ಮಾಳನಾಯಕನಹಳ್ಳಿ ರಾಷ್ಟ್ರೀಯ ಸೇವಾ ಯೋಜನಾ ಶಿಬಿರ ಇಂದಿನಿಂದ ಆರಂಭ
Malanayakanahalli National Service Scheme camp begins today
ರಾಣೆಬೆನ್ನೂರು 27 : ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಅಭಿಮಾನದ ಬದುಕು ಇಂದಿಗೂ ಕಾಣಬೇಕಾದರೆ ಗ್ರಾಮೀಣ ಸಂಸ್ಕೃತಿಯ ಭಾವೈಕ್ಯತೆಯ ಬದುಕು ಮಾದರಿಯಾಗಿದೆ ಎಂದು ಎಸ್ ಎಸ್ ಬ್ಯಾಂಕ್ ಅಧ್ಯಕ್ಷ, ಉದ್ಯಮಿ ಎಲ್ಲಪ್ಪರೆಡ್ಡಿ ರಡ್ಡೇರ ಹೇಳಿದರು.
ಅವರು ಗುರುವಾರ ರಾತ್ರಿ ತಾಲೂಕಿನ ಮಾಳನಾಯಕಹಳ್ಳಿ ಗ್ರಾಮದಲ್ಲಿ, ರಾಣೆಬೆನ್ನೂರು ಬಿ. ಎ. ಜೆ. ಎಸ್ ಎಸ್. ಮಹಿಳಾ ಮಹಾ ವಿದ್ಯಾಲಯದ, ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತಿ ಆಚಾರ ವಿಚಾರ ಮತ್ತು ಸಂಪ್ರದಾಯ ಭಾರತೀಯರ ಪರಂಪರೆ. ಪರಂಪರೆಯ ಬದುಕಿನಲ್ಲಿ ಸಂತೃಪ್ತಿ ಕಾಣುವುದೇ ನಿಜವಾದ ಮಾನವೀಯ ಧರ್ಮವಾಗಿದೆ ಅದೇ ರೀತಿ ಗ್ರಾಮ ಸಂಸ್ಕೃತಿ ಬಹುದೊಡ್ಡ ಸಂಸ್ಕೃತಿಯಿಂದ ಇಂದಿಗೂ ಕೂಡಿರುವುದು ಮಾನವನ ಮಾನಸಿಕ ಶಾಂತಿ ಮತ್ತು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದರು.
ಕಾಲೇಜು ಆಡಳಿತ ಮಂಡಳಿ ಸದಸ್ಯ, ನಿವೃತ್ತ ಉಪನ್ಯಾಸಕ ಕೆ.ಕೆ. ಹಾವಿನಹಾಳ ಅವರು ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದ ನಾಗರಿಕರು, ಸಂಸ್ಕೃತಿ ಮತ್ತು ಸಮಾನತೆ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಜೀವನ ಕೌಶಲ್ಯ ಇಂದಿಗೂ ಗ್ರಾಮಾಂತರದಲ್ಲಿ ಜೀವಂತವಾಗಿದೆ ಅದುವೇ ನಿಜವಾದ ಸಂಸ್ಕೃತಿಯಾಗಿದೆ, ಮಹಿಳೆಯರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಸಾಗಬೇಕಾದ ಇಂದಿನ ಅಗತ್ಯವಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ. ಸುರೇಶ್ ಬಣಕಾರ ಅವರು ವಿದ್ಯಾರ್ಥಿಗಳು ಭಾರತೀಯ ನೆಲದ ಸಂಸ್ಕೃತಿ ಪರಂಪರೆ ಅಳವಡಿಸಿಕೊಂಡು ಸಾಗಬೇಕು. ಹುಟ್ಟಿದ್ದು ಇಲ್ಲೇ, ಅಂತಿಮವಾಗಿ ಜೀವನ ಮುಕ್ತಿ ಕಾಣಬಹುದು ಇಲ್ಲೇ. ಸಂತೃಪ್ತಿಯ ಜೀವನ ಮಾನಸಿಕ ನೆಮ್ಮದಿಯಿಂದ ಮಾತ್ರ ಕಾಣಲು ಸಾಧ್ಯ ಅದಕ್ಕಾಗಿ ಗ್ರಾಮೀಣ ಬದುಕಿನ ಅರಿವು ಮೂಡಿಸಲು ಇಂತಹ ಶಿಬಿರಗಳು ಆಯೋಜಿಸುತ್ತಿರುವುದಾಗಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪೃಥ್ವಿರಾಜ್ ಕಟ್ಟಿಮನಿ ಅವರು, ಸಂಪ್ರದಾಯದಂತೆ ಕಾಲೇಜಿನ ವತಿಯಿಂದ ಶಿಬಿರ ಆಯೋಜಿಸಿದ್ದು, ವಾರಗಳ ಕಾಲ ನಡೆಯಲಿದೆ. ನಿತ್ಯವೂ ಗ್ರಾಮೀಣ ಬದುಕಿನ ಅರಿವು, ಪರಿಸರ ಸ್ವಚ್ಛತೆ, ಜಾಗೃತೆ, ಶ್ರಮದಾನ, ಮುಂತಾದ ಕಾರ್ಯಕ್ರಮ ಜರುಗಲಿದೆ. ಗ್ರಾಮೀಣ ನಾಗರಿಕರು ಯಶಸ್ವಿಗೆ ಸಹಕರಿಸಬೇಕು ಎಂದು ಕೋರಿದರು. ಶಿಬಿರಾರ್ಥಿಗಳು ಎನ್‌ಎಸ್‌ಎಸ್ ಗೀತೆ ಹಾಡಿದರು.
ಮಂಜುಳಾ ವಡೇನಪ್ಪನವರ ಸ್ವಾಗತಿಸಿ, ಡಾ. ಹನುಮಂತಪ್ಪ ಬ್ಯಾಡಗಿ ನಿರೂಪಿಸಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ರಾಜೀವ್ ಎಂ. ವಂದಿಸಿದರು. ಇಂದಿನಿಂದ ಆರಂಭವಾಗಿರ ಶಿಬಿರದಲ್ಲಿ ಕಾಲೇಜಿನ 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 