ರಾಣೇಬೆನ್ನೂರು ಜೂ.14: ಮನುಷ್ಯನು ಅತ್ಯಂತ ಸರ್ವ ಶ್ರೇಷ್ಠ ಬುದ್ಧಿ ಜೀವಿಯಾಗಿದ್ದು, ಆತನ ಮೆದುಳಿನ ಸಹಾಯದಿಂದ ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡಬಲ್ಲ ಆಪಾರ ಶಕ್ತಿಶಾಲಿಯಾಗಿದ್ದಾನೆ. ಈ ನಿಟ್ಟಿನಲ್ಲಿ ಸರ್ವರೂ ಮೆದುಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸಾಗಿದಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ನಂದೀಶ್ವರ ನೈಪುಣ್ಯ ಕೌಶಲ್ಯ ಸಂಸ್ಥೆಯ ಸಂಸ್ಥಾಪಕ ನಂದೀಶ್ವರ ಬಿ.ಬಿ. ಶೆಟ್ಟರ್ ಹೇಳಿದರು.
ಶುಕ್ರವಾರ ತಾಲೂಕಿನ ಚೌಡಯ್ಯದಾನಪುರದ ಶ್ರೀ ಮುಕ್ತೇಶ್ವರ ದೇವಸ್ಥಾನದ ಆವರಣದಲ್ಲಿ ನಂದೀಶ್ವರ ನೈಪುಣ್ಯ ಕೌಶಲ್ಯ ಸಂಸ್ಥೆ ಹಾಗೂ ಸಕರ್ಾರಿ ಪ್ರೌಢಶಾಲೆ ಇವರ ಸಂಯುಕ್ತಾಶ್ರಯದಲ್ಲಿ 2019-20ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾಥರ್ಿಗಳು ಹಾಗೂ ಪಾಲಕರ ಮತ್ತು ಪೋಷಕರಿಗೆ ಹಮ್ಮಿಕೊಳ್ಳಲಾಗಿದ್ದ ವಿಶೇಷ ನೈಪುಣ್ಯ ಕೌಶಲ್ಯ ತರಬೇತಿ ಕಾಯರ್ಾಗಾರದಲ್ಲಿ ಉಚಿತ ತರಬೇತಿ ನೀಡಿ ಅವರು ಮಾತನಾಡಿದರು.
ಓದುವುದು, ಬರೆಯುವುದು, ಪರೀಕ್ಷೆ ಎದುರಿಸುವುದು ಕೇವಲ ಅಂಕಗಳಿಗೋಸ್ಕರ ಎಂಬ ಮನೋಭಾವನೆಯನ್ನು ಹೊರಹಾಕಿ, ಜೀವನದಲ್ಲಿ ಒಳ್ಳೆಯ ಗುರಿ ಇರಬೇಕು. ಜೊತೆಗೆ ಕನಸ್ಸು, ಕನಸ್ಸನ್ನು ನನಸು ಮಾಡುವ ಆತ್ಮವಿಶ್ವಾಸ ಇರಬೇಕು. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿದಾಗ ಉತ್ತಮ ಅಂಕಗಳ ಜೊತೆಗೆ ಯಶಸ್ಸಿನ ಪಯಣದತ್ತ ಸಾಗಲು ಸಾಧ್ಯವಾಗುತ್ತದೆ ಎಂದರು.
ಮೊಬೈಲ್, ಟೀವಿ ನೋಡುವಂತಹ ಗೋಜಿಗೆ ಹೋಗದೆ ಕಲಿಕೆಯ ವೇಳಾಪಟ್ಟಿಯನ್ನು ಸಿದ್ದಪಡಿಸಿ ಸಮಯಕ್ಕನುಗುಣವಾಗ ಅಭ್ಯಾಸ ಹಾಗೂ ಪಠಣ ಮಾಡುವಂತಹ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಅತೀಯಾದ ಮೊಬೈಲ್ ಬಳಕೆಯಿಂದ ವಿದ್ಯಾಥರ್ಿಗಳ ಬುದ್ಧಿಮಟ್ಟವೂ ಕ್ಷೀಣಿಸಿ ನಿದ್ರಾಹೀನ ಸ್ಥಿತಿಗೆ ತಲಪುತ್ತಾರೆ. ಅವಶ್ಯಕತೆಗನುಗುಣವಾಗಿ ಮಾತ್ರ ಬಳಕೆ ಮಾಡಿ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಪರೀಕ್ಷೆ ಯದ್ಧವಲ್ಲ. ಅದನ್ನು ಹಬ್ಬದಂತೆ ಸ್ವಾಗತಿಸಿ ಸಂಭ್ರಮಿಸಿ ಆತ್ಮವಿಶ್ವಾಸದಿಂದ ಎದುರಿಸಬೇಕು.
ಮನಸ್ಸಿನಲ್ಲಿ ಗೊಂದಲ, ತಾಪತ್ರಯ ಮುಂತಾದ ಒತ್ತಡಗಳಿಂದ ದೂರವಿದ್ದು, ಜೀವನದಲ್ಲಿ ಏನು ಸಾಧಿಸಬೇಕು, ನಾವು ಏನಾಗಬೇಕು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ಹೇಳಿದ ಪಾಠವನ್ನು ಮನನ ಮಾಡಿಕೊಂಡು ಸ್ಪೂತರ್ಿಯಿಂದ ಪರೀಕ್ಷೆ ಬರೆದಾಗ ಉತ್ತಮವಾದ ಫಲಿತಾಂಶ ಬರುತ್ತದೆ ಎಂದರು.
ಪಾಲಕರು ಮತ್ತು ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಅಸಬೇಕು. ಕೇವಲ ಅಂಕಗಳಿಗೋಸ್ಕರ ಮಕ್ಕಳಿಗೆ ಒತ್ತಡದ ಬದುಕನ್ನು ನೀಡಬಾರದು. ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸವಾಗಬೇಕು.
ಮನೆಯ ಸಂಸ್ಕೃತಿಗೆ ತಕ್ಕ ಹಾಗೆ ಮಕ್ಕಳು ಬೆಳೆಯುತ್ತಾರೆ. ಈನಿಟ್ಟಿನಲ್ಲಿ ಮನೆಯ ಯಜಮಾನರು ತಾಯಂದಿರು, ಸಹೋದರಿಯರು ಸಂಸ್ಕೃತಿ ಸಂಸ್ಕಾರವಂತರಾಗಬೇಕು. ಇದರಿಂದ ಮಕ್ಕಳು ಅದೇ ಮಾರ್ಗದಲ್ಲಿ ಸಾಗಲು ನೆರವಾಗುತ್ತದೆ ಎಂದರು.
ರಾಜ್ಯಪ್ರಶಸ್ತಿ ನಿವೃತ್ತ ಶಿಕ್ಷಕ ಜೆ.ಎಂ.ಮಠದ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ಸಿದ್ದಪ್ಪ ನಾಗನೂರ ಅಧ್ಯಕ್ಷತೆವಹಿಸಿದ್ದರು. ಮುಖ್ಯೋಪಾಧ್ಯಾಯ ಎಂ.ಎಸ್.ಹಲಗೇರಿ, ಪತ್ರಕರ್ತ ಶಿವಕುಮಾರ ಓಲೇಕಾರ, ಶರತ್ ಚಂದ್ರಶೇಖರ, ಎಸ್ಡಿಎಂಸಿ ಉಪಾಧ್ಯಕ್ಷೆ ಸುನಿತಾ ಆನಿಶೆಟ್ರ, ಸದಸ್ಯ ದೇವಿಂದ್ರಪ್ಪ ಹರಿಜನ, ಗ್ರಾಪಂ ಉಪಾಧ್ಯಕ್ಷೆ ರತ್ನವ್ವ ಕರಿಗಾರ, ಸದಸ್ಯರಾದ ಲಕ್ಷ್ಮಣ ದೀಪಾವಳಿ, ಬಸಯ್ಯ ಪೂಜಾರ, ವಿಜಂಅುಲಕ್ಷ್ಮೀ ಮಲ್ಲಾಡದ, ಅಂಗನವಾಡಿ ಶಿಕ್ಷಕಿ ಮಂಜುಳಾ ಪೂಜಾರ, ಸುರೇಶಪ್ಪ ಅಡ್ಡಂಗಡಿ, ದಿಳ್ಳೆಪ್ಪ ದಳವಾಯಿ, ಶಂಭುಲಿಂಗಪ್ಪ ಚಕ್ರಸಾಲಿ, ಗೋವಿಂದಪ್ಪ ಕಾಗದಗಾರ ಸೇರಿದಂತೆ ಪಾಲಕರು, ಪೋಷಕರು ಮತ್ತು ಶಾಲಾ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.