ಲೋಕದರ್ಶನ ವರದಿ
ಕುಮಟಾ 3: ಇಂದಿನ ಆಧುನಿಕ ಯುಗದಲ್ಲಿ ಅದೆಷ್ಟೋ ವಸ್ತುಗಳ ಉಪಯುಕ್ತತೆ ಅರಿಯದೆ ಅದನ್ನು ಹಾಳುಗೆಡವುಲಾಗುತ್ತದೆ. ಇಲ್ಲವೆ ಸುಟ್ಟು ಹಾಕಲಾಗುತ್ತದೆ. ಮಾನವ ಮನಸ್ಸು ಮಾಡಿದರೆ ಕಸದಿಂದಲೂ ರಸ ತೆಗೆಯಬಹುದೆಂಬುದು ಹಿರಿಯರ ಅನುಭವದ ಮಾತಾಗಿದೆ. ಅಂದಿನ ಹಿರಿಯರು ಆಡಿದ ಅಂದಿನ ಮಾತುಗಳು ಇಂದಿನ ಆಧುನಿಕ ಯುಗಕ್ಕೂ ಅನ್ವಯವಾಗತೊಡಗಿದೆ. ಕೇವಲ ಬಿಸಿನೀರು ಕಾಯಿಸಲು ಬಳಕೆಯಾಗುತ್ತಿದ್ದ ಅಡಿಕೆ ಹಾಳೆಯಿಂದ ಜಾನುವಾರುಗಳ ಆಹಾರ, ಗೊಬ್ಬರವನ್ನು ತಯಾರಿಸಬಹುದಲ್ಲದೇ, ಊಟದ ಬಟ್ಟಲನ್ನು ತಯಾರಿಸುವ ಸಾಮಥ್ರ್ಯ ಹೊಂದಿದೆ.
ಮಿಜರ್ಾನ ಊರಿನವರೇ ಆದ ನಿತ್ಯಾನಂದ ನಾಯ್ಕ 20 ವರ್ಷ ಬೆಂಗಳೂರಿನಲ್ಲಿ ಕಂಪ್ಯೂಟರ್ ಸೇಲ್ಸ್ ಮತ್ತು ಸವರ್ಿಸ್ ಕೆಲಸ ನಿರ್ವಹಿಸುತ್ತಿದ್ದರು. ಊರನಲ್ಲಿಯೇ ಕಂಪ್ಯೂಟರ್ ಕೆಲಸ ನಿರ್ವಹಿಸಬೇಕೆಂದ ಇವರಿಗೆ ಆಕಸ್ಮಾತ್ ಅಡಿಕೆ ಹಾಳೆಯಿಂದ ಬಟ್ಟಲು ತಯಾರಿಸುವ ಯೋಚನೆ ಹೊಳೆಯಿತು. ತಕ್ಷಣ ತಾವು ಅಂದುಕೊಂಡದ್ದನ್ನು ಕಾರ್ಯರೂಪಕ್ಕೆ ತರುತ್ತಲೆ, ಮಿಜರ್ಾನದಲ್ಲಿ ಕೋಮಲ ಇಂಡಸ್ಟ್ರೀಸ್ ಉದಯವಾಯಿತು. ಒಂದು ದೊಡ್ಡ ಅಡಿಕೆ ಹಾಳೆಯಿಂದ ಒಂದು ಊಟದ ತಾಟು, 2 ಸಣ್ಣ ಪ್ಲೇಟ್ ತಯಾರಿಸಲಾಗುತ್ತದೆ. ಊಟದ ಬಟ್ಟಲಿಗೆ 3 ರಿಂದ 4 ರೂಪಾಯಿ ಹಾಗೂ ಸಣ್ಣ ಪ್ಲೇಟ್ ಒಂದಕ್ಕೆ 2 ರೂ. ದರ ನಿಗದಿ ಮಾಡಿದ್ದಾರೆ. ಪ್ರತಿದಿನ 2000 ಪ್ಲೇಟ್ಗಳನ್ನು ತಯಾರಿಸಲಾಗುತ್ತಿದೆ. ಈ ಪ್ಲೇಟ್ ಹಾಗೂ ಬಟ್ಟಲು ತಯಾರಿಕೆಗೆ ಒಂದು ದಿನಕ್ಕೆ 800 ರಿಂದ 1000 ಸಾವಿರ ಅಡಿಕೆ ಹಾಳೆ ಬಳಕೆಯಾಗುತ್ತಿದೆ. ಅಡಿಕೆ ಹಾಳೆಯನ್ನು ಇಂಡಸ್ಟ್ರೀಗೆ ತಂದುಕೊಟ್ಟರೆ, ಒಂದು ಹಾಳೆಗೆ 2 ರೂ. ನಂತೆ ಖರೀದಿಸಲಾಗುತ್ತದೆ. ಇಂಡಸ್ಟ್ರೀಯವರೆ ಮನೆಗೆ ಹೋಗಿ ಖರೀದಿಸಿದರೆ ಒಂದು ಹಾಳೆಗೆ 1 ರೂ. ನೀಡಲಾಗುತ್ತದೆ. ಹೀಗೆ ಖರೀದಿಸಿದ ಹಾಳೆಯನ್ನು ಬಿಸಿಲನಲ್ಲಿ ಒಣಗಿಸಿ ನಂತರ ನೀರಿನಲ್ಲಿ ಚೆನ್ನಾಗಿ ತೊಳೆಯಲಾಗುತ್ತದೆ. ಹೀಗೆ ತೊಳೆದು ಸ್ವಚ್ಛಗೊಳಿಸಿದ ಹಾಳೆಯನ್ನು ಯಂತ್ರಕ್ಕೆ ನೀಡಿ ಅದನ್ನು ಊಟದ ಬಟ್ಟಲು ಅಥವಾ ಪ್ಲೇಟಾಗಿ ಪರಿವತರ್ಿಸಲಾಗುತ್ತದೆ. ಹೀಗೆ ತಯಾರಿಸಿದ ಊಟದ ಬಟ್ಟಲುಗಳು ಅಯ್ಯಪ್ಪಸ್ವಾಮಿಯ ಅನ್ನದಾನ, ದೇವತಾಕಾರ್ಯ, ಕೆಲವೊಂದು ಮದುವೆ, ಉಪನಯನ ಸಮಾರಂಭಕ್ಕೂ ಬಳಕೆಯಾಗುತ್ತವೆ.