ಕಡು ಬಡತನದಲ್ಲೂ ಪಿಎಚ್‌ಡಿ ಸಾಧನೆ ಮಾಡಿದ ಮಂಜುನಾಥ
Manjunatha achieved his PhD despite living in extreme poverty
ಲೋಕದರ್ಶನ ವರದಿ
ಬಳ್ಳಾರಿ 29: ಕಡು ಬಡತನದ ನಡುವೆಯೂ ಬಾಲ್ಯದಲ್ಲಿ ಕುರಿ ಕಾಯುತ್ತಿದ್ದ ಕೂಡ್ಲಿಗಿ ಪಟ್ಟಣದ 9ನೇ ವಾರ್ಡ್‌ನ ಕೆ.ಕೆ. ಹಟ್ಟಿ ನಿವಾಸಿಗಳಾದ ಹನುಮಂತಪ್ಪ ಹಾಗೂ ಕೆಂಚಮ್ಮ ದಂಪತಿಯ ಪುತ್ರ ಮಂಜುನಾಥ ಅವರು ನಂತರ ಕುರಿ ಕಾಯುವ ಕೆಲಸವನ್ನು ಬಿಟ್ಟು ಶಿಕ್ಷಣದತ್ತ ಮುಖ ಮಾಡಿ ಇದೀಗ ಪಿಎಚ್‌ಡಿ ಪದವಿ ಪಡೆದು ಗ್ರಾಮದ ಹೆಮ್ಮೆ ಆಗಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಭೌತಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಎ.ಎಸ್. ಬೆನ್ನಾಳ ಅವರ ಮಾರ್ಗದರ್ಶನದಲ್ಲಿ “ಟ್ರೇಸ್ ಎಲಿಮೆಂಟಲ್ ಅನಾಲಿಸಿಸ್ ಯೂಸಿಂಗ್ ಎಕ್ಸ್‌ಆರ್‌ಎಫ್ ಟೆಕ್ನಿಕ್ಸ್” ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಮಂಜುನಾಥ ಅವರು 1ರಿಂದ 7ನೇ ತರಗತಿವರೆಗೆ ಕೆ.ಕೆ. ಹಟ್ಟಿ ಪ್ರಾಥಮಿಕ ಶಾಲೆಯಲ್ಲಿ, 8ರಿಂದ 10ನೇ ತರಗತಿವರೆಗೆ ಎಚ್.ಎಂ.ವಿ ಪ್ರೌಢಶಾಲೆಯಲ್ಲಿ, ಪಿಯುಸಿ ವಿಜ್ಞಾನ ವಿಭಾಗವನ್ನು ಮೋರಾರ್ಜಿ ದೇಸಾಯಿ ಪಿಯು ಕಾಲೇಜು ಬಳ್ಳಾರಿಯಲ್ಲಿ, ಬಿಎಸ್ಸಿ ಪದವಿಯನ್ನು ವಿಜಯನಗರ ಕಾಲೇಜು ಹೊಸಪೇಟೆಯಲ್ಲಿ ಹಾಗೂ ಎಂಎಸ್ಸಿ ಭೌತಶಾಸ್ತ್ರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಪೂರ್ಣಗೊಳಿಸಿದ್ದಾರೆ.
ಕಡು ಬಡತನ ಮತ್ತು ಸಂಕಷ್ಟಗಳ ನಡುವೆಯೂ ಶಿಕ್ಷಣದ ಮೇಲಿನ ಆಸಕ್ತಿ, ಪರಿಶ್ರಮ ಮತ್ತು ಛಲದಿಂದ ಉನ್ನತ ಸಾಧನೆ ಮಾಡಿದ ಮಂಜುನಾಥ ಅವರ ಈ ಸಾಧನೆಗೆ ಕುಟುಂಬ ವರ್ಗದವರು, ಸ್ನೇಹಿತರು, ಶಿಕ್ಷಕರು ಹಾಗೂ ಕೆ.ಕೆ. ಹಟ್ಟಿ ನಿವಾಸಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 