ಮಲಾಬಾದ: ಅಗ್ರಾಣಿ ಹಳ್ಳದ ಮೇಲೆ 2 ಕೋಟಿ ರೂ. ವೆಚ್ಚದ ಬ್ರಿಜ್ ಕಮ್ ಬಂದಾರ ಕಾಮಗಾರಿ ಪ್ರಾರಂಭ

ಮಲಾಬಾದ: ಅಗ್ರಾಣಿ ಹಳ್ಳದ ಮೇಲೆ 2 ಕೋಟಿ ರೂ. ವೆಚ್ಚದ ಬ್ರಿಜ್ ಕಮ್ ಬಂದಾರ ಕಾಮಗಾರಿ ಪ್ರಾರಂಭ   Malabada: Bridge cum port work on Agrani river worth Rs 2 crore begins

ಲೋಕದರ್ಶನ ವರದಿ 

ಸಂಬರಗಿ 15: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಚುನಾವಣೆಯಲ್ಲಿ ನೀಡಿರುವ ಭರವಸೆಯನ್ನು ಪೂರ್ಣಗೊಳಿಸಿ ಜನರ ಮೆಚ್ಚುಗೆಯನ್ನು ಪಡೆದಿದ್ದಾರೆ ಎಂದು ಮಲಾಬಾದ ಗ್ರಾಮದ ಕಾಂಗ್ರೆಸ್ ಮುಖಂಡ ಆಸೀಫ ಘಟನಟ್ಟಿ ಹೇಳಿದರು. ಮಲಾಬಾದ ಗ್ರಾಮದಲ್ಲಿ ಅಗ್ರಾಣಿ ಹಳ್ಳದ ಮೇಲೆ 2 ಕೋಟಿ ರೂ. ವೆಚ್ಚದ ಬ್ರಿಜ್ ಕಮ್ ಬಂದಾರ ಕಾಮಗಾರಿ ಚಾಲನೆ ನೀಡಿ ಮಾತನಾಡಿ ಅವರು ಸರಕಾರದ 5 ಗ್ಯಾರಂಟಿಗಳಿಂದ ಜನರ ವಿಶ್ವಾಸಕ್ಕೆ ಪಾತ್ರವಾಗಿದ್ದು, ಗಡಿಭಾಗದ ಬಸವೇಶ್ವರ ಏತ ನೀರಾವರಿ, ಕೆರೆ ತುಂಬುವ ಯೋಜನೆ, ಹಲವಾರು ನೀರಾವರಿ ಯೋಜನೆಗಳ ಕಾಮಗಾರಿ ಶೀಘ್ರದಲ್ಲಿ ಸಾಗುತ್ತಿದ್ದಾವೆ. ನೀರಾವರಿ ಯೋಜನೆ ಪೂರ್ಣಗೊಂಡ ನಂತರ ಈ ಭಾಗ ಪೂರ್ಣವಾಗಿ ಬರಗಾಲ ಮುಕ್ತವಾಗುತ್ತದೆ. ಶಾಸಕ ರಾಜು ಕಾಗೆ ಇವರ ಸತತ ಪ್ರಯತ್ನದಿಂದ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿವೆ.

ಶಾಲಾ ಕೊಠಡಿಗಳು, ಸಮುದಾಯ ಭವನಗಳು, ದೇವಸ್ಥಾನ ಕಟ್ಟಡಗಳು, ರಸ್ತೆ ಡಾಂಬರಿಕರಣ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಈ ಬಂದಾರನಿಂದ ಮಳೆಗಾಲದಲ್ಲಿ ಮಹಾರಾಷ್ಟ್ರ ರಾಜ್ಯದಿಂದ ಬರುವ ನೀರನ್ನು ತಡೆಗಟ್ಟಿದ ನಂತರ ಸುತ್ತಮುತ್ತಲು ಇರುವ ತೆರೆದ ಬಾವಿ, ಕೊಳವೆ ಬಾವಿಗಳಿಗೆ ನೀರನ ಮಟ್ಟ ಹೆಚ್ಚುತ್ತದೆ. ಈ ಬಂದಾರಿನಿಂದ ಈ ಗ್ರಾಮಕ್ಕೆ ಭಾರಿ ಅನುಕೂಲವಾಗುತ್ತದೆ ಎಂದು ಹೇಳಿದರು. ಈ ವೇಳೆ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು ಮಂಜುನಾಥಗೌಡ ಪಾಟೀಲ, ಶಿವಾನಂದ ಕುಳ್ಳೊಳ್ಳಿ, ರಾಮು ಕುಳ್ಳೊಳ್ಳಿ, ರಾಜು ಕಾಂಬಳೆ, ಸಿದ್ರಾಯ ಗಸ್ತಿ, ಶ್ರೀಶೈಲ ಕುಳ್ಳೊಳ್ಳಿ, ಗಪೂರ ಮುಲ್ಲಾ, ರಸೀದ ಮುಲ್ಲಾ, ಮಹಾದೇವಗೌಡ ಪಾಟೀಲ, ರಮೇಶ ಹೊನ್ನಬನ್ನಿ, ಗುತ್ತಿಗೆದಾರ ಸದಾಶಿವ ದಳವಾಯಿ, ಭೀಮಪ್ಪ ಬರಲಿ, ಜೆ.ಎಚ್‌. ಆಸಂಗಿ ಸೇರಿದಂತಹ ಗಣ್ಯಮಾನ್ಯರು ಉಪಸ್ಥಿತ ಇದ್ದರು.