ಮಕ್ಳಳ ದಿನಾಚರಣೆ, ಶಿಕ್ಷಕರ ಪೋಷಕರ ಮಹಾಸಭೆ

ಮಕ್ಳಳ ದಿನಾಚರಣೆ, ಶಿಕ್ಷಕರ ಪೋಷಕರ ಮಹಾಸಭೆ  Maklala Day celebration, Teachers' Parents' General Assembly

                 ಯಮಕನಮರಡಿ, 18 : ಸ್ಥಳೀಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ  ಪಂಡಿತ ಜವಹರಲಾಲ ನೆಹರು ಅವರ ಜನ್ಮದಿನಾಚರಣೆ ನಿಮಿತ್ಯ ಮಕ್ಕಳ ದಿನಾಚರಣೆ ಹಮ್ಮಿಕೊಳ್ಳಲಾಯಿತು. ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶನದಂತೆ 2025 ರ ಮಕ್ಳಳ ದಿನಾಚರಣೆ ಶಿಕ್ಷಕರ ಪೋಷಕರ ಮಹಾಸಭೆ ಎಂಬ ಹೆಸರಿನಲ್ಲಿ ಆಚರಿಸಲಾಯಿತು.   

                ಕಾರ್ಯಕ್ರಮವು ಜವಹರಲಾಲ ನೆಹರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಪ್ರಾಚಾರ್ಯರಾದ ಎಸ್‌.ಎ. ರಾಮನಕಟ್ಟಿ ಚಾಲನೆ ನೀಡಿದರು. ಎಸ್‌.ಆರ್‌.ತಬರಿ ಕಾರ್ಯಕ್ರಮವನ್ನು ನಿರೂಪಿಸುತ್ತ  ಭಾರತದ ಪ್ರಥಮ ಪ್ರಧಾನಮಂತ್ರಿ ಶ್ರೀ.ಜವಹರಲಾಲ ನೆಹರು ಅವರ 1889 ನವಂಬರ್  14ರಂದು ಅಲಹಾಬಾದ್ ನಲ್ಲಿ ಜನಿಸಿದರು ತಂದೆ ಪಂಡಿತ್ ಮೋತಿಲಾಲ್ ನೆಹರು ಒಬ್ಬ ಉನ್ನತ ವಕೀಲರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೆಂಬರ್‌. ತಾಯಿ ಸ್ವರೂಪರಾಣಿ. ನಂತರ ಇಂಗ್ಲೆಂಡಿಗೆ ತೆರಳಿ ಹ್ಯಾ.ರೂ  ಸ್ಕೂಲ್ ಲಂಡನ್ ನಲ್ಲಿ ಕಾನೂನು ಅಧ್ಯಯನ ಮಾಡಿದರು ವೃತ್ತಿ ಹೈಕೋರ್ಟಿನಲ್ಲಿ ವಕೀಲರಾಗಿ ರಾಜಕೀಯ ಪ್ರವೇಶ 1912 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. 

               ವ್ಯಕ್ತಿ ಸತ್ಯಾಗ್ರಹ ಎರಡನೇ ಮಹಾಯುದ್ಧದಲ್ಲಿ ಸಪ್ಟೆಂಬರ್ 1.. 1939 ರಲ್ಲಿ ಭಾರತವನ್ನು ಬಲವಂತವಾಗಿ ಭಾಗವಹಿಸಿದರು ಅನೇಕ ಬಾರಿ ಜೈಲಿಗೆ ಹೋದರು ಕ್ವಿಟ್ ಇಂಡಿಯಾ ನಿರ್ಣಯ ಅಗಸ್ಟ್‌ 8. 1942 ಮಂಡಿಸಿದರು ಸೆರೆ ವಾಸ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ 9 ಬಾರಿ ಸೆರೆವಾಸ ಅನುಭವಿಸಿದರು ಕೊನೆಯ ಮತ್ತು ದೀರ್ಘ ಅವಧಿಯ ಅಹಮದಾ ನಗರ ಕೋಟೆಯಲ್ಲಿತ್ತು ಪ್ರಮುಖ ಸಾಧನೆಗಳು 1947ರಲ್ಲಿ ಭಾರತ ಸ್ವತಂತ್ರವಾದಾಗ ಮೊದಲ ಪ್ರಧಾನ ಮಂತ್ರಿ. ನಾಯಕತ್ವ ಸಮಾಜವಾದ ಪ್ರಜಾಪ್ರಭುತ್ವ ಜಾತ್ಯತೀತ ಅಲಿಪ್ತ ಚಳವಳಿ ಸಹಸ್ತಾಪಿಸಿದರು  ಶಿಕ್ಷಣ  ಐ. ಐ. ಟಿ. ಮತ್ತು ಐ. ಐ. ಎಂ. ಸಂಸ್ಥೆಗಳ ಸ್ಥಾಪನೆ ಭಾರತೀಯ ಸಂಸ್ಕೃತಿಯಲ್ಲಿ ಆಸಕ್ತಿ ಹೊಂದಿದರು ಪಶ್ಚಿಮಾತ್ಯ ಸಂಸ್ಕೃತಿ ಪ್ರಭಾವವನ್ನು ಒಪ್ಪಿಕೊಂಡಿದ್ದರು ಪತ್ನಿ ಕಮಲಾ ನೆಹರು ಮಗಳು ಇಂದಿರಾ ಗಾಂಧಿ ಸಹೋದರಿ ವಿಜಯಲಕ್ಷ್ಮಿ ಹೀಗೆ ಅವರ ಬಾಲ್ಯ ಜೀವನದ ಕುರಿತು ಹಾಗೂ ಅವರ ಕೊಡುಗೆಗಳ ಬಗ್ಗೆ ತಿಳಿಸಿದರು.  

                 ಕಾರ್ಯಕ್ರಮದ ಅತಿಥಿಗಳಾಗಿ ಉಪನ್ಯಾಸಕರಾದ  ಬಿ.ಬಿ.ಕೊಡ್ಲಿ ಮಾತನಾಡುತ್ತ ಮಕ್ಳಳ ಬೆಳವಣಿಗೆಯಲ್ಲಿ ಮನೆಯೇ ಮೊದಲು ಪಾಠಶಾಲೆ ಜನನಿ ತಾನೇ ಮೊದಲ ಗುರು ಎಂಬಂತೆ   ಪಾಲಕರು ಹಾಗೂ ಸುತ್ತ ಮುತ್ತಲಿನ ಪರಿಸರ ಸಾಕಷ್ಟು ಪ್ರಭಾವ ಬೀರುತ್ತದೆ. ಸರ್ಕಾರವು ಮಕ್ಕಳ ಏಳಿಗೆ ಗಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದು ಅವುಗಳ ಸದುಪಯೋಗ ಮಕ್ಕಳಿಗೆ ನೀಡಿ ಅವರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಾಲಕರು ಮತ್ತು ಶಿಕ್ಷಕರು ಪ್ರಧಾನ ಪಾತ್ರವಹಿಸಬೇಕು. ಕಾರ್ಯಕ್ರಮದಲ್ಲಿ ಪಾಲಕರು ಭಾಗವಹಿಸಿ ತಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿದರು.  

              ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಸ.ಎ.ರಾಮನಕಟ್ಟಿ ಮಾತನಾಡಿ ನಮ್ಮ ಕಾಲೇಜಿನಲ್ಲಿ ಎಲ್ಲ ಸೌಲಭ್ಯಗಳು ಇದ್ದು ಇದರ ಸದುಪಯೋಗ ಪಡಿಸಿಕೊಂಡು ಮೇಲಿಂದ ಮೇಲೆ ಕಾಲೇಜಿಗೆ ಬಂದು ತಮ್ಮ ಮಕ್ಕಳ ಪ್ರಗತಿ ಪರೀಶೀಲನೆ ಮಾಡಬೇಕು ಎಂದು ತಿಳಿಸಿದರು.       ಉಪನ್ಯಾಸಕಿ ಕು.ಜಿ.ಜಿ.ಮಠಪತಿ ವಂದನೆಗಳನ್ನು ಸಲ್ಲಿಸದರು. ಪಾಲಕರು ಕಾಲೇಜಿನ ಎಲ್ಲ ವಿದ್ಯಾರ್ಥಿಗಳು, ಪಾಲಕರು ಹಾಗೂ ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.