ಅಬಕಾರಿ ಇ-ಹರಾಜು ಪ್ರಕ್ರಿಯೆ ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳಿ- ಸಿಇಒ ರುಚಿ ಬಿಂದಲ್
Make the most of the Excise e-auction process workshop - CEO Ruchi Bindal
ಹಾವೇರಿ 06 : ಅಬಕಾರಿ ಇಲಾಖೆಯ ಇ ಹರಾಜು ಸನ್ನದು ನೋಂದಣಿ ತರಬೇತಿ ಕಾರ್ಯಗಾರದ ಸದುಪಯೋಗವನ್ನು ಪ್ರತಿ ಬಿಡ್ದುದಾರರು ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರುಚಿ ಬಿಂದಲ್ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ರಾಜ್ಯ ಅಬಕಾರಿ ಇಲಾಖೆ, ಡೆಪ್ಯೂಟಿ ಕಮಿಷನರ್ ಆಫ್ ಎಕ್ಸೈಜ್ ಹಾವೇರಿ ಮತ್ತು ಗದಗ ಇವರ ವತಿಯಿಂದ ಆಯೋಜಿಸಿದ್ದ ಅಬಕಾರಿ ಸನ್ನದುಗಳ ಇ - ಹರಾಜು ಪ್ರಕ್ರಿಯೆ ಕುರಿತು ಸಾರ್ವಜನಿಕರಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಆಯೋಜಿಸಿರುವ ಕಾರ್ಯಗಾರವು ನೊಂದಾಯತ ಬಿಡ್ದುದಾರರು ಹಾಗೂ ಹೊಸದಾಗಿ ನೋಂದಣಿ ಮಾಡಿಕೊಳ್ಳುವವರಿಗೆ ತುಂಬಾನೇ ಅನುಕೂಲವಾಗಲಿದೆ ಎಂದರು.
ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಅಶ್ವಿನಿ .ಬಿ.ಎಂ ಮಾತನಾಡಿ, ಕರ್ನಾಟಕದಲ್ಲಿ ಅಬಕಾರಿ ಇಲಾಖೆಯು ಉಳಿಕೆ, ಖಾಲಿ ಇರುವ ಒಟ್ಟು 569 ಮದ್ಯದ ಸನ್ನದುಗಳನ್ನು (ಅಐ-2ಂ, ಅಐ-9ಂ) ಒಖಖಿಅ ಪೋರ್ಟಲ್ ಮೂಲಕ ಪಾರದರ್ಶಕವಾಗಿ ಇ-ಹರಾಜು ಮಾಡಲು ತೀರ್ಮಾನಿಸಿದೆ. ಈ ಕುರಿತು ಸಾರ್ವಜನಿಕರು ಹಾಗೂ ಬಿಡ್ಡರುಗಳು ತರಬೇತಿ ಕಾರ್ಯಾಗಾರವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸರ್ಕಾರದ ಅಧಿಸೂಚನೆಯಂತೆ ಹಾವೇರಿ ಜಿಲ್ಲೆಯಲ್ಲಿ 14 ಅಬಕಾರಿ ಸನ್ನದುಗಳು ಮತ್ತು ಗದಗ ಜಿಲ್ಲೆಯಲ್ಲಿ 08 ಅಬಕಾರಿ ಸನ್ನದುಗಳು ಇಹಿಹರಾಜಿಗೆ ಲಭ್ಯವಿದ್ದು, ರಾಜ್ಯದಲ್ಲಿ ಅನ್ಯ ಕಾರಣಗಳಿಂದ ಅಬಕಾರಿಗಳ ಸನ್ನದುಗಳ ಹರಾಜು ನಡೆದಿಲ್ಲ ಹೀಗೆ ವಿವಿಧ ಕಾರಣಗಳಿಗೆ ಖಾಲಿ ಇರುವ ಸನ್ನದುಗಳ ಇಹಿಹರಾಜು ನಡೆಸಲಾಗುತ್ತಿದೆ. ಹರಾಜು ಪ್ರಕ್ರಿಯೆಯು ಪಾರದರ್ಶಕವಾಗಿ ಮೀಸಲಾತಿಗೆ ಅನುಗುಣವಾಗಿ 5 ವರ್ಷಗಳ ಮಿತಿಗೊಳಪಟ್ಟು ನಡೆಯಲಿದೆ ಎಂದರು.
ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎಲ್ ನಾಗರಾಜ್, ಗದಗ ಜಿಲ್ಲಾ ಡೆಪ್ಯೂಟಿ ಕಮೀಶನರ್ ಆಫ್ ಎಕ್ಸೆಜ್ ಹಾಗೂ ಇ-ಹರಾಜು ನೋಡಲ್ ಅಧಿಕಾರಿಗಳಾದ ಲಕ್ಷ್ಮೀ ಮಾನಪ್ಪ ನಾಯಕ, ಡೆಪ್ಯೂಟಿ ಕಮೀಶನರ್ ಆಫ್ ಎಕ್ಸೆಜ್ ಹಾಗೂ ಇ-ಹರಾಜು ನೋಡಲ್ ಅಧಿಕಾರಿಗಳಾದ ಬಸವರಾಜ .ಹೆಚ್.ಎಂ, ಹಾವೇರಿ ಮತ್ತು ಗದಗ ಜಿಲ್ಲೆಗಳ ಅಬಕಾರಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕ ಬಿಡ್ಡದಾರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 