ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಿ
Make the conference a success by participating in large numbers
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಿ
ಮಾಂಜರಿ 06: ಜೂನ 8ರಂದು ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ರಾಷ್ಟ್ರಸಂತ್ 108 ಆಚಾರ್ಯ ಗುಣಧರ್ ನಂದಿ ಮನಿ ಮಹಾರಾಜರ ನೇತೃತ್ವದಲ್ಲಿ ಸಮಸ್ತ ಕರ್ನಾಟಕ ರಾಜ್ಯದ ಜೈನ್ ಸಮುದಾಯಕ್ಕೆ ಸ್ವತಂತ್ರವಾಗಿ ಜೈನ ಮಹಾಮಂಡಲವನ್ನು ಸ್ಥಾಪನೆ ಮತ್ತು ಜೈನ್ ಸಮಾಜದ ವಿವಿಧ ಬೇಡಿಕೆ ಕುರಿತು ಆಯೋಜಿಸಲಾದ ಸಮಾವೇಶದಲ್ಲಿ ಜೈನ್ ಸಮಾಜದ ಎಲ್ಲ ಮುಖಂಡರು ಯುವಕ ಜಾಗತರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಹಾಗೂ ನಸಲಾಪೂರ ಗ್ರಾಮದ ಮುಖಂಡರಾದ ಭರತೇಶ್ ಬಣವನೆ ಇವರು ಹೇಳಿದರು.
ಅವರು ಶುಕ್ರವಾರದಂದು ನಸಲಾಪುರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾ ಗ್ರಹದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕರ್ನಾಟಕ ರಾಜ್ಯದಲ್ಲಿ ಜೈನ ಸಮಾಜದ ಸಂಖ್ಯೆ 22 ಲಕ್ಷವಿದೆ ಎಂದು ರಾಜ್ಯದ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಸಚಿವರು ಅಧಿವೇಶನದಲ್ಲಿ ಹೇಳಿದ್ದರೂ ಜಾತಿ ಗಣತಿಯಲ್ಲಿ ವ್ಯತಿರಿಕ್ತ ಸಂಖ್ಯೆ ನಮೂದಿಸಿರುವ ಬಗ್ಗೆ ಚರ್ಚಿಸಲಾಗುವುದು. ಇದಲ್ಲದೆ, ಸಮುದಾಯದ ವಿದ್ಯಾರ್ಥಿಗಳಿಗೆ ಸರಕಾರದ ಶಿಷ್ಯವೇತನ, ಕಡು ಬಡವರಿಗೆ ಸಮ್ಮೇದ ಶಿಖರ್ಜಿ ತೀರ್ಥಕ್ಷೇತ್ರ ದರ್ಶನ ವ್ಯವಸ್ಥೆ ಸ್ವತಂತ್ರವಾದ ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಇತ್ಯಾದಿ ಬೇಡಿಕೆ ಕುರಿತು ಮದುವೆಯನ್ನು ರಾಜ್ಯದ ರಾಜ್ಯಪಾಲರಾದ ಥಾವರ್ ಚೆಂದ ಇವರಿಗೆ ಸಲ್ಲಿಸಲಾಗುವುದು ಎಂದರು.
ಅನೇಕ ಜೈನ್ ಮುಖಂಡರು ಹಾಜರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 