ರಾಯಬಾಗ 04: ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಆರತಿ ಪ್ರಶಾಂತ ಕಾಂಬಳೆ (26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೂಲತಃ ಕಾಗವಾಡ ತಾಲೂಕಿನ ಕುಸನಾಳ ಗ್ರಾಮದ ಆರತಿ ಕಾಂಬಳೆ ಇತಳನ್ನು ಮೊರಬ ಗ್ರಾಮದ ಪ್ರಶಾಂತ ಇತನೊಂದಿಗೆ ವಿವಾಹ ಮಾಡಿ ಕೊಡಲಾಗಿತ್ತು. ಗಂಡ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದರೂ ಕೂಡ ಇತಳನ್ನು ಅದೇ ಗ್ರಾಮದ ಸಾಗರ ಕಾಂಬಳೆ ಎಂಬುವನು ನಿನ್ನ ಗಂಡ ಮತ್ತು ಮಕ್ಕಳನ್ನು ಬಿಟ್ಟು ನನ್ನ ಜೊತೆ ಬಾಳ್ವೆ ಮಾಡು ಬಾ ನನ್ನ ಮದುವೆ ಮಾಡಿಕೊ ಇಲ್ಲದಿದ್ದರೆ ನಿನ್ನನ್ನು ಸಾಯುವವರೆಗೆ ಬಿಡುವುದಿಲ್ಲಾ ಅಂತಾ ಮೇಲಿಂದ ಮೇಲೆ ಹೇಳುತ್ತಾ ಮಾನಸಿಕ ತ್ರಾಸ ನೀಡಿ, ಕಿರುಕುಳ ನೀಡಿದ್ದರಿಂದ ಇತನ ಕಿರಕುಳಕ್ಕೆ ಬೇಸತ್ತು ಆರತಿ ಕಾಂಬಳೆ ಇವಳು ಸೋಮವಾರ ಮುಂಜಾನೆ 11.30 ಗಂಟೆ ಸುಮಾರಿಗೆ ಬೊಮ್ಮನಾಳ ಗ್ರಾಮದಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಆರತಿ ಇವಳ ತಾಯಿ ಲಕ್ಷ್ಮೀಬಾಯಿ ಭೀಮು ಕಾಂಬಳೆ ಇವರು ರಾಯಬಾಗ ಪೊಲೀಸ್ ಠಾಣೆ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.