ಅ.1ರಂದು ಮಲ್ಲಿಕಾರ್ಜುನ ಟ್ರೇಡರ್ಸ ಹಾರ್ಡವೇರ್ ಕೇಂದ್ರ ಉದ್ಘಾಟನೆ
Mallikarjuna Traders Hardware Center inaugurated on October 1st
ಅಥಣಿ 28: ರೈತರಿಂದ ವೈಜ್ಞಾನಿಕ ದರದಲ್ಲಿ ಬೆಳೆ, ಕಾಳು, ಕಾಯಿಪಲ್ಯ, ಸೊಪ್ಪುಗಳು ಸೇರಿದಂತೆ ಇತರ ಕೃಷಿ ಉತ್ಪನ್ನಗಳನ್ನು ಖರೀದಿಸಿ ವ್ಹೋಲಸೇಲ್ ದರದಲ್ಲಿ ಗ್ರಾಮೀಣ ಭಾಗದ ಗ್ರಾಹಕರಿಗೆ ಮಾರಾಟ ಮಾಡುವ ಗುರು ಬಸವ ಎಂಟರ್ ಪ್ರೈಸಸ್ ಮತ್ತು ರೈತರಿಗೆ, ಗ್ರಾಮೀಣ ಭಾಗದ ಜನರ ಪಾರ್ಮ ಹೌಸ್ ನಿರ್ಮಾಣದ ಅನಕೂಲಕ್ಕಾಗಿ ಮತ್ತು ಮಲ್ಲಿಕಾರ್ಜುನ ಟ್ರೇಡರ್ಸ ಹಾರ್ಡವೇರ್ ಕೇಂದ್ರವನ್ನು ಅಕ್ಟೋಬರ್ 1ರಂದು ಮುಂಜಾನೆ 10 ಗಂಟೆಗೆ ಹರ ಗುರು ಚರಮೂರ್ತಿಗಳ ಸಾನಿಧ್ಯ ಹಾಗೂ ಶಾಸಕದ್ವಯರ ಉಪಸ್ಥಿತಿಯಲ್ಲಿ ಮದಭಾವಿ ಗ್ರಾಮದ ಬೀರೇಶ್ವರ ಸರ್ಕಲ್‌ನಲ್ಲಿ ಲೋಕಾರೆ್ಣ ಗೊಳಿಸಲಾಗುವುದು ಎಂದು ಪ್ರಗತಿ ಪರ ರೈತ ಅರ್ಜುನ ಇಬ್ರಾಹಿಂಪುರ ತಿಳಿಸಿದರು.
ಸಾನಿಧ್ಯವನ್ನು ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬನಹಟ್ಟಿ ಹಿರೇಮಠದ ಶರಣ ಬಸವ ಶಿವಾಚಾರ್ಯ ಸ್ವಾಮೀಜಿ, ಹಣಮಾಪುರದ ಸಿದ್ಧಸಿರಿ ಸಿದ್ಧಾಶ್ರಮದ ಅಮರೇಶ್ವರ ಮಹಾರಾಜರು ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ರಾಜು ಕಾಗೆ, ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ, ಗಣೇಶ ಹುಕ್ಕೇರಿ, ಮೀರಜ ಶಾಸಕ ಸುರೇಶ ಖಾಡೆ, ಮಾಜಿ ಸಚಿವ ಶ್ರೀಮಂತ ಪಾಟೀಲ, ಬಿಜೆಪಿ ಧುರೀಣ ವಿಜಯಗೌಡ ಪಾಟೀಲ ಆಗಮಿಸಲಿದ್ದಾರೆ ಎಂದರು.
ಅತಿಥಿಗಳಾಗಿ ನಾಡಿನ ಅನೇಕ ಪ್ರಮುಖ ನಿವೃತ್ತ ನ್ಯಾಯಾಧೀಶರು, ನ್ಯಾಯವಾದಿಗಳು, ಮದಭಾವಿ ಗ್ರಾಮದ ಗಣ್ಯರು, ಸರಕಾರಿ ನೌಕರರು, ಅಧಿಕಾರಿಗಳು, ವೈದ್ಯರು, ಬ್ಯಾಂಕುಗಳ ವ್ಯವಸ್ಥಾಪಕರು, ಅಧಿಕಾರಿಗಳು, ಅಥಣಿ ಶುಗರ್ಸ ಅಧಿಕಾರಿಗಳು, ಉದ್ಯಮಿಗಳು, ಮಾಜಿ ಸೈನಿಕರು, ಶಿಕ್ಷಕರು ಮತ್ತು ಪ್ರಗತಿ ಪರ ರೈತರು ಆಗಮಿಸಲಿದ್ದಾರೆ ಎಂದರು.
ಮದಭಾವಿ ಗ್ರಾಮದ ಉದ್ಯಮಿ ಆರ್.ಎಮ್.ಪಾಟೀಲ ಮಾತನಾಡಿ, ಅರ್ಜುನ ಇಬ್ರಾಹಿಂಪುರ ರೈತರಿಗೆ, ಸಾಮಾನ್ಯ ಗ್ರಾಹಕರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಉದ್ಯಮ ಪ್ರಾರಂಭಿಸುತ್ತಿದ್ದು, ಇವರ ಕಾರ್ಯಕ್ಕೆ ಸಹಕಾರ ನೀಡಿ ಕೈ ಜೋಡಿಸಬೇಕು ಎಂದು ರೈತರಲ್ಲಿ, ಗ್ರಾಮಸ್ಥರಲ್ಲಿ ಮನವಿ ಮಾಡಿದ ಅವರು ಅರ್ಜುನ ಇಬ್ರಾಹಿಂಪುರ ಮದಭಾವಿ ಗ್ರಾಮದಲ್ಲಿ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಮೊದಲಿಗರಾಗಿದ್ದಾರೆ ಎಂದರು.
ದರ್ಶನ ಇಬ್ರಾಹಿಂಪುರ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 