ಮನುಷ್ಯ ಸದ್ಗುರುವಿನ ಕೃಪೆಗೆ ಪಾತ್ರರಾಗಬೇಕು: ಡಾ.ಶಿವಾನಂದ ಭಾರತಿ ಶ್ರೀಗಳು
Man should become worthy of the grace of a true Guru: Dr. Shivananda Bharati Swamiji
ಲೋಕದರ್ಶನ ವರದಿ
ಬೆಟಗೇರಿ 16 : ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರುವಿಗಿದೆ. ಮನುಷ್ಯ ಸದ್ಗುರುವಿನ ಕೃಪೆಗೆ ಪಾತ್ರರಾಗಬೇಕು. ಸತ್ಕಾರ್ಯಗಳಿಗೆ ದಾನ ಮಾಡಿ ತಮ್ಮ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗಜಾನನ ವೇದಿಕೆಯಲ್ಲಿ ಸೆ.15ರಂದು ನಡೆದ 42ನೇ ಸತ್ಸಂಗ ಸಮ್ಮೇಳನದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸದ್ಗುರುವಿನ ಕೃಪೆಗೆ ಪಾತ್ರರಾಗಬೇಕಾದರೆ ಒಳ್ಳೆಯ ಕಾರ್ಯಕ್ಕೆ ದಾನ, ಧರ್ಮ ಮಾಡಬೇಕು. ದಾನ, ಧರ್ಮ ಮಾಡಿದವರಿಗೆ ಪುಣ್ಯ ಬರುತ್ತದೆ. ಸದ್ಗುರುವಿನ ಮೇಲೆ ಅಪಾರ ನಂಬಿಕೆ, ಪ್ರೀತಿವಿರಬೇಕು ಎಂದರು.
ಸೆ.15ರಂದು ಪ್ರಾತ: ಕಾಲ ಬ್ರಾಹ್ಮೀ ಮೂಹೂರ್ತದಲ್ಲಿ ಶಿವನಾಮ ಸ್ಮರಣೆ ಬಳಿಕ ರಾತ್ರಿ 8 ಗಂಟೆಗೆ ಇಂಚಲದ ಸಾಧು ಸಂಸ್ಥಾನಮಠದ ಸದ್ಗುರು ಡಾ.ಶಿವಾನಂದ ಭಾರತಿ ಮಹಾಸ್ವಾಮಿಜಿ ಘನ ಅಧ್ಯಕ್ಷತೆಯಲ್ಲಿ ಪ್ರವಚನ ನಡೆಯಿತು. ಹಳಕಟ್ಟಿಯ ನಿಜಗುಣ ಸ್ವಾಮಿಜಿ, ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಡಾ. ನೀಲಮ್ಮಾತಾಯಿ, ಇಂಚಲದ ಪೂರ್ಣಾನಂದ ಭಾರತಿ ಸ್ವಾಮಿಜಿ, ಮಲ್ಲಾಪೂರ(ಕೆ.ಎನ್) ಚಿದಾನಂದ ಸ್ವಾಮಿಜಿ, ಹುಣಶ್ಯಾಳ(ಪಿ.ಜಿ) ನಿಜಗುಣ ದೇವರು, ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಮಹಾರಾಜರು, ಜೋಡಕುರುಳಿ ಚಿದ್ಘನಾನಂದ ಭಾರತಿ ಸ್ವಾಮೀಜಿ, ಹಡಗಿನಾಳದ ಮಲ್ಲೇಶ ಶರಣರು, ಗದಗದ ಶರಣೆ ಮೈತ್ರಾ ತಾಯಿಯವರಿಂದ ನೋಡಿ ಕೆಲರಂ ಮಾತನಾಡಿ ಕೆಲರಂ ಎಂಬ ವಿಷಯದ ಮೇಲೆ ಪ್ರವಚನ, ಹೇಳಿದರು. ಕರಿಕಟ್ಟಿ ಗುರುನಾಥ ಶಾಸ್ತ್ರೀಗಳಿಂದ ಕೀರ್ತನೆ ಜರುಗಿತು.
ಸ್ಥಳೀಯ ಶರಣ ಅಡಿವೆಪ್ಪ ಜೋಗಿ ಹಾಗೂ ಕುಟುಂಬದವರಿಂದ ಮತ್ತು ಅಕ್ಕಿಸಾಗರದ ಮಲ್ಲಪ್ಪ ತಡಸಿ ಹಾಗೂ ಕುಟುಂಬದವರಿಂದ ಡಾ. ಶಿವಾನಂದ ಭಾರತಿ ಶ್ರೀಗಳಿಗೆ ಭಕ್ತಿಯ ತುಲಾಭಾರ ಸೇವೆ, ಕೀರೀಟ ಮಹಾಪೂಜೆ, ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸದ್ಭಕ್ತರಿಂದ ರಾತ್ರಿ ಶಿವ ಭಜನೆ, ಶಿವಜಾಗರಣೆ, ಕಲ್ಲೋಳಿ ಕುಮಾರಿ ವೀಣಾ ಮಂಟೂರ ಹಾಗೂ ಸಂಗಡಿಗರಿಂದ ಸಂಗೀತ ಸೇವೆ, ಶರಣ ಯಲ್ಲಪ್ಪ ಮೇಳೆನ್ನವರ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ ಕುಟುಂಬದವರಿಂದ ಮಹಾಪ್ರಸಾದ ಸೇವೆ ನಡೆಯಿತು. ಚಿಂತಪ್ಪ ಸಿದ್ನಾಳ, ಮಹಾದೇವಪ್ಪ ಹಡಪದ, ಈರ್ಪ ದೇಯಣ್ಣವರ, ಈಡಪ್ಪ ರಾಮಗೇರಿ, ಗೌಡಪ್ಪ ಮೇಳೆಣ್ಣವರ, ಬಸಪ್ಪ ತೋಟಗಿ, ನಿಂಗಪ್ಪ ಕಂಬಿ, ಸಿದ್ರಾಮ ಪಡಶೆಟ್ಟಿ, ಫಕೀರ್ಪ ಪೇದನ್ನವರ, ಬಸವರಾಜ ನೀಲಣ್ಣವರ, ಈರ್ಪ ಮಾಡಲಗಿ, ಶಿವನಗೌಡ ದೇಯಣ್ಣವರ, ಬಸನಗೌಡ ದೇಯಣ್ಣವರ, ಭೀಮನಾಯ್ಕ ನಾಯ್ಕರ, ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸಂತ-ಶರಣರು, ಹರ, ಗುರು, ಚರಮೂರ್ತಿಗಳು, ಗಣ್ಯರು, ಆಧ್ಯಾತ್ಮ ಪ್ರವಚನ ಶ್ರವಣಾಸಕ್ತರು, ಸ್ಥಳೀಯ ಈಶ್ವರ ಭಜನಾ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಮತ್ತೀತರರು ಇದ್ದರು. ಬಸವರಾಜ ಪಣದಿ ಕಾರ್ಯಕ್ರಮ ರೂಪಿಸಿ ಕೊನೆಗೆ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 