ಮಣೂರಿನ ಅಬುಸಾಹೇಬ್ ಮುತ್ಯಾನ ಜಾತ್ರೆ: ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ
Manur's Abusaheb Mutya Fair: A Testament to Hindu-Muslim Harmony
ದೇವಹಿಪ್ಪರಗಿ, ಆ.28: ತಾಲ್ಲೂಕಿನ ಮಣೂರ ಗ್ರಾಮದಲ್ಲಿ ನಡೆಯುವ ಅಬುಸಾಹೇಬ್ ಮುತ್ಯಾನ ಜಾತ್ರೆ ಹಿಂದೂ-ಮುಸ್ಲಿಂ ಭಾವೈಕ್ಯತೆ, ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶ ಸಾರುವ ವಿಶಿಷ್ಟ ಜಾತ್ರೆಯಾಗಿದೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ) ಹೇಳಿದರು.
ಮಣೂರ ಗ್ರಾಮದ ಶ್ರೀ ಅಬುಸಾಹೇಬ್ ಮುತ್ಯಾನ ಜಾತ್ರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಪವಿತ್ರ ಸ್ಥಳ ಇದಾಗಿದೆ. ಬಸವಣ್ಣನ ನಾಡಿನಲ್ಲಿ ಧಾರ್ಮಿಕ ಸಾಮರಸ್ಯಕ್ಕೆ ವಿಶೇಷ ಸ್ಥಾನವಿದ್ದು, ಎಲ್ಲ ಸಮುದಾಯದವರು ಒಗ್ಗೂಡಿ ಜಾತ್ರೆಯನ್ನು ಸಂಭ್ರಮದಿಂದ ಆಚರಿಸುವುದು ಹೆಮ್ಮೆಯ ಸಂಗತಿ ಎಂದರು.
ಧಾರ್ಮಿಕ ಕ್ಷೇತ್ರಗಳು ನೆಮ್ಮದಿಯ ತಾಣಗಳಾಗಿದ್ದು, ಹಿಂದೂ-ಮುಸ್ಲಿಂ ಎಂಬ ಭೇದ ಮರೆತು ಎಲ್ಲರೂ ಒಂದಾಗಿ ಆಚರಿಸುವ ಮಣೂರಿನ ಜಾತ್ರೆ ನಾಡಿನ ಸೌಹಾರ್ದ ಪರಂಪರೆಯ ಪ್ರತೀಕವಾಗಿದೆ. ಇಂತಹ ಆಚರಣೆಗಳು ಸಮಾಜದಲ್ಲಿ ಶಾಂತಿ, ಸಹೋದರತ್ವ ಮತ್ತು ಏಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿ ಎಂದು ಆಶಿಸಿದರು.
ಜಗತ್ತಿಗೆ ಸಹೋದರತೆ, ಸಮಾನತೆ, ಸತ್ಯ, ಶುದ್ಧ ಕಾಯಕ ಹಾಗೂ ದಾಸೋಹದಂತಹ ಮಹತ್ವದ ತತ್ವಗಳನ್ನು ಸಾರಿದ ಬಸವಣ್ಣನ ನಾಡಿನಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಧಾರ್ಮಿಕ ಸಾಮರಸ್ಯದ ಸಂಕೇತವಾಗಿ ಈ ಜಾತ್ರೆ ಪ್ರತಿವರ್ಷ ನಡೆಯುತ್ತಿದೆ. ಯಾವುದೇ ಭೇದ-ಭಾವವಿಲ್ಲದೆ ವಿಜೃಂಭಣೆಯಿಂದ ಜಾತ್ರೆಯನ್ನು ಆಚರಿಸಬೇಕು ಎಂದು ಅವರು ಕರೆ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸಿ ದೇವರ ದರ್ಶನ ಪಡೆದು ಕೃಪೆಗೆ ಪಾತ್ರರಾಗುತ್ತಿದ್ದಾರೆ. ಮಣೂರ ಗ್ರಾಮದ ಐತಿಹಾಸಿಕ ಅಬುಸಾಹೇಬ್ ಮುತ್ಯಾನ ವಿಶಿಷ್ಟ ಜಾತ್ರೆಯ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗುತ್ತಿದೆ ಎಂದು ಡಾ. ಪ್ರಭುಗೌಡ ಲಿಂಗದಳ್ಳಿ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮೋಹನ ಸಜ್ಜನ, ಸುಭಾಸ ಆನೆಗುಂದಿ, ಸುರೇಶ ಪಾಟೀಲ, ನಿಂಗಪ್ಪ ಹರವಾಳ, ಪ್ರಕಾಶ ಹಿರಳಕೊಂಡ, ವಸಂತ ರಾಠೋಡ, ಶಿವಾಜಿ ಮಾನೆ ಸೇರಿದಂತೆ ಸರ್ವ ಸಮುದಾಯದ ಜನರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 