ಅದ್ದೂರಿಯಾಗಿ ನೆರವೇರಿದ ಮರುಳಸಿದ್ದೇಶ್ವರ ಪಲ್ಲಕ್ಕಿ ಉತ್ಸವ
Marulasiddheshwara palanquin festival celebrated with grandeur
ಇಂಡಿ 19: ತಾಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಮರುಳಸಿದ್ದೇಶ್ವರರು ಧರ್ಮದ ಅವನತಿಯನ್ನು ಸಹಿಸದೇ ಜಗಜ್ಯೋತಿ ಬಸವೇಶ್ವರರ ನಂತರ ಪರಶಿವನ ಅಪ್ಪಣೆಯ ಮೇರೆಗೆ ಬಂದಂತಹ ಮರುಳಸಿದ್ದೇಶ್ವರರು ತಾಯಿಯ ಉದರದಿಂದ ಶಿಲೆಯಾಕರದಲ್ಲಿ ಜನಿಸಿ, ಶಿವನಿಂದಲೇ ಮಾನವ ರೂಪ ಪಡದ ಮಾಹಾ ಶರಣರು, ತಡವಲಗಾ ಗ್ರಾಮದಲ್ಲಿ ನೆಲೆಸಿ ಪಾಮರ ಭಕ್ತಾದಿಗಳಿಗೆ ಎಲ್ಲರಿಗೂ ಶಿವಲೀಲಾಮೃತವನ್ನು ಬೋಧಿಸಿ ಅನೇಕ ಪವಾಡಗಳನ್ನು ಮಾಡಿದ ಮಾಹಾಮಹಿಮಾತೀತ ಮರುಳಸಿದ್ದೇಶ್ವರರು ಗ್ರಾಮಕ್ಕೆ ಸುಖ, ಶಾಂತಿ, ನೆಮ್ಮದಿ ಸದಾ ಚಿರಾಯುವಾಗಲಿ ಎಂದು ಶಿವನಿಂದ ಅಭಯ ಪಡೆದುಕೊಂಡು ಸಮಸ್ತ ಭಕ್ತರಿಗೆಲ್ಲರಿಗೂ ನಾನೆಲ್ಲೆ ಇದ್ದರೂ ಕೂಡಾ ನಿಮ್ಮೆಲ್ಲರ ರಕ್ಷಣೆಯ ಭಾರ ಶಿವನು ನನ್ನ ಮೇಲೆ ಹಾಕಿದ್ದಾನೆ. ನಿಮ್ಮ ಸುಖ ದುಃಖ ನನ್ನನ್ನೆ ಸೇರಿದೆ. ನೀವು ಧರ್ಮವನ್ನು ಎಲ್ಲಿಯವರೆಗೆ ಕಾಪಾಡುವಿರೋ ಅಲ್ಲಿಯವರೆಗೆ ಮರುಳಸಿದ್ದೇಶ್ವರರು ನಿಮ್ಮ ಜೊತೆಯಲ್ಲಿರುತ್ತಾರೆ ಎಂದು ಆರ್ಶಿವಾದ ಮಾಡಿದ ಮಹಾ ಶಿವಶರಣರು ಮರುಳಸಿದ್ದೇಶ್ವರ ಪಲ್ಲಕ್ಕಿ ಉತ್ಸವ ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ನಡೆಯಿತು.
ಬೆಳೆಗೆಯಿಂದ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಮರುಳಸಿದ್ದೇಶ್ವರರ ದೇವರ ದರ್ಶನ ಪಡೆದು ಪುನಿತರಾದರು. ಮರುಳಸಿದ್ದೇಶ್ವರ ಪಲ್ಲಕ್ಕಿ ಉತ್ಸವ ವಾದ್ಯ ವೈಭವಗಳೊಂದಿಗೆ ಮೂಲ ದೇವಸ್ಥಾನದಿಂದ ಹೊರಟು ಸಾವಿರಾರು ಭಕ್ತರು ಜಿಟಿ ಜಿಟಿ ಮಳೆ ನಡುವೆ ದೀರ್ಘದಂಡ ಹಾಕಿದರು ನಂತರ ಪಲ್ಲಕ್ಕಿ ಜೋಡಗುಡಿ ತಲುಪಿತು. ಈ ಜಾತ್ರೆ ಶಾಂತಿಯುತವಾಗಿ ನಡೆಯಲು ಹೋರ್ತಿ ಪೋಲಿಸ್ ಠಾಣೆ ಪಿಎಸ್‌ಐ ರಾಕೇಶ್ ಬಗಲಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 