ಮಕ್ಕಳಿಗೆ ಪೋಲಿಯೊ ಹನಿ ತಪ್ಪದೆ ಹಾಕಿಸಿ

ಮಕ್ಕಳಿಗೆ ಪೋಲಿಯೊ ಹನಿ ತಪ್ಪದೆ ಹಾಕಿಸಿ Make sure to get polio drops administered to your children without fail.

ಲೋಕದರ್ಶನ ವರದಿ 

ಹೂವಿನಹಡಗಲಿ   29: ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಪಲ್ಸ್‌ ಪೋಲಿಯೋ ಕೇಂದ್ರಗಳಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಯಿತು.ಪಟ್ಟಣದ ತೇರು ಹನುಮಪ್ಪ ದೇವಸ್ಥಾನದಲ್ಲಿ ತೆರೆಯಲಾಗಿದ್ದ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕೇಂದ್ರದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಅಶೋಕ ಮಕ್ಕಳಿಗೆ ಪಲ್ಸ್‌ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ನೋಡಲ್ ಅಧಿಕಾರಿ ಡಾ.ರಾಧಿಕಾ ಮಾತನಾಡಿ, ವಿಶೇಷವಾಗಿ ತಾಲೂಕಿನಾದ್ಯಂತ 0-5 ವಯೋಮಾನದ 19493 ಮಕ್ಕಳಿದ್ದು, ಮಕ್ಕಳಿಗೆ ಲಸಿಕೆ ಹಾಕಲು 199 ಬೂತ್ ಗಳನ್ನು ತೆರೆಯಲಾಗಿದೆ. ಹೆಚ್ಚುವರಿಯಾಗಿ 12 ಟ್ರಾನ್ಸಿಟ್ ಬೂತ್‌ಗಳನ್ನು ವಿವಿಧ ಬಸ್ ನಿಲ್ದಾಣಗಳಲ್ಲಿ ತೆರೆಯಲಾಗಿದೆ.

1 ಮೊಬೈಲ್ ಯೂನಿಟ್ ಇದೆ. ಈ ಎಲ್ಲ ಮಕ್ಕಳಿಗೆ ಶೇ.100ರಷ್ಟು ಸಾಧನೆಯ ಗುರಿ ಹೊಂದಲಾಗಿದೆ. ಭಾನುವಾರ ಸಾಧಿಸಲು ಕ್ರಿಯಾ ಯೋಜನೆ ಮಾಡಲಾಗಿದೆ. ಮುಂದಿನ ಮೂರು ದಿನಗಳು ಮನೆ ಮನೆ ಭೇಟಿ ನೀಡಿ ಪ್ರತಿ ಮಗುವಿಗೂ ಪೋಲಿಯೋ ಲಸಿಕೆ ಹಾಕಲಾಗುತ್ತಿದೆ. ಯಾವುದೇ ಕಾರಣಕ್ಕೂ ಮಗು ಲಸಿಕೆಯಿಂದ ವಂಚಿತರಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು. ಈ ವೇಳೆ ನಾಗತಿ ಬಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ.ಅಪ್ಟಲ್, ಶಿಶು ಅಭಿವೃದ್ಧಿ ಅಧಿಕಾರಿ ರಾಮನಗೌಡ, ಹಿರಿಯ ಆರೋಗ್ಯ ನೀರೀಕ್ಷಕ ಜಿ.ವಿ. ಶಿವಕುಮಾರ್, ಫಾರ್ಮಸಿ ಅಧಿಕಾರಿ ವೈ.ಶಿವಕುಮಾರ್, ಡಾ.ರಮ್ಯಾ, ಡಾ.ಅಕ್ಕಮ್ಮ, ಡಾ. ಕವಿತಾ, ಡಾ.ಅನಿತಾ, ಎಲ್‌.ಎಚ್‌.ವಿ.ರಾಧಾ, ಕ್ಷೇತ್ರ ಕಾರ್ಯಕ್ರಮ ವ್ಯವಸ್ಥಾಪಕ ಬೀರಬ್ಬಿ ಮಹೇಶ್ ಇದ್ದರು.