ನಾಳೆಯಿಂದ ಮರುಳಸಿದ್ದೇಶ್ವರ ಜಾತ್ರೆಗೆ ಅದ್ದೂರಿ ಚಾಲನೆ: ಅಭಿನವ ರಾಚೋಟೇಶ್ವರಶ್ರೀ
Marulasiddheshwara fair to be launched grandly from tomorrow: Abhinava Rachoteswarshri
ಇಂಡಿ 12: ತಾಲೂಕಿನ ಸುಕ್ಷೇತ್ರ ತಡವಲಗಾ ( ಜೋಡಗುಡಿ) ಗ್ರಾಮದ ಮರುಳಸಿದ್ದೇಶ್ವರ ಕಾರ್ತಿಕ ಮಾಸದ ಪ್ರಯುಕ್ತ ಮಹಾಲಕ್ಷ್ಮೀ ದೇವಸ್ಥಾನ ಕಳಸಾರೋಹಣ ಹಾಗೂ ಸರಳ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಮರುಳಸಿದ್ದೇಶ್ವರ ಮಹಾರಥೋತ್ಸವ ಹಾಗೂ ಲಕ್ಷದೀಪೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲಿದೆ ಎಂದು ತಡವಲಗಾ ಹೀರೆಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ತಿಳಿಸಿದ್ದಾರೆ.
ಅವರು ಇಂದು ಇಂಡಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಿ. 14ರಿಂದ 18ರವರೆಗೆ ಬೃಹತ್ ಜಾನುವಾರುಗಳ ಜಾತ್ರೆ ಮತ್ತು ಸಾಯಂಕಾಲ 6ಗಂಟೆಗೆ ಬಾಲವಾಗ್ಮೀ ಕುಮಾರಿ ಹಾರಿಕಾ ಮಂಜುನಾಥ ಇವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ದಿ. 15ರಂದು ಬೆಳಿಗ್ಗೆ 10.30 ಗಂಟೆಗೆ ತಡವಲಗಾ ಸಂಸ್ಕೃತಿಕ ಉತ್ಸವ ಉದ್ಘಾಟನೆ ಸಂಕಿರಣ ಗೋಷ್ಠಿ ಕವಿಗೋಷ್ಠಿ ವಿಶ್ವಚೇತನ ಪ್ರಶಸ್ತಿ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ರೈತಗೀತೆ ನಾಡಗೀತೆ ಸಂತೋಷ ವಾಲಿಕಾರ ಹಿರೇಮಸಳಿ ತಂಡದಿಂದ ನಡೆಯಲಿದೆ.
ಮದ್ಯಾಹ್ನ 1ಗಂಟೆಗೆ ಖ್ಯಾತ ಅಂಕಣಕಾರ ಮಂಜುನಾಥ ಜುನಗೊಂಡ ಇವರಿಂದ ಧರ್ಮ ಮತ್ತು ಭಾರತೀಯ ಸಂಸ್ಕೃತಿ ಹಾಗೂ ರವೀಂದ್ರ ಬೆಳ್ಳಿ ಇವರಿಂದ ಸಾವಯುವ ಕೃಷಿ ಮತ್ತು ಆಧುನಿಕ ಕೃಷಿಯಲ್ಲಿ ತಾಂತ್ರಿಕತೆ ಅಳವಡಿಕೆ ಹಾಗೂ ಸಿದ್ದಪ್ಪ ಬಿದರಿ ಇವರಿಂದ ಜಾನಪದದಲ್ಲಿ ಜೀವನ ಮೌಲ್ಯಗಳು ಎಂಬ ಸಂಕಿರರ್ಣ ಗೋಷ್ಠಿ ನಂತರ ಶಂಕರ ಬೈಚಬಾಳ ಗುರುರಾಜ ಲೂತಿ ಹಾಗೂ ಅನೇಕ ಕವಿಗಳಿಂದ ಕವಿಗೋಷ್ಠಿ ನಂತರ ಸಮಾರೋಪ ಹಾಗೂ ಪ್ರಶಸ್ತಿ ಸಮಾರಂಭ ನಡೆಯಲಿದೆ.
ಶುಂಭು ಬಳಿಗಾರ್ ಇವರ ನೇತೃತ್ವದಲ್ಲಿ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆೆ. ದಿ. 16ರಂದು ಮಧ್ಯಾಹ್ನ 3ಗಂಟೆಗೆ ತಡವಲಗಾ ಗ್ರಾಮದ ಮೂಲ ದೇವಾಲಯದಿಂದ ಜೋಡಗುಡಿ ವರಿಗೆ ಉಜ್ಜೈನಿ ಹಾಗೂ ಕಾಶಿ ಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಕುಂಭ ಮೆರವಣಿಗೆ, ಪುರಾಣ ಮಹಾಮಂಗಲ ಹಾಗೂ ಧರ್ಮಸಭೆ ಹಾಗೂ ಗ್ರಾಮದ ನಿವೃತ್ತರಾದವರಿಗೆ ಸನ್ಮಾನ ಸಮಾರಂಭ ನಡೆಯಲಿದೆ.
ದಿ. 17ರಂದು ಬೆಳಿಗ್ಗೆ 9.30 ಗಂಟೆಗೆ ಮಹಾಲಕ್ಷ್ಮೀ ದೇವಸ್ಥಾನದ ಕಳಸಾರೋಹಣ ಬೆಳಿಗ್ಗೆ 11ಗಂಟೆಗೆ ಸರಳ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಸಾಯಂಕಾಲ 5ಘಂಟಗೆ ನೂತನ ಮರುಳಸಿದ್ದೇಶ್ವರ ಮಹಾರಥೋತ್ಸವ ಸಂಜೆ 7ಗಂಟೆಗೆ ಲಕ್ಷದೀಪೋತ್ಸವ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.
ಈ ಎಲ್ಲಾ ಕಾರ್ಯಕ್ರಮದಲ್ಲಿ ಮಠಾಧೀಶರು, ರಾಜಕೀಯ ಗಣ್ಯರು ಹಾಗೂ ಗಣ್ಯ ಮಾನ್ಯರು ಸೇರಿದಂತೆ ಅನೇಕರು ಉಪಸ್ಥಿತರಿರುತ್ತಾರೆ.
ಸುದ್ದಿ ಗೋಷ್ಠಿಯಲ್ಲಿ ಶಿವಾನಂದಯ್ಯ ಶಾಸ್ತ್ರಿಗಳು ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಾಬುಸಾಹುಕಾರ ಮೇತ್ರಿ, ಮರುಳಸಿದ್ದೇಶ್ವರ ಜಾತ್ರೆ ಕಮೀಟಿ ಅಧ್ಯಕ್ಷ ಮಳಸಿದ್ದಪ್ಪ ಖಸ್ಕಿ, ಡಾ ರಮೇಶ ಪೂಜಾರಿ, ಬಸವರಾಜ ಚವಹಡಿಹಾಳ, ಅಣ್ಣಪ್ಪ ಜಾಲವಾದ, ಮಲ್ಕಪ್ಪ ತೆನ್ನಹಳ್ಳಿ ಕುತಬುದ್ದಿನ್ ಬಾಗವಾನ, ಧರೇಪ್ಪ ಖಸ್ಕಿ, ಜೇಟ್ಟಪ ಪಂತೋಜಿ, ಮಲ್ಲಿಕಾರ್ಜುನ ನೇಂದ್ಯಾಳ, ಶ್ರೀಶೈಲ ಕಟಾಯಿ, ಕಲ್ಲಪ್ಪ ಬುಕ್ಕಾಣಿ, ಬಸವರಾಜ ರಾಠೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 