ಉದ್ಯಮ ಪ್ರತಿನಿಧಿಗಳಿಗಾಗಿ ನಿರ್ವಹಣಾ ಅಭಿವೃದ್ಧಿ ಕಾರ್ಯಕ್ರಮ
Management Development Program for Industry Representatives
ಲೋಕದರ್ಶನ ವರದಿ
ಬೆಳಗಾವಿ 24: ಕರ್ನಾಟಕ ಲಾ ಸೊಸೈಟಿಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಜುಕೇಶನ್ ಅಂಡ್ ರಿಸರ್ಚ್(KLS–IMER), , ಬೆಳಗಾವಿ ಹಾಗೂ ಲಘು ಉದ್ಯೋಗ ಭಾರತಿ (ಬೆಳಗಾವಿ ಘಟಕ) ಇವುಗಳು ಸಂಯುಕ್ತವಾಗಿ ದಿ. 23 ಡಿಸೆಂಬರ್ 2025 ರಂದು ಉದ್ಯಮ ಪ್ರತಿನಿಧಿಗಳಿಗಾಗಿ ನಿರ್ವಹಣಾ ಅಭಿವೃದ್ಧಿ ಕಾರ್ಯಕ್ರಮ(Management
Development Programme) ಅನ್ನು ಆಯೋಜಿಸಿವೆ. ಭಾರತ ಸರ್ಕಾರ ಪರಿಚಯಿಸಿದ ಹೊಸ ಕಾರ್ಮಿಕ ಸುಧಾರಣೆಗಳ ಕುರಿತು ವಿಶಾಲ ಅರಿವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು “ಕಾರ್ಮಿಕ ಸಂಹಿತೆಗಳ ಅವಶ್ಯಕ ಅಂಶಗಳು(Essentials
of Labour Codes)” ಎಂಬ ಶೀರ್ಷಿಕೆಯಡಿಯಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಡಿ. ಜಿ. ನಾಗೇಶ್, ಉಪ ಕಾರ್ಮಿಕ ಆಯುಕ್ತರು, ಬೆಳಗಾವಿ ಅವರು ಮುಖ್ಯ ಅತಿಥಿಯಾಗಿ ಉದ್ಘಾಟಿಸಿದರು. ಅವರು ಭಾರತೀಯ ಕಾರ್ಮಿಕ ಕಾನೂನುಗಳ ಹಳೆಯ ವಿಧಿಗಳು ಹಾಗೂ ಪರಿಷ್ಕೃತ ಕಾರ್ಮಿಕ ಸಂಹಿತೆಗಳ ಬಗ್ಗೆ ಹಾಗೂ ಅವು ಕೈಗಾರಿಕೆಗಳಿಗೆ ಹೊಂದಿಕೆಯಾಗುವ ರೀತಿಯ ಕುರಿತು ಬೆಳಕು ಚೆಲ್ಲಿದರು.
ಡಾ. ಸಚಿನ್ ಸಬ್ನಿಸ್, ರಾಷ್ಟ್ರೀಯ ಉಪಾಧ್ಯಕ್ಷರು, ಲಘು ಉದ್ಯೋಗ ಭಾರತಿ ಅವರು ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿ, ಕಾರ್ಮಿಕ ಕಾನೂನುಗಳಲ್ಲಿ ಸುಧಾರಣೆಗಳ ಅಗತ್ಯತೆಯನ್ನು ಒತ್ತಿ ಹೇಳಿ, ಅವುಗಳಿಂದ ಬೆಳಗಾವಿ ಜಿಲ್ಲೆಯ ಕೈಗಾರಿಕೆಗಳಿಗೆ ದೊರೆಯುವ ಪ್ರಯೋಜನಗಳನ್ನು ವಿವರಿಸಿದರು.
ಡಾ. ಅರಿಫ್ ಶೇಖ್, ನಿರ್ದೇಶಕರು, KLS–IMER ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು ಕಲಿಕಾ ಪ್ರಕ್ರಿಯೆಯನ್ನು ಬಲಪಡಿಸಲು ಕೈಗಾರಿಕೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ಸಹಕಾರದ ಮಹತ್ವವನ್ನು ಹೈಲೈಟ್ ಮಾಡಿದರು.
ಮಹೇಶ್ ಇನಾಮ್ದಾರ್, ಅಧ್ಯಕ್ಷರು, ಲಘು ಉದ್ಯೋಗ ಭಾರತಿ, ಬೆಳಗಾವಿ ಘಟಕ ಅವರು ಸಂಸ್ಥೆಯ ಮಹತ್ವ ಹಾಗೂ ಒಖಒಇ ಗಳಿಗೆ ಬೆಂಬಲ ನೀಡುವ ಸಂಸ್ಥೆಯ ಪ್ರಯತ್ನಗಳ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧಿವೇಶನವನ್ನು ಡಾ. ಕೌಶಿಕ್ ಸರ್ಕಾರ್, ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು ಹಿ ಸಾಮಾನ್ಯ ನಿರ್ವಹಣೆ, ಗೋವಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಹಾಗೂ ಅಒಂ ಎನ್. ರವೀಂದ್ರನಾಥ್ ಕೌಶಿಕ್, ಬೆಂಗಳೂರು ಇವರಿಂದ ನಡೆಸಲಾಯಿತು.
ವಿವಿಧ ಕೈಗಾರಿಕೆಗಳಿಂದ 80 ಕ್ಕೂ ಹೆಚ್ಚು ಪ್ರತಿನಿಧಿಗಳು ಈ ನಿರ್ವಹಣಾ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಡಾ. ಪ್ರವೀಣ್ ಕುಲಕರ್ಣಿ ಅವರು ಪರಿಷ್ಕೃತ ಕಾರ್ಮಿಕ ಕಾನೂನುಗಳ ಅವಲೋಕನ ಹಾಗೂ ಕೈಗಾರಿಕೆಗಳಿಗೆ ಅದರ ಪ್ರಾಸಂಗಿಕತೆಯನ್ನು ವಿವರಿಸಿ ಸಭಿಕರನ್ನು ಸ್ವಾಗತಿಸಿದರು.
ಡಾ. ಅಮೀತ್ ವಿ. ಕುಲಕರ್ಣಿ ಅವರು ಈ ಸಂದರ್ಭದಲ್ಲಿ ವಂದನಾ ನಿರೂಪಣೆ (Vote of Thanks) ಸಲ್ಲಿಸಿದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 