14ರಿಂದ ಮರುಳಸಿದ್ದೇಶ್ವರ ಜಾತ್ರೆ: ನೂತನ ರಥಕ್ಕೆ ಭವ್ಯ ಸ್ವಾಗತ
Marulasiddheshwara Fair from 14th: Grand welcome for new chariot
ಇಂಡಿ 08: ತಾಲೂಕಿನ ಸುಕ್ಷೇತ್ರ ತಡವಲಗಾ(ಜೋಡಗುಡಿ )ಗ್ರಾಮದ ಆರಾಧ್ಯದೈವ ಮರುಳಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವ ನ. 14ರಿಂದ 18ರವರೆಗೆ ನಡೆಯಲಿದೆ. ಅದರಂಗವಾಗಿ ಭಕ್ತರು ಸೇರಿಕೊಂಡು ಸುಂದರವಾದ ಆಕರ್ಷಕ ಕಾಷ್ಠ ಶಿಲ್ಪ ಕಲಾಕೃತಿಯ ಮೆರುಗಿನ ನೂತನ ರಥವನ್ನು ನಿರ್ಮಿಸಲಾಗಿದೆ. ಶುಕ್ರವಾರ ನೂತನ ತೇರು ತಡವಲಗಾ ಗ್ರಾಮದ ಗಡಿಗೆ ಬರುತ್ತಿದ್ದಂತೆ ನೂತನ ತೇರಿಗೆ ತಡವಲಗಾ ಗ್ರಾಮದ ಹೀರೆಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿ ನೂತನ ತೇರನ್ನು ಬರಮಾಡಿಕೊಂಡರು. ಸಾವಿರಾರು ಮಹಿಳೆಯರು ಕುಂಭ ಹೊತ್ತುಕೊಂಡು ಮೆರವಣಿಗೆ ಮೂಲಕ ಗುಂಡುತಾಂಡಾದ ಬಸವೇಶ್ವರ ದೇವಾಲಯದಿಂದ ಸುಮಾರು ಆರು ಕಿಲೋಮೀಟರ ಮೆರವಣಿಗೆ ಮೂಲಕ ಜೋಡಗುಡಿ ಮರುಳಸಿದ್ದೇಶ್ವರ ದೇವಾಲಯ ತಲುಪಿತು.
ಈಗಿನಿಂದಲೇ ಜಾತ್ರೆಯ ಸಂಭ್ರಮಕ್ಕೆ, ವೈಭವದ ವೈಶಿಷ್ಟ್ಯಗಳೊಂದಿಗೆ ತಯಾರಿ ಶುರುವಾಗಿವೆ. ಕೆಲಸ ನಡೆದಿದ್ದು, ಜಾತ್ರೆಯ ಹೊತ್ತಿಗೆ ರಥ ತಯಾರು ಆಗಲಿದೆ. ಸುಮಾರು 33 ಲಕ್ಷ ರೂ. ವೆಚ್ಚದಲ್ಲಿ 37ಅಡಿ ಎತ್ತರ, 14.5 ಅಡಿ ಅಗಲವಿರುವ ನೂತನ ರಥ ಗದಗ ಜಿಲ್ಲೆಯ ಹೊಳೆಆಲೂರು ತಾಲೂಕಿನ ಮಹೇಶ್ ಹೆಬ್ಬಾರ್ ರಥ ಶಿಲ್ಪಿಗಳಿಗೆ ನೂತನ ರಥ ನಿರ್ಮಾಣ ಕಾರ್ಯವನ್ನು ವಹಿಸಲಾಗಿದೆ. ಮಹೇಶ್ ಹೆಬ್ಬಾರ್ ಅವರ ಕೈಚಳಕದಲ್ಲಿ ಸುಂದರ ಕಲಾಕೃತಿಗಳೊಂದಿಗೆ ಮಿಂಚುವ ಈ ರಥ ನಿರ್ಮಾಣ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ದಿ. 17ರಂದು ಸೋಮವಾರ ಉಜ್ಜನಿಯ ಜಗದ್ಗುರುಗಳ ಹಾಗೂ ಕಾಶಿ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ನೂತನ ಮರುಳಸಿದ್ದೇಶ್ವರ ರಥೋತ್ಸವ ನಡೆಯಲಿದೆ. ಶಿವಾನಂದ ಶಾಸ್ತ್ರಿಗಳು, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಾಬುಸಾಹುಕಾರ ಮೇತ್ರಿ, ಹಾಗೂ ಕಾಂತಪ್ಪ ಕಟ್ಟಿ, ಅಣ್ಣು ಸಾಹುಕಾರ ಮೇತ್ರಿ, ಬಸವರಾಜ ಮೇತ್ರಿ, ಭೀಮರಾಯ ಹೀರಾಪೂರೆ, ಮಳಸಿದ್ದಪ್ಪ ಖಸ್ಕಿ, ಕೃಷ್ಣಪ್ಪ ಮಿರ್ಜಿ, ಶರಣು ಕನ್ನೂರ, ಸೋಮಶೇಖರ್ ಬ್ಯಾಳಿ, ಮುತ್ತು ಹಿರೇಮಠ, ಶಂಭು ಮಠಪತಿ, ಮಲ್ಲಪ್ಪ ತೆನ್ನೆಹಳ್ಳಿ, ಅಶೋಕ ಕಟ್ಟಿ, ಮಲ್ಲು ನೇಂದ್ಯಾಳ ಸಾಹೇಬಗೌಡ ಇಂಡಿ ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 