ಮಂಕಿ : ಅಂಚೆ ಜನ ಸಂಪರ್ಕ ಅಭಿಯಾನ

ಮಂಕಿ : ಅಂಚೆ ಜನ ಸಂಪರ್ಕ ಅಭಿಯಾನ Manki: Postal Public Outreach Campaign

ಲೋಕದರ್ಶನ ವರದಿ 

ಕಾರವಾರ  10:  ಕಾರವಾರ ಅಂಚೆ ವಿಭಾಗ ಹಾಗೂ ಮದ್ರಸಾ ರಹ್ಮಾನಿಯಾ ಮತ್ತು ಜಮಾತುಲ್ ಮುಸ್ಲಿಮಿನ್ ಕಮಿಟಿ, ನವಾಯತ್ ಕಾಲೋನಿ, ಮಂಕಿ ಇವರ ಆಶ್ರಯದಲ್ಲಿ ಮದ್ರಸಾ ರಹ್ಮಾನಿಯಾ ಮಂಕಿ (ಅರಬಿಕ್ ಶಾಲೆ)ಯಲ್ಲಿ  ನಡೆದ ಅಂಚೆ ಜನ ಸಂಪರ್ಕ ಅಭಿಯಾನಕ್ಕೆ ಕಾರವಾರ ಅಂಚೆ ವಿಭಾಗದ ಅಧೀಕ್ಷಕ ಹೂವಪ್ಪ ಜಿ. ರವರು ಚಾಲನೆ ನೀಡಿದರು. ಈ ಅಭಿಯಾನದಲ್ಲಿ ಹೊಸ ಆಧಾರ್ ನೋಂದಣಿ, ಬಯೋಮೆಟ್ರಿಕ್ ಪರಿಷ್ಕರಣೆ, ವಿಳಾಸ ಮತ್ತು ಮೊಬೈಲ್ ಸಂಖ್ಯೆ ತಿದ್ದುಪಡಿ ಮಾಡಿಕೊಡಲಾಗುವುದಲ್ಲದೆ,

ಅಂಚೆ ಇಲಾಖೆಯ ವಿವಿಧ ಅಂಚೆ ಸೇವೆಗಳ ಮಾಹಿತಿ ಮತ್ತು ಸೌಲಭ್ಯಗಳ ಕುರಿತು ಕಾರ್ಯಾಗಾರವನ್ನು ನಡೆಸಲಾಗುವುದು. ಗ್ರಾಹಕರು ಅಪಘಾತ ವಿಮೆ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಅಂಚೆ ಜೀವ ವಿಮೆಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಡೈರೆಕ್ಟ್‌ ಬೆನಿಫಿಟ್ ಟ್ರಾನ್ಸ್‌ಫರ್ ಫಲಾನುಭವಿಗಳಿಗೆ ಐಪಿಪಿಬಿ ಮೊದಲಾದ ಆನ್‌ಲೈನ್ ಖಾತೆಗಳನ್ನು ಸ್ಥಳದಲ್ಲಿಯೇ ತೆರೆಯಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. 

ಹೊನ್ನಾವರ ಅಂಚೆ ಉಪವಿಭಾಗದ ಮುಖ್ಯಸ್ಥ ಶಂಕರ ಲಮಾಣಿ ಮಾತನಾಡಿ, ಆಧಾರ್‌ನ ವಿಶಿಷ್ಟ ಅವಶ್ಯಕತೆಗಳು ಮತ್ತು ಅದರ ಉಪಯೋಗವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಜಮಾತುಲ್ ಮುಸ್ಲಿಮಿನ್ ಕಮಿಟಿಯ ಅಧ್ಯಕ್ಷ ಹಬಿಬುಲ್ಲ ಕಟಪಾಡಿ, ಮದ್ರಸಾ ರಹ್ಮಾನಿಯಾ ಮಂಕಿಯ ಪ್ರಿನ್ಸಿಪಾಲ್ ಮೌಲಾನಾ ಶಕೀಲ್ ಅಹ್ಮದ್ ಶುಕ್ರಿ, ಮುಜಕ್ಕೀರ್ ಅಹಮದ್ ಕಟ್ಟಿಂಗೆರಿ, ಮಾಶಿಮಾ ಮೊಹಮ್ಮದ್ ಇರ್ಫಾನ್ ಮತ್ತು ಅಬು ಮಹಮ್ಮದ್ ಸಾವಡಾ ಹಾಗೂ ಅಂಚೆ ಜನ ಸಂಪರ್ಕ ಅಭಿಯಾನದಲ್ಲಿ ಮಂಕಿ ಅಂಚೆ ಕಚೇರಿಯ ಅಂಚೆಪಾಲಕರಾದ ಸರ್ಫ್ರಾಜ್ ನವಾಜ್, ಮೇಲ್ವಿಚಾರಕರಾದ ಮಂಜುನಾಥ್ ವೀರ​‍್ಪ ನಾಯ್ಕ್‌, ವಿಘ್ನೇಶ್ವರ ನಾಯ್ಕ್‌, ಹೊನ್ನಾವರ ಮಾರುಕಟ್ಟೆ ನಿರ್ವಾಹಕ ಪ್ರಸನ್ನ ಹೇರೂರು, ಸುಪ್ರಿಯ ದೇಸಾಯಿ, ಅಕ್ಷತಾ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.