ಬೆನಕನಹಳ್ಳಿ ಗ್ರಾಮದ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ
Mallikarjuna Jatra Festival in Benakanahalli village
ಲೋಕದರ್ಶನ ವರದಿ
ತಾಂಬಾ 04: 12ನೇ ಶತಮಾನದ ಶರಣರು ಕಾಯಕ ಹಾಗೂ ದಾಸೋಹ ತತ್ವಗಳನ್ನು ಮನುಕುಲಕ್ಕೆ ನೀಡಿದ ಅಮುಲ್ಯ ರತ್ನಗಳು ನಾವು ಸತ್ಯ ನಿಷ್ಠೆ ಕಾಯಕ ದಾಸೋಹ ತತ್ವದ ಮುಖಾಂತರ ಸರ್ವರನ್ನು ಪ್ರೀತಿಯಿಂದ ಬದುಕುವ ದಾರಿಯನ್ನು ತೋರಿದ ಶರಣರ ಚಿಂತನೆಗಳು ನಮಗೆ ದಾರಿ ಧೀಪವಾಗಿವೆ ಎಂದು ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಹೇಳಿದರು.
ಬೆನಕನಹಳ್ಳಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದ ಅಂಗವಾಗಿ ಮುತೈದೆಯರಿಗೆ ಉಡಿತುಂಬುವ ಹಾಗೂ ಸೋಲ್ಲಾಪುರದ ಶ್ರೀ ಸಿದ್ದರಾಮೇಶ್ವರ ಮಹಾಪುರಾಣದ ಕಾರ್ಯಕ್ರಮದ ಧರ್ಮಸಭೆಯಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಅವರು ಧಾರ್ಮಿಕತೆಯನ್ನು ಬೆಳಿಸಿಕೊಂಡು ಹೊಗಲು ಇಂದಿನ ಯುವಪಿಳ್ಳಿಗೆ ಮುಂದಾಗಬೇಕಿದೆ. ಯಾವುದೆ ಕೇಲಸ ವೀರಲಿ ಕೀಳಾಗಿ ನೋಡದೆ ಕಾರ್ಯಗಳನ್ನು ಮಾಡಿದಾಗ ನೇಮ್ಮದಿ ಬದುಕು ಸಾಗಿಸಲು ಸಾಧ್ಯ ಎಂದರು.
ಎಮ್.ಎಸ್.ಪೂಜಾರಿ ಮಾತನಾಡಿ ಭಾರತೀಯ ಸಂಸ್ಕೃತಿ ಉಳಿಸಿ ಬೇಳಿಸುವ ಕಾರ್ಯ ನಾವೆಲ್ಲರು ಮಾಡಬೇಕಾಗಿದೆ. ಇಂದು ನಮ್ಮ ಹೇಣ್ಣುಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಇಂದಿನ ಯುವಜನಾಂಗಕ್ಕೆ ನಮ್ಮ ಸಂಸ್ಕೃತಿ ಹೆಂತ್ತದ್ದು ಎಂಬುವದನ್ನು ತೊರಿಸಿ ಕೊಟ್ಟ ಗ್ರಾಮಸ್ಥರ ಕಾರ್ಯ ಶ್ಲಾಘನಿಯ ಎಂದರು.
ಪ್ರವಚನ ಕಾರರಾದ ಸಿದ್ದರಾಮ ಶಿವಯೋಗಿಗಳು ಸಾನಿಧ್ಯವಹಿಸಿ ಆಶಿರ್ವಚನ ನೀಡಿದರು. ರಾಜಶೇಖರ ಹೊಸಮನಿ, ಮಲ್ಲು ಹೊಸಮನಿ, ಕಾಸು ಹಚ್ಚಡದ, ಬೀರ್ಪ ಪೂಜಾರಿ, ಜಗು ಚಿಮ್ಮಗೊಳ, ಸಂಗಪ್ಪ ಅಂಕಲಗಿ, ಸಿ.ಕೆ.ಮಸಳಿ ಸೆರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 