರು. ಶರಣರ ಪುಣ್ಯಸ್ಮರಣೆ ನಿಮಿತ್ಯ ಗ್ರಾಮದಲ್ಲಿ ಶರಣರ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ಸಕಲ ಮಂಗಳವಾಧ್ಯದೊಂದಿಗೆ ನೆರವೇರಿತು. ಈ ಸಂದರ್ಭದಲಲಿ ಮುಸ್ಟೂರು ಹಿರೇಮಠದ ಈಶ್ವರಯ್ಯ ತಾತ, ಮುಖಂಡರಾದ ಡಾ.ಜಂಬುನಾಥಗೌಡ, ಈಶಣ್ಣ, ಮರಿಶಾಂತ, ವೀರನಗೌಡ, ಮುಸ್ಟೂರು ಚನ್ನಪ್ಪ, ಕನಕಗಿರಿ ಬಸವರಾಜ, ಜಿ.ಕುಮಾರಸ್ವಾಮಿ, ಯು.ಅರುಣ್ ಕುಮಾರ, ಎ.ನಾಗರಾಜ, ವೈ.ಮಹಾಂತೇಶ, ಕೆ.ಬಸವರಾಜ, ಬಿ.ಪಂಪನಗೌಡ, ಕೆ.ಚನ್ನಪ್ಪ, ಭೀಮಣ್ಸ, ವೆಂಕಟರಾಮರಾಜು, ಕನಕಗಿರಿ ರೇಣುಕಾಗೌಡ, ಶರಣಗೌಡ ಸೇರಿದಂತೆ ಅನೇಕ ಭಕ್ತಾಧಿಗಳು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 