ಹಾವೇರಿ೦೩ : ಕೃಷಿ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರತ್ಯೇಕ ಪಠ್ಯ ಕ್ರಮವನ್ನು ಒಂದನೇ ತರಗತಿಯಿಂದಲೇ ಅಳವಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪತ್ರವನ್ನು ಬರೆದಿರುವುದಾಗಿ ನಗರದ ಹರಸೂರು ಬಣ್ಣದಮಠದ ಮಲ್ಲಿಕಾಜರ್ುನ ಸ್ವಾಮೀಜಿಗಳ 34ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾವರು ಹೇಳಿದರು.
ಶ್ರೀಗಳು ಒಂದನೇ ತರಗತಿಯಿಂದಲೇ ಕೃಷಿ ಸಂಬಂಧಿಸಿದ ವಿಷಯವನ್ನು ಪಠ್ಯ ಕ್ರಮದಲ್ಲಿ ಅಳವಡಿಸುವಂತೆ ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೆ ಬರೆದ ಪತ್ರಕ್ಕೆ ಇಂದಿನವರೆಗೂ ಅವರಿಂದ ಉತ್ತರ ಬಂದಿಲ್ಲ ಆದರೂ ಈ ಕುರಿತು ಇವರು ಗಂಭೀರವಾದ ಚಿಂತನೆಯನ್ನು ಮಾಡುತ್ತಾರೆಂಬ ಭಾವನೆ ನಮ್ಮಲ್ಲಿದೆ ಎಂದು ತಿಳಿಸಿದರು.
ಪಠ್ಯ ಕ್ರಮದಲ್ಲಿ ಕನ್ನಡ, ಗಣಿತ, ವಿಜ್ಞಾನ, ಸಮಾಜ ಶಾಸ್ತ್ರಗಳಿಗೆ ಪ್ರತ್ಯೇಕ ಪಠ್ಯ ಕ್ರಮವಿರುವಂತೆ ಆಯಾ ವಿಷಯಕ್ಕೆ ತಕ್ಕಂತೆ ವಿಷಯಗಳನ್ನು ಅಳವಡಿಸಲಾಗಿದೆ. ಆದರೆ ಕೃಷಿಯ ವಿಷಯವನ್ನು ಅಧ್ಯಯನ ಮಾಡಬೇಕಾದರೆ ಪಿಯುಸಿ ನಂತರದ ಕೃಷಿ ಪದವಿಯಿಂದ. ಆದರೆ, ಕೃಷಿ ವಿಷಯವನ್ನು ಮೊದಲನೇ ತರಗತಿಯಿಂದಲೇ ಪಠ್ಯ ಕ್ರಮದಲ್ಲಿ ಅಳವಡಿಸಬೇಕು ಎಂದು ತಿಳಿಸಿದರು.
ಕೃಷಿ ವಿಷಯವನ್ನು ಬಡವ ಬಲ್ಲಿದ ಎನ್ನದೇ ಎಲ್ಲರೂ ಕೃಷಿ ಶಾಸ್ತ್ರ ಅಧ್ಯಯನ ಮಾಡಿದರೆ ಮಾತ್ರ ನೂರು ವಿದ್ಯಾಥರ್ಿಗಳಲ್ಲಿ ಐದು ಜನರಾದರೂ ರೈತರಾಗುವುದಕ್ಕೆ ಮನಸ್ಸು ಮಾಡುತ್ತಾರೆ. ಇಂದಿನ ಜನಾಂಗಕ್ಕೆ ಕೃಷಿ ಕುರಿತಾದ ಜಾಗೃತಿ ಮೂಡುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಕೃಷಿ ಪ್ರಧಾನ ಬಾಗಿರುವ ಭಾರತದಲ್ಲಿ ಸಕರ್ಾರಗಳು ಕೃಷಿಗೆ ವಿಶೇಷವಾದ ಪ್ಯಾಕೇಜ್ ಕೊಡಬೇಕು, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ಕೊಡಬೇಕು, ಮಧ್ಯವತರ್ಿಗಳ ಹಾವಳಿಯನ್ನು ತಪ್ಪಿಸಬೇಕು, ಅದರ ಜೊತೆಗೆ ಬಡ್ಡಿ ಚಕ್ರ ಬಡ್ಡಿಯ ರೂಪದಲ್ಲಿ ತರುವ ಸಾಲವನ್ನು ತಪ್ಪಿಸಿ ಸಣ್ಣ ಮತ್ತು ಮಧ್ಯಮ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಬೇಕಾದಷ್ಟು ಸಾಲ ನೀಡುವ ವ್ಯವಸ್ಥೆಯನ್ನು ಮಾಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಕೃಷಿ ಸಂಕಷ್ಟಕ್ಕೆ ಸಿಲುಕಿ ಬೇರೆ ದೇಶಗಳಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವ ಸ್ಥಿತಿ ಬರಬಹದು.
ಎಲ್ಲರೂ ತಮ್ಮ ಮಕ್ಕಳು ಇಂಜನೀಯರ್, ಡಾಕ್ಟರ ಆಗಬೇಕೆಂಬ ಕನಸನ್ನು ಕಾಣುತ್ತಾರೆ, ಎಲ್ಲರೂ ಇಂಜನೀಯರ, ಡಾಕ್ಟರ ಆದರೆ ರೈತರಾಗುವವರು ಯಾರು ಎಂಬ ಪ್ರಶ್ನೆಯನ್ನು ಪಾಲಕರು ಕಂಡುಕೊಳ್ಳಬೇಕು. ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವತ್ತ ಪಾಲಕರು ಗಮನಹರಿಸಬೇಕು ಎಂದು ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾವರು ಶಿಕ್ಷಣ ಹಾಗೂ ಕೃಷಿ ಪ್ರೇರಣಾ ಮಾತನಾಡಿದರು.