ದ್ಯಾಮವ್ವ ದೇವಿಯ ನೂತನ ಗೋಪುರಕ್ಕೆ ಕಳಸಾರೋಹಣ

ದ್ಯಾಮವ್ವ ದೇವಿಯ ನೂತನ ಗೋಪುರಕ್ಕೆ ಕಳಸಾರೋಹಣ  Installation of the finial on the new gopura of Goddess Dyamavva


ರಾಣೇಬೆನ್ನೂರು, ಆ.27: ತಾಲೂಕಿನ ಸುಕ್ಷೇತ್ರ ಹಳೆ ಹುಲಿಹಳ್ಳಿ ಗ್ರಾಮದ ಗ್ರಾಮ ದೇವತೆಯಾದ ಶ್ರೀ ದ್ಯಾಮವ್ವ ದೇವಿಯ ನೂತನ ಗೋಪುರದ ಕಳಸಾರೋಹಣ ಹಾಗೂ ರೋಹಣ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.  

ಕಾರ್ಯಕ್ರಮದ ಅಂಗವಾಗಿ ಕುಂಭಮೇಳ ಹಾಗೂ ಪಡ್ಲಿಗೆ ತುಂಬಿಸುವ ಧಾರ್ಮಿಕ ವಿಧಿವಿಧಾನಗಳು ನಡೆದವು. ನಂತರ ಮಧ್ಯಾಹ್ನ ಅನ್ನಪ್ರಸಾದ ಕಾರ್ಯಕ್ರಮವೂ ಜರುಗಿತು.  ಈ ಸಂದರ್ಭದಲ್ಲಿ ಹಳೆ ಹುಲಿಹಳ್ಳಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತನು-ಮನ-ಧನ ಸಹಾಯದೊಂದಿಗೆ ದೇವಿಯ ಕೃಪೆಗೆ ಪಾತ್ರರಾಗುವ ಸಂಕಲ್ಪ ವ್ಯಕ್ತಪಡಿಸಿದರು.  

ನೂತನ ಗೋಪುರ ನಿರ್ಮಾಣ ಹಾಗೂ ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಭಕ್ತರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.